ಕನ್ನಡ ಸಿನಿಮಾ ರಂಗದ ವಿದ್ವಾಂಸರೇ…
ಈ ಕಾಯ್ದೆ, ಕಾನೂನು, ಕಲಂಗಳು, Major, minor criminal lawನ legal procedures ಗೊತ್ತಿಲ್ಲ ಅಂದರೆ ದಯವಿಟ್ಟು ಸುಮ್ಮನಿದ್ದುಬಿಡ್ರಪ್ಪಾ. ಪೆದ್ದುಪೆದ್ದಾಗಿ, ತಪ್ಪುತಪ್ಪಾಗಿ Indian Penal Code ಅನ್ನು ಹಾಗೂ ಟ್ರಾಫಿಕ್ ರೂಲ್ಸನ್ನು interpret ಮಾಡಬೇಡಿ.
ಅಪಘಾತದ ಪ್ರಕರಣಕ್ಕೆ ಹತ್ತುವರ್ಷ ಶಿಕ್ಷೆ ವಿಧಿಸಿದ ಭಾರತದ ಮೊದಲ ಪ್ರಕರಣವನ್ನು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ನೋಡಬಹುದು. ಅಪಘಾತದ ಪ್ರಕರಣವನ್ನು Mens Rea (ಅಪರಾಧಿಕ ಮನಸ್ಸು) ಇಲ್ಲದ ಪ್ರಕರಣವೆಂದೇ ಪೊಲೀಸರು ಕೇಸು ದಾಖಲಿಸಿ, ಅಪಘಾತವೆಸಗಿದ ವ್ಯಕ್ತಿಗೆ legal formalitiesನ ಆರಂಭದ ಹಂತದಲ್ಲಿಯೇ Police Station Bail ಸಿಗುವಂತೆ ಮಾಡುತ್ತಾರೆ. Drunk and drive ಕೇಸಲ್ಲಿ ಇದರ ಪ್ರಕ್ರಿಯೆಗಳು ಸ್ವಲ್ಪ ಬೇರೆ ರೀತಿಯ ಸ್ವರೂಪದಲ್ಲಿರುತ್ತವೆ, ಅಷ್ಟೇ.
ಆದರೆ, ಒಬ್ಬ ಸಂಶೋಧಕನಿಗಿರಬೇಕಾದ empirical research interestನ ಗುಣಗಳು ಕನ್ನಡ ಸಿನಿಮಾದ ಮಂದಿಗೆ ಯಾವತ್ತೂ ಮೈಗೂಡಿದ ಉದಾಹರಣೆಯೇ ಇಲ್ಲ. ಬಹಳ ಮುಖ್ಯವಾಗಿ ಕನ್ನಡ ಸಿನಿಮಾಗಳ ನಿರ್ದೇಶಕರು ಇತಿಹಾಸ, ಕಾನೂನು, ಜಾತಿ, ಧರ್ಮಗಳ ಸತ್ಯಾಸತ್ಯತೆಯನ್ನು ಅರಿಯುವಲ್ಲಿ, ಅದನ್ನು ತೆರೆಯ ಮೇಲೆ ಮಂಡಿಸುವಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಇದೊಂದು ರೀತಿ ಸದಾ ಭ್ರಮೆಯಲ್ಲಿ ತೇಲುವ ಆರಾಮಜೀವಿಗಳ ಸುಖಿಲೋಕ.
ಅಪಘಾತದ ಪ್ರಕರಣಗಳಲ್ಲಿ police formalities and police enquiry procedure ಕುರಿತು ಒಬ್ಬ ಟ್ರಾಫಿಕ್ ಪೊಲೀಸ್ ಬಳಿ ಮಾಹಿತಿ ಕೇಳಿದ್ದರೆ ಸಾಕಿತ್ತು; ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ghat sectionನಲ್ಲಿ ಬ್ರೇಕ್ ತುಂಡಾದ ಲಾರಿಯಂತೆ ಚಲಿಸುತ್ತಿರಲಿಲ್ಲ.
ಕನ್ನಡ ಸಿನಿಮಾಗಳ ಪ್ರೇಕ್ಷಕ ಪೆದ್ದನಾಗಿರುವುದರಿಂದಲೇ ಕಾನೂನಿನ ಸರಳ ತಿಳುವಳಿಕೆಯಾಗಲೀ, ತರ್ಕವಾಗಲೀ ಇಲ್ಲದ ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ… ತರಹದ ಸಿನಿಮಾಗಳ ಇಲ್ಲಿ ಬಂದು ದುಡ್ಡು, ಹೆಸರು ಮಾಡುತ್ತವೆ.
– ಕೆ.ಎಲ್.ಚಂದ್ರಶೇಖರ್, ಐಜೂರ್, ಕಾನೂನು ಅಧ್ಯಾಪಕರು




