ಮಡಿಕೇರಿ: ಪ್ರವಾಸಕ್ಕೆ ಕೊಡಗಿನ ಮಡಿಕೇರಿಯ ನ್ಯೂ ಕೂರ್ಗ್ ವ್ಯಾಲಿ ಹೋಂಸ್ಟೇನಲ್ಲಿ ತಂಗಿದ್ದ ಯುವತಿ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮುಂಬೈ ಮೂಲದ ಈಶ್ವರ್ ಅವರ ಮಗಳು ವಿಘ್ನೇಶ್ವರಿ (24) ಬಲಿಯಾದವರು. ಮುಂಬೈನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಹಳೆಯ ಸ್ನೇಹಿತೆಯರೊಂದಿಗೆ ಕೊಡಗಿಗೆ ಪ್ರವಾಸಕ್ಕೆ ಆಗಮಿಸಿದ್ದರು
ನಿನ್ನೆ ರಾತ್ರಿ ಯುವತಿ ಬಾತ್ ರೂಮಿಗೆ ಸ್ನಾನಕ್ಕೆ ಹೋದ ಯುವತಿ ಅಲ್ಲೇ ಕುಸಿದು ಬಿದ್ದು ಬಲಿಯಾಗಿದ್ದಾರೆ. ಬಾತ್ ರೂಮಿಗೆ ಅಳವಡಿಸಿದ್ದ ಗೀಸರ್ ನಿಂದ ಗ್ಯಾಸ್ ಸೋರಿಕೆಯಾಗಿ ಯುವತಿ ಬಲಿಯಾಗಿರುವ ಶಂಕೆ ಕೂಡ ವ್ಯಕ್ತವಾಗಿದೆ.




