ಬಹುಭಾಷಾ ಕಲಾವಿದೆ ಮತ್ತು ರೂಪದರ್ಶಿ ವಿದ್ಯಾ ಬಾಲನ್ ಸ್ಲಿಮ್ ಆಗಿದ್ದಾರೆ. ಅವರ ಇತ್ತೀಚಿನ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿವೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಕೆಲವು ದಿನಗಳ ಹಿಂದೆ ಪತ್ರಕರ್ತರು ತಾವು ದಪ್ಪಗಾಗಿರುವ ಕುರಿತು ಪ್ರಶ್ನೆ ಕೇಳಿದ್ದರು. ಅದಕ್ಕೆ ಬೋಲ್ಡ್ ಆಗಿ ಉತ್ತರ ಕೊಟ್ಟಿದ್ದ ವಿದ್ಯಾ ಬಾಲನ್, ತಮ್ಮ ದೇಹ ತಮ್ಮ ಆಯ್ಕೆ ಎಂದು ತಿರುಗೇಟು ನೀಡಿದ್ದರು. ಇದೀಗ ಅವರು ಸ್ಲಿಮ್ ಆಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಭೂಲ್ ಭುಲೈಯಾ 3 ನಲ್ಲಿ ನಟಿಸಲು ವಿದ್ಯಾ ಬಾಲನ್ ಸಜ್ಜಾಗುತ್ತಿರುವಾಗ ಗಮನಾರ್ಹವಾಗಿ ತೂಕ ಇಳಿಸಿದ್ದರು. ಇದೀಗ ಜಾಲತಾಣಗಳಲ್ಲಿ ವಿದ್ಯಾ ಬಾಲನ್ ತೂಕ ಇಳಿಕೆ ಕುರಿತು ಭಾರೀ ಚರ್ಚೆಗಳು ನಡೆದಿವೆ.
ಚಂದು ಚಾಂಪಿಯನ್ ವಿಶೇಷ ಪ್ರದರ್ಶನಕ್ಕಾಗಿ ವಿದ್ಯಾ ರೆಡ್ ಕಾರ್ಪೆಟ್ ಮೇಲೆ ನಡೆದಾಡಿದ ವಿಡಿಯೋಗಳು ವೈರಲ್ ಆಗಿವೆ. ವಿದ್ಯಾ ಬಾಲನ್ ಸ್ಲಿಮ್ ಆಗಿದ್ದಾರೆ. ಇತ್ತೀಚೆಗೆ ವೈದ್ಯಕೀಯ ಚಿಕಿತ್ಸೆಯ ಮೂಲಕ ಏನು ಬೇಕಾದರೂ ಆಗಬಹುದು. ಇದೆಲ್ಲ ದುಡ್ಡಿನ ಆಟ ಎಂಬ ಕಾಮೆಂಟ್ ಗಳು ಕೇಳಿಬಂದಿವೆ.
ಜೊತೆಗೆ, ಇವರು ಕೆಲವೇ ದಿನಗಳಲ್ಲಿ ದಪ್ಪಗಿದ್ದವರು ಸಣ್ಣಗಾಗುತ್ತಾರೆ, ದಪ್ಪಗಿದ್ದವರು ದಪ್ಪಗಾಗುತ್ತಾರೆ. ನೀವು ತಾಲೀಮು ಮಾಡದೆಯೇ ಸಣ್ಣಗಾಗಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ಗ್ಯಾಸ್ಟ್ರಿಕ್ ಬ್ಯಾಂಡ್ ಶಸ್ತ್ರಚಿಕಿತ್ಸೆಗೆ ಒಳಗಾಗಿರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.




