ರೋಗಿಗಳು ಗುಣಮುಖರಾಗಲುು ಹೊಸ ಬೆಳಕು: ಡಾ.ಸುನೀತಾ ರಾಣ ಅಗರವಾಲ್
ಬೆಂಗಳೂರು: ಕಾನ್ ಕಾರ್ಡ್ ಹೋಟೆಲ್ ಸಭಾಂಗಣದಲ್ಲಿ ಡಾ. ಅಗರ್ವಾಲ್ ಆಸ್ಪತ್ರೆಗಳು ಮತ್ತು ಜೀನ್ ಸಂಶೋಧನಾ ಪ್ರತಿಷ್ಠಾನ ವತಿಯಿಂದ ಜೆನೆಟಿಕ್ ಸಂಶೋಧನೆ ಮತ್ತು ಡಿಎನ್ಎ ಮೈಕ್ರೋನ್ ಮ್ಯಾನಿಪ್ಯುಲೇಷನ್ಗಾಗಿ ಇನ್ವರ್ಟೆಡ್ ಮೈಕ್ರೋಸ್ಕೋಪ್ ಕಾರ್ಯಗಾರ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ಚೈತನ್ಯಾನಂದ ಸ್ವಾಮೀಜಿ, ಜೆನಟಿಕ್ ಸಂಶೋಧನೆ ಸಂಸ್ಥೆ ಮತ್ತು ಡಾ.ಅಗರವಾಲ್ ಆಸ್ಪತ್ರೆಯ ಅಧ್ಯಕ್ಷೆ ಡಾ. ಸುನಿತಾ ರಾಣಾ ಅಗರ್ವಾಲ್, ನಟಿ ಅಂಗನಾ ರಾಯ್ ನೆರವೇರಿಸಿದರು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಚೈತನ್ಯನಂದಾ ಸರಸ್ವತಿ ಸ್ವಾಮೀಜಿ ಮಾತನಾಡಿ, ಜೆನೆಟಿಕ್ಸ್ ಚಿಕಿತ್ಸೆಯಿಂದ ರೋಗಿಗಳಿಗೆ ಬಹಳ ಉಪಯೋಗವಾಗಿದೆ. ಜಿನೆಟೆಕ್ ಚಿಕಿತ್ಸೆ ಕಳೆದ 12 ವರ್ಷಗಳಿಂದ ಪಡೆಯುತ್ತಿದ್ದೇನೆ ಇದರಿಂದ ಅನುಕೂಲವಾಗಿದೆ. ಬಲಗಣ್ಣು ತೊಂದರೆಯಾಗಿತ್ತು. ಎಡಗಣ್ಣು ಟ್ಯೂಮರ್ ನಿಂದ ಬಳಲುತ್ತಿದೆ. ನನ್ನ ಮೇಲೆ ಒಂದು ತಿಂಗಳ ಕ್ಲಿನಿಕಲ್ ಟ್ರಯಲ್ ನಂತರ ಆರೋಗ್ಯದಲ್ಲಿ ಉತ್ತಮ ಸುಧಾರಣೆಯಾಯಿತು ಎಂದರು.
ಭಾರತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಿದೆ. ಇಡಿ ವಿಶ್ವವೇ ಮೆಚ್ಚುವಂತಾಗಿದೆ. ಅಮೇರಿಕಾಗಿಂತ ಭಾರತ ದೇಶದಲ್ಲಿ ವೈದ್ಯಕೀಯ ಕ್ಷೇತ್ರ ಮುಂದಿದೆ. ಹೀಲಿಂಗ್ ವೈದ್ಯಕೀಯ ಚಿಕಿತ್ಸೆ ಮೂಲಕ ರೋಗ ವಾಸಿಯಾಗುತ್ತಿದೆ. ಡಾ.ಸುನಿತಾ ಅಗರವಾಲ್ ರವರು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಡಾ.ಸುನೀತಾ ರಾಣಾ ಅಗರವಾಲ್ ಮಾತನಾಡಿ, ಡಾ. ಅಗರವಾಲ್ ಆಸ್ಪತ್ರೆಗಳು ಮತ್ತು ಜೆನ್ ರಿಸರ್ಚ್ ಫೌಂಡೇಶನ್ ಅಫ್ರಾಲ್ನಾಲಜಿ (ಕಣ್ಣಿನ ವೈದ್ಯಕೀಯ ಮತ್ತು ಜನಿಟಿಕ್ ಸಂಶೋಧನೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಈಗ, ಈ ಸಂಸ್ಥೆಗಳು ಅತ್ಯಾಧುನಿಕ ತಂತ್ರಜ್ಞಾನಯುತ ಇನ್ವರ್ಟೆಡ್ ಫೇಸ್ ಕಾನ್ಸಾಸ್ಟ್ ಮೈಕ್ರೋಸ್ಕೋಪ್ ಅನ್ನು ಸಂಶೋಧನೆಗೆ ಬಳಸಲಿದ್ದಾರೆ, ಇದು ಜನಿಟಿಕ್ ಅಧ್ಯಯನ ಮತ್ತು ಡಿಎನ್ಎ ಮೈಸ್ಕೋನ್ ಮ್ಯಾನಿಪ್ಯುಲೇಷನ್ ಗಾಗಿ ಸಹಾಯಕವಾಗಲಿದೆ ಎಂದರು.
ಹೆಚ್ಚಿನ ಜನರು ಸಂಶೋಧಕರು ಆಗಿದ್ದಾರೆ. ಹೆಚ್ಚಿನ ಉಪಕರಣಗಳು ಸಂಶೋಧನೆಗೆ ಬಂದಿವೆ. ಆದರೆ ಇವುಗಳ ಸಂಯೋಜನೆಯಿಂದ ಅಸಾಧಾರಣ ಫಲಿತಾಂಶ ಬರಬೇಕು ಎಂಬುದರ ತುದಿಗೆ ನಾವು ಮುಟ್ಟಲು ಹೊರಟಿದ್ದೇವೆ ಎಂದರು.
ಈಗ ಸ್ನಾಯು ಜೀವಶಾಸ್ತ್ರದ (Morphogenetic Activator of Nucleic Acids – MANA) ಸಹಾಯದಿಂದ ಕೇವಲ ಒಂದು ಹನಿಯಷ್ಟು ರಕ್ತವನ್ನು ಬಳಸಿ ರೋಗಿಯದೇ ಆರೋಗ್ಯಕರ ಭ್ರೂಣ ಡಿಎನ್ಎ ಮತ್ತು ಸ್ಟೆಮ್ ಸೆಲ್ಗಳನ್ನು ಉತ್ಪಾದಿಸಿ, ಅದನ್ನು ರೋಗಿಯ ಚಿಕಿತ್ಸೆಗೆ ಬಳಸಬಹುದು. ಇದನ್ನು ಪ್ರಪಂಚದಲ್ಲಿ ಕೇವಲ ಜೆನ್ ರಿಸರ್ಚ್ ಫೌಂಡೇಶನ್ ಮತ್ತು ಡಾ. ಅಗರವಾಲ್ ಆಸ್ಪತ್ರೆಗಳು ಮಾತ್ರ ಕೈಗೊಳ್ಳುತ್ತಿವೆ ಎಂದು ಮಾಹಿತಿ ನೀಡಿದರು.
21 ವರ್ಷಗಳಲ್ಲಿ 20000ಕ್ಕೂ ಹೆಚ್ಚು ರೋಗಿಗಳಿಗೆ ನೀಡಲಾಗಿದೆ. ಡಿ.ಎನ್.ಎ.ವಯಸ್ಸಾದಂತೆ ಕುಗ್ಗಿಹೋಗುತ್ತದೆ. ಇದರಿಂದ ಮಧುಮೇಹ, ಕಿಡ್ನಿ ಸಮಸ್ಯೆ, ಮೆದಳು, ನರಗಳ ಸಂಬಂಧಿತ ಖಾಯಿಲೆಗಳು ಬರುತ್ತವೆ. ಲೈವ್ ಸೆಲ್ ಇಮೇಜಿಂಗ್ ತಂತ್ರಜ್ಞಾನ ಬಳಸಿ ಆರೋಗ್ಯಕರ ಡಿ.ಎನ್.ಎ. ರೋಗಿಯ ದೇಹ ಸೇರಿಸುವುದರಿಂದ ರೋಗ ವಾಸಿಯಾಗಿ ಆರೋಗ್ಯವಂತರಾಗುತ್ತಾರೆ. ಡಿ.ಎನ್.ಎ.ಯಲ್ಲಿ ಕ್ರಾಂತಿಕಾರಕ ಸಂಶೋಧನೆಯಾಗುತ್ತಿದೆ. ರೋಗಿಗಳು ಗುಣಮುಖರಾಗಲು ಹೊಸ ಬೆಳಕನ್ನು ನೀಡಿದೆ ಎಂದರು.
ನಟಿ ಅಂಗನ ರಾಯ್ ಮಾತನಾಡಿ, ಡಾ.ಸುನಿತಾ ಅಗರವಾಲ್ ರವರು ಜೆನಟೆಕ್ ಕುರಿತು ಬಹಳ ಅಧ್ಯಯನ ಮಾಡುತ್ತಿದ್ದಾರೆ. ಇದರಿಂದ ಜನರಲ್ಲಿ ರೋಗ ತಡೆಗಟ್ಟಲು ಅನುಕೂಲವಾಗಲಿದೆ. ಕೊರೋನ ನಂತರ ಲಕ್ಷಾಂತರ ಜನರಿಗೆ ಅಡ್ಡ ಪರಿಣಾಮ ಬೀರಿತು. ಇದರಿಂದ ರೋಗ ಎದುರಿಸುವ ಶಕ್ತಿ ಪಡೆಯಲು ಡಾ.ಸುನಿತಾ ಅಗರವಾಲ್ ರವರ ಸಲಹೆ ಪಡೆಯಬಹುದು ಎಂದರು.









