ಜೋಗುಪಾಳ್ಯ ವಾರ್ಡ್: ಗುರುಪೂರ್ಣಿಮಾ ಕಾರ್ಯಕ್ರಮ

5 years ago

ಬೆಂಗಳೂರು: ದೇಶಭಕ್ತಿ, ಸಮಾಜ ಸಂಘಟನೆ ಮತ್ತು ಸಮಾಜ ಸೇವೆ ಹಾಗೂ ಉತ್ತಮ ಜೀವನಶೈಲಿಗೆ ಆರ್.ಎಸ್.ಎಸ್. ನೀಡಿದ ಮಾರ್ಗದರ್ಶನದಿಂದ ಸಾಧ್ಯವಾಯಿತು. ಆರ್.ಎಸ್.ಎಸ್. ಸಂಘಟನೆಯಿಂದ ಶಿಸ್ತ್ರು, ಶ್ರದ್ದೆ ಮತ್ತು ತಾಳ್ಮೆ ಕಲಿಸಿಕೊಟ್ಟಿದೆ. ರಾಜಕೀಯ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯನಾಗಿ, ಮಹಾಪೌರನಾಗಿ ಜನ ಸೇವೆ ಮಾಡಲು ನನ್ನನು ಆರ್.ಎಸ್.ಎಸ್. ಪ್ರೇರಣೆ ನೀಡಿದೆ. ತಾಯಿ ಮೊದಲ ಗುರುವಾಗಿ ಮತ್ತು ಶಿಕ್ಷಕರು, ಆರ್.ಎಸ್.ಎಸ್. ಸಂಘಟನೆ ಗುರುಗಳ ಸ್ಥಾನದಲ್ಲಿ ನಿಂತು ಬೆಳಸಿದರು ಎಂದು ಮಾಜಿ ಮೇಯರ್ ಗೌತಮ್ ಕುಮಾರ್ ಹೇಳಿದರು.

ಜೋಗುಪಾಳ್ಯ ವಾರ್ಡ್ ನಲ್ಲಿ  ಆರ್.ಎಸ್.ಎಸ್. ವತಿಯಿಂದ ಗುರುಪೂರ್ಣಿಮಾ ಹಬ್ಬ ಪ್ರಯುಕ್ತ ಗುರು ಉತ್ಸವ ಕಾರ್ಯಕ್ರಮವನ್ನು ರಾಮಕೃಷ್ಣ ಶಾಲೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಮಾಜಿ ಮೇಯರ್ ಗೌತಮ್ ಕುಮಾರ್, ಆರ್.ಎಸ್.ಎಸ್.  ಭಾಷಣಕಾರ ಪ್ರಭು, ಯದುಕುಮಾರ್, ಚಂದ್ರಕುಮಾರ್ ಭಗವಾ ಧ್ವಜಾರೋಹಣ ಮಾಡಿ ಹಾಗೂ ರಾಷ್ಟೀಯ ಜನಸಂಘದ ಶ್ಯಾಮಪ್ರಸಾದ್ ಮುಖರ್ಜಿ, ಮಾಧವ ಸದಾಶಿವ ಗೋಳ್ವಾಲ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜೋಗುಪಾಳ್ಯದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ನಮಗೆ ಗುರುಗಳೆಂದರೆ ಭಗವಾಧ್ವಜ ಅದಕ್ಕೆ ನಮಸ್ಕರಿಸಿ, ಸಂಘದ ಕಾರ್ಯಕರ್ತರಿಂದ ಗುರುದಕ್ಷಿಣಿ ಸಂಗ್ರಹ ಮಾಡಿ ಸಮಾಜದ ಅಭಿವೃದ್ದಿಗೆ ವಿನಿಯೋಗಿಸಲಾಗುವುದು ಎಂದರು.

Leave a Reply