ಸ್ತ್ರೀ ಶಿಕ್ಷಣಕ್ಕೆ ಆದ್ಯತೆ ನೀಡಿದ ಸಾವಿತ್ರಿ ಬಾಯಿ ಫುಲೆ

2 years ago

ಕೆಂಭಾವಿ: 19ನೇ ಶತಮಾನದಲ್ಲಿ ಸಾವಿತ್ರಿ ಬಾಯಿ ಫುಲೆಯವರು ಸ್ತ್ರೀ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಮುಖ್ಯೋಪಾಧ್ಯಾಯ ಮಲ್ಲಣ್ಣ ಸುರಪುರ ಹೇಳಿದರು.

ಪಟ್ಟಣಕ್ಕೆ ಸಮೀಪದ ಮಾಲಗತ್ತಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆಯವರ ಜಯಂತಿ ಆಚರಿಸಿ‌ಮಾತನಾಡಿದ ಅವರು, ಆಗಿನ ಕಾಲದ ಸಾಮಾಜಿಕ, ಸಮಾನತೆ, ದೀನ ದಲಿತರ, ಹಿಂದುಳಿದವರ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮರಲ್ಲಿ ಸಾವಿತ್ರಿಬಾಯಿ ಫುಲೆಯವರು ಅಗ್ರಗಣ್ಯರು ಎಂದು ಸ್ಮರಿಸಿದರು.

ಶಿಕ್ಷಕರಾದ ಮುತ್ತುರಾಜ್ ಬಡಿಗೆರ, ಮಾಣಿಕಪ್ಪ ಕಲ್ಯಾಣಿ, ಮಹಾಂತೇಶ ವಸ್ತ್ರದ, ಶಿವಲೀಲಾ, ಸಾಯಬಣ್ಣ ಕುಳಗೇರಿ, ಕು.ಸನಾ. ಎಂ.ಇಸಾಂಪುರ, ಕು.ಉಮಾಕ್ಷೀ, ಕು.ಯಮನಪ್ಪ ಇದ್ದರು.

Leave a Reply