ಮಂಗಳೂರು: ದ.ಕ ಜಿಲ್ಲೆಯಲ್ಲಿ ಉಳುವವನೇ ಹೊಲದೊಡೆಯ ಕಾನೂನು ಜಾರಿಗೊಳಿಸಲು ಕಮ್ಯುನಿಸ್ಟ್ ನಾಯಕರು ಭೂ ಮಾಲೀಕರನ್ನು ದಿಟ್ಟವಾಗಿ ಎದುರಿಸಿ ನಡೆಸಿದ ಸಮರಧೀರ ಹೋರಾಟದ ಫಲವಾಗಿ ಬಡ ರೈತರು ಭೂಮಿಯ ಒಡೆಯರಾಗಲು ಸಾಧ್ಯವಾಗಿದೆ. ಮಾತ್ರವಲ್ಲದೆ ಜಿಲ್ಲೆಯ ಕಾರ್ಮಿಕ ವರ್ಗದ ಹಾಗೂ ಜನಸಾಮಾನ್ಯರ ಯಾವುದೇ ಪ್ರಶ್ನೆಗಳು ಎದುರಾದಾಗ ಅವುಗಳ ವಿರುದ್ದ ಹೋರಾಟ ನಡೆಸಿ ಜನತೆಯ ಗಟ್ಟಿ ಧ್ವನಿಯಾಗುವಲ್ಲಿ ಕಮ್ಯುನಿಸ್ಟ್ ಪಕ್ಷದ ಪಾತ್ರವೇ ಹಿರಿದಾದದ್ದು ಎಂದು CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಹೇಳಿದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸಿಪಿಐಎಂ ಕುತ್ತಾರು ಯುವಜನ ಶಾಖೆಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವಲ್ಲಿ ತ್ಯಾಗ ಬಲಿದಾನದ ಪರಂಪರೆಯನ್ನು ಕೂಡ ಕಮ್ಯುನಿಸ್ಟ್ ಪಕ್ಷ ಹೊಂದಿದೆ ಎಂದರು.
CPIM ಯುವನಾಯಕರಾದ ಡಾ.ಜೀವನ್ ರಾಜ್ ಕುತ್ತಾರು ಮಾತನಾಡಿ, ಜಾಗತಿಕ ಮಟ್ಟದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಭಾವ ವಿಸ್ತಾರಗೊಳ್ಳುತ್ತಿದ್ದು, ಯುವಜನತೆ ಅತ್ಯಧಿಕ ಸಂಖ್ಯೆಯಲ್ಲಿ ಸಮಾಜವಾದಿ ಸಿದ್ದಾಂತದತ್ತ ಆಕರ್ಷಣೆಗೊಳಗಾಗುತ್ತಿದ್ದಾರೆ. ಇತ್ತೀಚಿಗೆ ಜಗತ್ತಿನ ಹಲವು ದೇಶಗಳಲ್ಲಿ ಎಡಪಂಥೀಯ ಸರಕಾರಗಳು ಅಸ್ತಿತ್ವಕ್ಕೆ ಬಂದಿರುವುದೇ ಸಾಕ್ಷಿ. ಬಂಡವಾಳಶಾಹಿ ಸಿದ್ದಾಂತದ ಲಾಭಕೋರತನ ಬಹುಸಂಖ್ಯಾತ ಜನರನ್ನು ಹಸಿವಿನ ಕೂಪಕ್ಕೆ ತಳ್ಳುತ್ತಿದ್ದು ಜನತೆಯ ಬದುಕನ್ನೇ ಸರ್ವನಾಶಮಾಡುತ್ತಿದೆ ಎಂದರು.
ಪ್ರಾರಂಭದಲ್ಲಿ ಹಿರಿಯ ಮುಖಂಡರಾದ ಕಾಂ. ರಾಮಚಂದ್ರ ತೇವುಲ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಸಮಿತಿ ಸದಸ್ಯರಾದ ಕಾಂ. ಕೃಷ್ಣಪ್ಪ ಸಾಲ್ಯಾನ್, ಮುನ್ನೂರು ಗ್ರಾಮ ಸಮಿತಿ ಕಾರ್ಯದರ್ಶಿ ಕಾಂ. ಶೇಖರ್ ಕುಂದರ್, ಗ್ರಾಮ ಸಮಿತಿ ಸದಸ್ಯರಾದ ಚಂದ್ರಹಾಸ್. ಡಿ, ಸುನೀಲ್ ತೇವುಲ, ಶಾಖಾ ಕಾರ್ಯದರ್ಶಿ ಶ್ರಾವಣ್ ತೇವುಲ ಉಪಸ್ಥಿತರಿದ್ದರು.
ಸಮ್ಮೇಳನವು ಸ್ಥಳೀಯ ರಸ್ತೆಗಳ ಅವ್ಯವಸ್ಥೆ ಹಾಗೂ ಬಡಜನರಿಗೆ ನಿವೇಶನ ನೀಡಬೇಕೆಂಬ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ಕೈಗೊಂಡಿತು. ಬಳಿಕ ಮುಂದಿನ ಮೂರು ವರ್ಷಗಳ ಅವಧಿಗೆ ಸುನಿಲ್ ತೇವುಲರವರನ್ನು ನೂತನ ಶಾಖಾ ಕಾರ್ಯದರ್ಶಿಯನ್ನಾಗಿ ಆರಿಸಲಾಯಿತು.




