ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಧಾರಣೆ ಆಗಬೇಕಲ್ಲವೇ?

2 years ago

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಜನರ ಆರೋಗ್ಯವನ್ನು ಸುಧಾರಣೆ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸರ್ಕಾರ ತೆರೆಯುತ್ತವೆ. ಆದರೆ ಈ ದಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯ ಹಾಗೂ ಸಿಬ್ಬಂದಿಯ ಸಮಯ ಪಾಲನೆ ಮೊದಲು ನಡೆಯುತ್ತಿಲ್ಲ.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ತೆರೆಯುವ ಸಮಯ 9 ಗಂಟೆಯಿಂದ ಸಂಜೆ 4.30ರವರೆಗೆ ಇದೆ. ಆದರೆ ಮೊದಲು ವೈದ್ಯರೇ ಸಮಯ ಪಾಲನೆ ಮಾಡದೆ ಇದ್ದರೆ ಇನ್ನು ಹೇಗೆ ಸಿಬ್ಬಂದಿ ಸಮಯ ಪಾಲನೆ ಮಾಡಲು ಸಾಧ್ಯ?

ಹೋಗಲಿ 10.30 ರಿಂದ 4 ಗಂಟೆವರೆಗೂ ಇರುತ್ತಾರಾ ಎಂದರೆ ಅದು ಇಲ್ಲ. 11 ಗಂಟೆ ಆದರೂ ಬರುವುದಿಲ್ಲ ಎಂಬುದು ಎಲ್ಲಾ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ನಾಗರೀಕರಿಂದ ಕೇಳಿ ಬರುತ್ತದೆ. ಇದಕ್ಕೂ ಒಂದು ನಿಯಮ ಇರಬೇಕು ಅಲ್ಲವೇ? ಇನ್ನು ಸಮಯ ಪಾಲನೆ ವೈದ್ಯರು ಹಾಗೂ ಸಿಬ್ಬಂದಿ ಮಾಡುತ್ತಿದ್ದಾರೆ ಎನ್ನುವದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಠಾತ್ತನೆ ಬಂದು ರಾಜ್ಯದಲ್ಲಿ / ಜಿಲ್ಲೆ/ ತಾಲೂಕ್ ಗಳಲ್ಲಿ ನಡೆಯುತ್ತಿದೆಯಾ ಎಂದರೆ ತನಿಖೆ ಮಾಡಿದ ವರದಿಗಳು ಬಂದೇ ಇಲ್ಲ.

ಹೀಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡದೇ ಇದ್ದರೆ ನಿಮಗೆ ವೇತನ ಸಾರಿಗೆ ಏಕೆ ನೀಡಬೇಕು ಎಂಬುದು ಸಾಮಾಜಿಕ ಕಾರ್ಯಕರ್ತರಿಂದ ಕೇಳಿ ಬರುತ್ತದೆ. ಇನ್ನು ಒಂದು ಸಮಸ್ಯೆ ಏನೆಂದರೆ ಸರ್ಕಾರ ನೀಡುವ ಎಲ್ಲ ರಜಾಗಳು (ಭಾನುವಾರ ಸೇರಿದಂತೆ) ನಮ್ಮ ಇಲಾಖೆಗೂ ಸೇರಿದೆ ಎಂದು ಹೆಚ್ಚಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯ ಹಾಗೂ ಸಿಬ್ಬಂದಿ ತಿಳಿದಂತೆ ಇದೆ.

ಸರ್ಕಾರಿ ನಿಯಮದ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರ್ಕಾರಿ ರಜಾ ದಿನದಲ್ಲೂ ಭಾನುವಾರ ಸೇರಿದಂತೆ ರಜಾ ದಿನದಲ್ಲಿ 9 ಗಂಟೆಯಿಂದ 1 ಗಂಟೆವರೆಗೂ ಕರ್ತವ್ಯವನ್ನು ವೈದ್ಯರು ಸೇರಿದಂತೆ ಸಿಬ್ಬಂದಿ ಮಾಡಬೇಕು. ಆದರೆ ಮೊದಲು ವೈದ್ಯರೆ ಗೈರು ಹಾಜರಾರಾದರೆ ಇನ್ನು ಸಿಬ್ಬಂದಿ ಕೇಳಬೇಕೆ? ಈ ನಿಯಮ ಸಾರ್ವಜನಿಕರಿಗೆ ತಿಳಿದು ಇರುವುದಿಲ್ಲ ಎಂಬ ಉಡಾಫೆ ಇರಬಹುದು.

ವೈದ್ಯರು ಕರ್ತವ್ಯದಲ್ಲಿ ವಿಫಲರಾದರೆ ಸಿಬ್ಬಂದಿ ಕಥೆ, ಶಿಕ್ಷಕರು – ಮಕ್ಕಳ ಕಥೆ ಹೇಳಬೇಕಾಗುತ್ತದೆ. ಅರ್ಥ ಏನೆಂದರೆ ವೈದ್ಯರು ಸಮಯ ಪಾಲನೆ ಮಾಡದೇ ಇದ್ದರೆ ಸಿಬ್ಬಂದಿ ಆಸ್ಪತ್ರೆಯಲ್ಲಿ ಇಲ್ಲದೆ ಸ್ವಕಾರ್ಯಗಳಿಗೆ ಹಾಗೂ ತಮಗೆ ಬೇಕಾದ ಸ್ಥಳಗಳಲ್ಲಿ ಕಾಲ ಕಳೆಯುವುದು ಇದೆ. ಆದ್ದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೊದಲು ಸಮಯ ಪಾಲನೆ ಮಾಡಲು ಹಾಗೂ ಕರ್ತವ್ಯ ಮಾಡಲು ತಮ್ಮದೆ ಆದ ಕ್ರಮದಲ್ಲಿ ಸೂಚಿಸಬೇಕಾಗುತ್ತದೆ. ಇಲ್ಲದಿದ್ರೆ ಇಲಾಖೆಯ ಹಿರಿಯ ಅಧಿಕಾರಿಗಳ ಬೇವಾಜಬ್ದಾರಿ ಎಂದೂ ನಾಗರಿಕರು ತಿಳಿದುಕೊಳ್ಳುತ್ತಾರೆ. ಮುಂದೆ ಸಾಮಾಜಿಕ ಕಾರ್ಯಕರ್ತರೆ ಕರ್ತವ್ಯ ಪಾಠವನ್ನು ಹೇಳುವ ಅವಕಾಶ ಬಂದರೂ ಬರಬಹುದು.

ಇನ್ನು ವೈದ್ಯರು ಒಳಗೊಂಡಂತೆ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿದ್ದಾರ ಎಂಬುದನ್ನು ನೋಡಿದರೆ ಮಾಧ್ಯಮಗಳಲ್ಲಿಯೇ ವೈದ್ಯರ ಕರ್ತವ್ಯದ ವಿಮುಖತೆಯನ್ನು ನೋಡಬಹುದಾಗಿದೆ. ಪ್ರಾಮಾಣಿಕರು ಇಲ್ಲ ಎಂದೂ ಅಲ್ಲ; ವಿರಳ ಸಂಖ್ಯೆಯಲ್ಲಿ ಇದ್ದಾರೆ ಎಷ್ಟೋ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾಮಾಣಿಕತೆ ಮೆರೆದ ವೈದ್ಯರು ಗ್ರಾಮಸ್ಥರ ಮೆಚ್ಚಿಗೆಯನ್ನು ಪಡೆದು ಸನ್ಮಾನ ಸ್ವೀಕಾರಿಸಿ ಹೋಗಿರುವ ಉದಾಹರಣೆ ಕೂಡ ಇದೆ.

ಆದರೆ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ತಮ್ಮ ಕರ್ತವ್ಯದಲ್ಲಿ ಲೋಪಗಳನ್ನು ಮಾಡುತ್ತಾ ನಮ್ಮನ್ನು ಕೇಳುವರು ಯಾರು ಎಂಬ ಧೋರಣೆ ತಾಳಿದವರು ಇದ್ದಾರೆ ಎಂಬುದು ನಾಗರೀಕರಿಂದ ಕೇಳಿ ಬರುತ್ತದೆ. ಕಾಟಾಚಾರಕ್ಕೆ ಬಂದು ಹೋಗುವುದರಿಂದ R.M. P. ಕ್ಲಿನಿಕ್ ಗಳು ಭರ್ಜರಿ ವ್ಯಾಪಾರ ಮಾಡಿಕೊಳ್ಳುವುದು ಇದೆ. ಇದಕ್ಕೆ ಕಾರಣವೇ ಸರ್ಕಾರಿ ವೈದ್ಯರ ಕರ್ತವ್ಯ ಲೋಪ ಎಂದೂ ಕೇಳಿಬರುತ್ತದೆ. ಇನ್ನು ಇಬ್ಬರು ವೈದ್ಯರು ಇರುವ ಕಡೇ ಹೊಂದಾಣಿಕೆ ಪೃವೃತ್ತಿ ಆಳವಡಿಸಿಕೊಂಡು 50:50 ಅನುಪಾತದಲ್ಲಿ ಅಧಿಕೃತ ರಜೆ ಇಲ್ಲದೆ ರಜೆ ಅನುಭವಿಸುವರು ಇದ್ದಾರೆ ಎಂಬ ಮಾತುಗಳು ನಾಗರೀಕರಿಂದ ಕೇಳಿ ಬರುತ್ತದೆ. ಇದೆಲ್ಲಕ್ಕೆ ಕಾರಣ ಇಲಾಖೆಯ ತಾಲ್ಲುಕ್ / ಜಿಲ್ಲಾ ಆರೋಗ್ಯ ಅಧಿಕಾರಿಗಳ ತನಿಖೆ ಇಲ್ಲದೆ ಇರುವುದೇ ಎಂದೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು.

ಮತ್ತೊಂದು ಕಾರಣ ಜನಪ್ರತಿನಿಧಿಗಳು ಪ್ರಾಥಮಿ ಆರೋಗ್ಯ ಕೇಂದ್ರಗಳ ಬಗೆ ಗಮನ ನೀಡದೆ ಇರುವುದು ಹಾಗೂ ಕಾಳಜಿ ಇಲ್ಲದೆ ಇರುವುದರಿಂದ ಆಸ್ಪತ್ರೆಯ ವೈದ್ಯರಿಗೂ ಸಿಬ್ಬಂದಿಗೂ ಜವಾಬ್ದಾರಿ ಇಲ್ಲದಂತೆ ಆಗಿದೆ. ಇನ್ನು ರಾಜಕೀಯ ಆಶ್ರಯ ಪಡೆದುಕೊಂಡಿರುವ ವೈದ್ಯರು ಹಾಗೂ ಸಿಬ್ಬಂದಿ ಕಥೆ ಹೇಳುವುದೇ ಬೇಡಾ.

ಇನ್ನು ಚಿಕಿತ್ಸೆ ಬಗೆಗೆ ಹೇಳುವುದಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ಮಾಡಿದ್ದೆ ಆದರೆ R.M. P.ಗಳ ಕ್ಲಿನಿಕ್ ಗಳು ಖಾಲಿ ಖಾಲಿ ಇರುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತಾ ಹೋಗುತ್ತದೆ. ಆಪ್ರಾಮಾಣಿಕ ವೈದ್ಯರು ಹಾಗೂ ಸಿಬ್ಬಂದಿ ಇದ್ದರೆ ರೋಗಿಗಳ ಸಂಖ್ಯೆ ಇಳಿಮುಖ ಆಗುತ್ತಾ R.M. P. ಕ್ಲಿನಿಕ್ ಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುವುದನ್ನು ನೋಡಬಹುದು ಎಂಬ ಅನಿಸಿಕೆಗಳು ನಾಗರೀಕರಿಂದ ಕೇಳಿ ಬರುತ್ತದೆ. ಇದನ್ನು ಸರಿಪಡಿಸಬೇಕು ಎನ್ನುವುದಾದರೆ ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಕಡೇ ಹೆಚ್ಚು ಗಮನ ನೀಡಬೇಕು. ಜನಪ್ರತಿನಿಧಿಗಳು ಅಧಿಕಾರಿಗಳು ವಿಫಲರಾದರೆ ಸಾಮಾಜಿಕ ಕಾರ್ಯಕರ್ತರು, ಪ್ರಜ್ಞಾವಂತ ನಾಗರೀಕರು ಆರೋಗ್ಯ ಕೇಂದ್ರಗಳ ಮೇಲೆ ನಿಗಾ ಇಟ್ಟು ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯ ಮಾಡಬೇಕು ಹಾಗೂ ಮಾಧ್ಯಮಗಳ ಕಣ್ಣು ಸಹಾ ಆರೋಗ್ಯ ಕೇಂದ್ರಗಳ ಮೇಲೆ ಕಣ್ಗಾವಲು ಇದ್ದರೆ ಎಲ್ಲವೂ ಸರಿ ಹೋಗುವುದರಲ್ಲಿ ಅನುಮಾನ ಬೇಡಾ. ಇದಕ್ಕೆ ಎಲ್ಲಕ್ಕಿಂತಲೂ ಅಧಿಕಾರಿಗಳು ವೈದ್ಯರು ಹಾಗೂ ಸಿಬ್ಬಂದಿ ಜನರ ತೆರಿಗೆಯಿಂದ ಬರುವ ವೇತನದ ಋಣ ತೀರಿಸಿದರೆ ಆರೋಗ್ಯ ಕೇಂದ್ರಗಳು ದೇಶಕ್ಕೆ / ರಾಜ್ಯಕ್ಕೆ ಮಾದರಿ ಆಗಬಲ್ಲವು.

  • N.S. ಈಶ್ವರಪ್ರಸಾದ್, ನೇರಳೇಕೆರೆ, ಮಧುಗಿರಿ ತಾಲ್ಲೂಕ್

Leave a Reply