ಬೆಂಗಳೂರಿನಲ್ಲಿ 6 ಕೋಟಿ ನಕಲಿ ನೋಟು ವಶ

4 years ago

ಬೆಂಗಳೂರು: ನಕಲಿ ನೋಟುಗಳನ್ನಯ ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರ ಗ್ಯಾಂಗ್ ಅನ್ನು ನಗರದ ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ನಿಷೇಧಿತ ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

ಬ್ಲಾಕ್ ಅಂಡ್ ವೈಟ್ ದಂಧೆ ನಡೆಸಲು ಸಂಚು ನಡೆಸಿ ನಿಷೇಧಿತ ನೋಟುಗಳ ಬದಲಾವಣೆ ಮಾಡುತ್ತೇವೆ ಎಂದು ಇವರು ಮೋಸ ಮಾಡುತ್ತಿದ್ದರು. ಇವರಿಂದ 75 ಲಕ್ಷ ನಿಷೇಧಿತ ಅಸಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. 35 ಲಕ್ಷ ನಿಷೇಧಿತ ನೋಟುಗಳನ್ನು ಬ್ಲಾಕ್ ಅಂಡ್ ವೈಟ್ ಮಾಡಲು ತಂಡ ಯತ್ನಿಸುತ್ತಿತ್ತು. ಈ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply