ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮ ಮಂದಿರ ವಾರ್ಡ್ ನಲ್ಲಿ ಶ್ರೀರಾಮಮಂದಿರ ಆಟದ ಮೈದಾನವನ್ನು 10 ಕೋಟಿ ವೆಚ್ಚದಲ್ಲಿ ನವೀಕರಣಮಾಡಿ ಇಂದು ಲೋಕಾರ್ಪಣೆ ಮಾಡಲಾಯಿತು.
ಮಾಜಿ ಶಿಕ್ಷಣ ಸಚಿವ, ಶಾಸಕ ಎಸ್.ಸುರೇಶ್ ಕುಮಾರ್, ಮುಖ್ಯ ಅಭಿಯಂತರ ಡೊಡ್ಡಯ್ಯ, ಕಾರ್ಯಪಾಲಕ ಅಭಿಯಂತರ ಗಂಗಾಧರ್, ಮಂಡಲ ಅಧ್ಯಕ್ಷ ರಾಘವೇಂದ್ರರಾವ್, ಬಾಳೆಹಣ್ಣು ಮಾರಾಟಗಾರ ನಾರಾಯಣ್, ಓಂಶಕ್ತಿ ದೇವಾಲಯದ ಪ್ರಮುಖರಾದ ವೆಂಕಟೇಶ್, ಕುಮಾರವ್ಯಾಸ ಮಂಟಪದ ಕಮಲಮ್ಮರವರು ಕ್ರೀಡಾಂಗಣ ಉದ್ಘಾಟನೆ ಮಾಡಿದರು.
ನಂತರ ಹೊನಲು ಬೆಳಕಿನ ವ್ಯವಸ್ಥೆಗೆ ಚಾಲನೆ ನೀಡಿದರು.
ಶಾಸಕರ ಎಸ್.ಸುರೇಶ್ ಕುಮಾರ್ ಮಾತನಾಡಿ, ಬೆಂಗಳೂರಿನ ಶ್ರೀ ರಾಮಮಂದಿರ ಆಟದ ಮೈದಾನ ರಾಮಲೀಲಾ ಮೈದಾನದಷ್ಟೆ ಪ್ರಸಿದ್ದಿ ಇದೆ.
ರಾಷ್ಟದ ಮಹಾನ್ ನಾಯಕರುಗಳು ಶ್ರೀ ರಾಮ ಮಂದಿರ ಆಟದ ಮೈದಾನಕ್ಕೆ ಭೇಟಿ ನೀಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದಾರೆ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಜಿ.ಆರ್.ವಿಶ್ವನಾಥರವರು ಇಲ್ಲಿ ಕ್ರಿಕೆಟ್ ಆಡಿದ್ದಾರೆ ಎಂದರು.
ಜನರು ಕುಳಿತುಕೊಳ್ಳಲು ಗ್ಯಾಲರಿಯಲ್ಲಿ ಸುವ್ಯವಸ್ಥಿತ ಆಸನ ವ್ಯವಸ್ಥೆ, ಟೆನ್ ಸಿಲ್ ರೂಫ್, ರಕ್ಷಣಬೇಲಿ, ಹೊನಲು ಬೆಳಕು ವ್ಯವಸ್ಥೆಯನ್ನ ಮತ್ತು ಮುಖ್ಯದ್ವಾರ ಹಾಗೂ ವೇದಿಕೆ ಮೇಲ್ಚವಣಿಯನ್ನ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕ್ರೀಡಾ ಚಟುವಟಿಕೆಗಳು ಪ್ರತಿಯೊಬ್ಬರಿಗೂ ಮುಖ್ಯ ಮಾನಸಿಕ, ದೈಹಿಕವಾಗಿ ಸದೃಢವಾಗಲು ಜನರಿಗೆ ಸಹಕಾರಿಯಾಗಲು 10 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಯುವ ಕ್ರೀಡಾಪಟುಗಳು, ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ರಾಜಾಜಿನಗರ ವಿಧಾನಸಭಾ ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದರು.




