ಬೆಂಗಳೂರು: ಬ್ಯಾಂಕಿಂಗ್ ವಲಯದ ರಾಷ್ಟ್ರೀಕರಣದ ಬಗ್ಗೆ ಸುಳ್ಳು ಮಾಹಿತಿ ನೀಡಿ ಜನತೆಯ ದಿಕ್ಕು ತಪ್ಪಿಸುತ್ತಿರುವ ಮಹಾನ್ ಸುಳ್ಳುಗಾರ ಸಿಎಂ Siddaramaiah ಅವರೇ, ಯುಪಿಎ ಅವಧಿಯಲ್ಲಿ ದೆಹಲಿಯಲ್ಲಿ ಕುಳಿತ ನಿಮ್ಮ ಪ್ರಭಾವಿ ನಾಯಕರು ಬ್ಯಾಂಕಿಗೆ ಕರೆ ಮಾಡುವ ಮೂಲಕವೇ ಕಳ್ಳ ಕಾಕರಿಗೆ ಸಾಲ ಮಂಜೂರು ಮಾಡಿಸುತ್ತಿದ್ದರು ಎನ್ನುವ ಸತ್ಯವನ್ನು ಏಕೆ ಮರೆಮಾಚುತ್ತಿದ್ದೀರಿ? ಎಂದು ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳ ಮೂಲಕ ವಾಗ್ದಾಳಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅಶ್ವತ್ಥ್ ನಾರಾಯಣ, ಅಂದು ಸಾಲ ಪಡೆದ ಕೈ ನಾಯಕರ ಸ್ನೇಹಿತರೆಲ್ಲ ವಿದೇಶಕ್ಕೆ ಓಡಿಹೋಗಿದ್ದಾರೆ ಎನ್ನುವುದನ್ನು ಏಕೆ ಮುಚ್ಚಿಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರವು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಂದು ನಿಮ್ಮ ಯುಪಿಎ ಸರ್ಕಾರ ಬರ್ಬಾದ್ ಮಾಡಿದ ಬ್ಯಾಂಕಿಂಗ್ ವಲಯಕ್ಕೆ ಲಾಭದ ಹಾದಿಯನ್ನು ತೋರಿಸಿದೆ ಎಂದು ಹೇಳಿದ್ದಾರೆ.
ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿರುವ Narendra Modi ಅವರ ಸರ್ಕಾರದ ಕ್ರಮದ ಬಗ್ಗೆ ತಮಗೆ ಮಾಹಿತಿ ಇಲ್ಲವೇ? ಇದು ಕನ್ನಡಿಗರಿಗೆ ಬಹುದೊಡ್ಡ ವರದಾನವಲ್ಲವೇ! ಉದ್ಯೋಗ ಮೇಳದ ಮೂಲಕ ಕರ್ನಾಟಕದ ಬ್ಯಾಂಕ್‌ಗಳ ಸಹಿತ ವಿವಿಧ ಬ್ಯಾಂಕ್‌ಗಳಲ್ಲಿನ ಸಾವಿರಾರು ಖಾಲಿ ಹುದ್ದೆಗಳನ್ನು ಕೇವಲ ಒಂದು ವರ್ಷದಲ್ಲಿ ಭರ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರಿ ವಲಯದ ಬ್ಯಾಂಕ್‌ಗಳ ಅಭಿವೃದ್ಧಿಗಾಗಿ ಕಳೆದ 9 ವರ್ಷಗಳಲ್ಲಿ ಸರ್ಕಾರ ಕೈಗೊಂಡ ಉಪಕ್ರಮದ ಫಲವಾಗಿ ಸರ್ಕಾರಿ ಬ್ಯಾಂಕ್‌ಗಳ ಲಾಭ (2022-23ರಲ್ಲಿ) ₹1.04 ಲಕ್ಷ ಕೋಟಿಗೆ ಏರಿಕೆ ಆಗಿದೆ. ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮ ಯುಪಿಎ ಅವಧಿಯಲ್ಲಿ(2013-14ರಲ್ಲಿ) ಈ ಲಾಭ ಕೇವಲ ₹36,000 ಕೋಟಿ ಮಾತ್ರ ಇತ್ತು! ಈಗ ಮೂರುಪಟ್ಟು ಹೆಚ್ಚಾಗಿದೆ… ಈ ಬಗ್ಗೆ ಜಾಣ ಮೌನವೇಕೆ?! ಎಂದಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯ ಮಾರ್ಚ್ 2018ರಲ್ಲಿ ಕೇವಲ ₹4.52 ಲಕ್ಷ ಕೋಟಿ ಇದ್ದಿದ್ದು ಡಿಸೆಂಬರ್ 2022ರ ವೇಳೆಗೆ ₹10.63 ಲಕ್ಷ ಕೋಟಿಗೆ ಏರಿಕೆ ಆಗಿದೆ! ಎಂದು ಹೇಳಿದ್ದಾರೆ.
Provisioning Coverage Ratio (PCR) 2014ರ ಹಣಕಾಸು ವರ್ಷದಲ್ಲಿ ಕೇವಲ 58.48% ಇದ್ದಿದ್ದು 2023ಕ್ಕೆ 90.72%ಗೆ ಏರಿಕೆ ಆಗಿದೆ. ಇದು ಸಾರ್ವಜನಿಕ ಬ್ಯಾಂಕಿಂಗ್ ವಲಯದ ಸಾಮರ್ಥಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.
ಕಳೆದ 9 ವರ್ಷಗಳಲ್ಲಿ ಬ್ಯಾಂಕಿಂಗ್ ವಲಯ ಲಾಭದ ಹಾದಿಯಲ್ಲಿ ಸಾಗುತ್ತಿದೆ. ಇವೆಲ್ಲವೂ ಕೇವಲ ಒಂದು ದಿನದ ಮ್ಯಾಜಿಕ್ ಅಲ್ಲ ಸಿದ್ದರಾಮಯ್ಯನವರೇ… ಎಂದಿದ್ದಾರೆ
17 ಬಾರಿ ಬಜೆಟ್ ಮಂಡಿಸಿದ, ಸದ್ಯ ಹಣಕಾಸು ಇಲಾಖೆಯನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡಿರುವ #HabitualLiarSiddu ಅವರೇ, ತಮ್ಮ ಲೆಕ್ಕಾಚಾರ ತಪ್ಪುತ್ತಿರುವುದೇಕೆ? ರಾಜ್ಯವನ್ನು ಅಭಿವೃದ್ಧಿಯ ಹಳಿ ತಪ್ಪಿಸಿರುವ ತಮ್ಮನ್ನು ರಾಜ್ಯದ ಜನತೆ ತಿರಸ್ಕರಿಸುತ್ತಾರೆಂಬ ಭಯದಲ್ಲಿ ಪ್ರಧಾನಿ ಮೋದಿಯವರತ್ತ ಬೊಟ್ಟು ಮಾಡಿ ತಪ್ಪಿಸಿಕೊಳ್ಳುವ ವಿಫಲ ಯತ್ನವನ್ನೇಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.



