ಕಲಬುರಗಿ: ನನ್ನ ಸರ್ಕಾರದ ಅವಧಿಯಲ್ಲಿ ಪಿಎಸ್ಐ ನೇಮಕದಲ್ಲಿ ಅಕ್ರಮ ನಡೆದಿದ್ದರೆ ವಿರೋಧ ಪಕ್ಷದಲ್ಲಿದ್ದು ಬಿಜೆಪಿಯವರು ಏನು ಮಾಡುತ್ತಿದ್ದರು? ಕೋರ್ಟಿಗೆ ಹೋಗಬೇಕಲ್ವಾ ಅಥವಾ ಕಲಾಪದಲ್ಲಿ ಪ್ರಸ್ತಾಪವಾದರೂ ಮಾಡಬೇಕಲ್ವಾ? ಇವರನ್ನು ನಂಬಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಅಶ್ವಥ್ ನಾರಾಯಣ ಅವರು ಸಿದ್ಧರಾಮಯ್ಯ ಅವರ ಕಾಲದಲ್ಲೂ ಪಿಎಸ್ಐ ನೇಮಕದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಆಗ ಏನು ಮಾಡುತ್ತಿದ್ದರು, ಆಗ ಏಕೆ ಮೌನವಾಗಿದ್ದುದ, ಕಡಬು ತಿಂತಿದ್ದ ಅಥವಾ ಕಡ್ಲೆಪುರಿ ತಿಂತಿದ್ರಾ? ಈಗ ಇವರ ಸರ್ಕಾರದ ಭ್ರಷ್ಟಾಚಾರ ಬಯಲಿಗೆ ಬಂದ ಮೇಲೆ ಈಗ ಇಂತಹ ಸುಳ್ಳು ಹೇಳುವುದು. ಇದನ್ನು ನೀವು ನಂಬುತ್ತೀರಾ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.



