ಅಮಾಯಕರ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸುವ ಇಚ್ಛಾಶಕ್ತಿಯನ್ನು ತೋರಿಸಿ: ಅಫ್ಸರ್ ಕೊಡ್ಲಿಪೇಟೆ

3 years ago

#willingness #dismiss #cases #innocents #AfsarKodlipet #sdpi

ನುಡಿದಂತೆ ನಡೆದಿದ್ದೇವೆ ಎಂಬುದನ್ನು ಸಾಬೀತು ಪಡಿಸಿ

ಹುಬ್ಬಳ್ಳಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಧಾರವಾಡ ಜಿಲ್ಲಾ ಕಾರ್ಯಕಾರಣಿ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಮಕ್ತುಮ್ ಹುಸೇನ್ ಹೊಸಮನಿ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಸಮ್ಮುಖದಲ್ಲಿ ಜರುಗಿತು. ಪಕ್ಷದ ನಿಧಿ ಸಂಗ್ರಹ ಅಭಿಯಾನದ ಬಗ್ಗೆ ಚರ್ಚಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಬೆಂಗಳೂರು, ಹುಬ್ಬಳ್ಳಿ ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣ ಕುರಿತಂತೆ ಅಮಾಯಕ ಯುವಕರ ಮೇಲೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ದ್ವೇಷ ರಾಜಕಾರಣ ಭಾಗವಾಗಿ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆದುಕೊಳ್ಳುವ ವಿಚಾರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಮಾತನಾಡಿ ಈ ಒಂದು ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದೆ ಇಲ್ಲ. ಅಂತಹ ಯಾವುದೇ ವಿಚಾರವು ಇಲ್ಲ ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ಮೈಸೂರಿನಲ್ಲಿ ಸಚಿವ ಹೆಚ್ ಸಿ ಮಹದೇವಪ್ಪ ಮಾತನಾಡಿ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೇಸ್ ವಾಪಸ್ ಪಡೆಯುವ ವಿಚಾರವು ಈಗಾಗಲೇ ಫೈನಲ್ ಆಗಿದೆ ಎಂದು  ಸಮರ್ಥಿಸಿಕೊಂಡಿದ್ದಾರೆ. ಅದು ಕ್ಯಾಬಿನೆಟ್ ಸಬ್ ಕಮಿಟಿ ಈ ಬಗ್ಗೆ ವಾಪಸ್ ಪಡೆಯಲು ಶಿಫಾರಸ್ಸು ನೀಡುತ್ತೆ ಮೆರಿಟ್ ಮೇಲೆ ಕ್ಯಾಬಿನೆಟ್ ಕಮಿಟಿ ಇದನ್ನು ತೀರ್ಮಾನ ಮಾಡುತ್ತೆ ಎಂದಿದ್ದಾರೆ ಎಂದು ಹೇಳಿದರು.

ಇನ್ನೂ ಇತ್ತ ತುಮಕೂರಿನಲ್ಲಿ ಗೃಹ ಸಚಿವ ಪರಮೇಶ್ವರ ಮಾತನಾಡಿ ಈ ಒಂದು ವಿಚಾರ ಕುರಿತಂತೆ ಈಗಾಗಲೇ ಸಾಕಷ್ಟು ಶಾಸಕರು ಪತ್ರವನ್ನು ಬರೆದಿದ್ದಾರೆ. ಈ ಕುರಿತಂತೆ ಸಾಧಕ ಬಾಧಕಗಳನ್ನು ಗೃಹ ಇಲಾಖೆ ಪರಿಶೀಲನೆ ಮಾಡುತ್ತದೆ ಎಂದಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸಚಿವರು ನಡುವೆ ತಾಳ ಮೇಳ ಇಲ್ಲದಂತಾಗಿದೆ ಎಂದು ಹೇಳಿದರು.

ಚುನಾವಣಾ ಪೂರ್ವ ಭರವಸೆಯಂತೆ ಅಮಾಯಕರ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸುವ ಇಚ್ಛಾಶಕ್ತಿಯನ್ನು ತೋರಿಸಿ “ನುಡಿದಂತೆ ನಡೆದಿದ್ದೇವೆ ” ಎಂಬುದನ್ನು ಸಾಬೀತು ಪಡಿಸಿ ಎಂದು ಅಭಿಪ್ರಾಯಪಟ್ಟರು.

ಈ ಸಂಧರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾ ಉಪಾಧ್ಯಕ್ಷ ಡಾ. ಎಂ. ವಿಜಯ್ ಗುಂಟ್ರಾಳ್, ಜಿಲ್ಲಾ ಖಜಾಂಚಿ ಮಲಿಕ್ ಜಾನ್ ಹಾಗೂ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು:

1.ದಿನಾಂಕ 23/10/2023 ರಂದು  ಕಾರ್ಯಕರ್ತರು, ಸದಸ್ಯರು ಮತ್ತು ಹಿತೈಷಿಗಳೂಂದಿಗೆ ಪಕ್ಷದ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಯಿತು(Party Convention)

2. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವ ಶಾಸಕ ಮಹೇಶ್ ಟೆಂಗಿನಕಾಯಿ ಮಹಾಪೌರರು ನಿಯೋಗ ಮುಂದಿನ ಪಾಲಿಕೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಪ್ರಸ್ತಾವನೆಯನ್ನು ಮಂಡಿಸುವಂತೆ ಖಾತ್ರಿಪಡಿಸಬೇಕೆಂದು ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು.

3.ಹುಬ್ಬಳ್ಳಿ-ಧಾರವಾಡ ಪೋಲೀಸರು ಕಮೀಷನರ್ ರೇಣುಕಾ ಸುಕುಮಾರ “ಉಗ್ರರ ಬಂಧನ, ತರಬೇತಿ ಮುಂತಾದ ವರದಿಗಳು ಮಾಧ್ಯಮಗಳಲ್ಲಿ ಬಂದ ನಂತರ ನಾವು ದಿಲ್ಲಿ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಸಾಮಾನ್ಯವಾಗಿ ಇಂತಹ ಘಟನೆಗಳಾದಲ್ಲಿ ನಮಗೆ ಮಾಹಿತಿ ಬರುತ್ತಿತ್ತು. ಆದರೆ ಅವರಿಂದ ಇದುವರೆಗೂ ಯಾವುದೆ ಮಾಹಿತಿಯಿಲ್ಲ” ಎಂದಿರುವಾಗ ಕೆಲವು ಮಾಧ್ಯಮಗಳು ವಾಣಿಜ್ಯ ನಗರಿಯ ಹೆಸರನ್ನು ಕೆಡಿಸುವ ಕೆಲಸ ಮಾಡುತ್ತಿದ್ದು ಖಂಡನೀಯ ಎಂದು ಸಭೆಯು ಅಭಿಪ್ರಾಯಪಟ್ಟಿತು.

Leave a Reply