ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

3 years ago

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಂ.ಸಿ.ಬಡಾವಣೆಯಲ್ಲಿ ನಿರ್ಮಿಸಿರುವ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಯನ್ನು ಸಿಎಂ ಬಸವರಾಜ್ ಎಸ್. ಬೊಮ್ಮಾಯಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಿದ್ದಗಂಗಾ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಂಜಾವದೂತ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿರವರು, ವಸತಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್, ವೈದ್ಯಕೀಯ ಸಚಿವ ಸುಧಾಕರ್, ಅಬಕಾರಿ ಸಚಿವ ಕೆ.ಗೋಪಾಲಯ್ಯ ಲೋಕಾರ್ಪಣೆ ಮಾಡಿದರು.

ಮುಖ್ಯಮಂತ್ರಿಗಳಾದ ಬಸವರಾಜ್ ಎಸ್ ಬೊಮ್ಮಾಯಿ ಮಾತನಾಡಿ, ಆರಾಧ್ಯ ದೈವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಸವಿ ಸ್ಮರಣೆಯಲ್ಲಿ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಬೆಂಗಳೂರು ನಗರ ಡೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ, ಜನಸಂಖ್ಯೆ ಮತ್ತು ವಾಹನ ಸಂಖ್ಯೆ ಏರುತ್ತಿದೆ. ಅನಿವಾರ್ಯ ಮತ್ತು ಸವಾಲಿನಲ್ಲಿ ಅಭಿವೃದ್ದಿ ಪಡಿಸಬೇಕು. ವಿ.ಸೋಮಣ್ಣ ಎಂದರೆ ವಿ.ಎಂದರೆ ವಿಕ್ಟರಿ ಎಸ್ ಎಂದರೆ ಸ್ಪೀಡ್ ಎಂದು ಅರ್ಥ. ಹಗಲಿರಳು ಶ್ರಮಿಸುತ್ತಿರವ ವಿ.ಸೋಮಣ್ಣರವರು ಕ್ರಿಯಾಶೀಲ ವ್ಯಕ್ತಿ, ಗೋವಿಂದರಾಜನಗರ ಕ್ಷೇತ್ರದ ಜನರು ಪುಣ್ಯವಂತರು ಎಂದರು.

ಬೆಂಗಳೂರಿನ ಅಭಿವೃದ್ದಿಗಾಗಿ 6500 ನಗರೋತ್ಥಾನ ಅನುದಾನ ನೀಡಲಾಗಿದೆ. ಪ್ರವಾಹ ಸಮಸ್ಯೆ ನಿವಾರಣೆಗಾಗಿ 1800 ಕೋಟಿ ನೀಡಲಾಗಿದೆ. ನಗರದ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಮೂಲಭೂತ ಸಮಸ್ಯೆ ನಿವಾರಣೆಗಾಗಿ ಮತ್ತು 75 ಸ್ಲಂ ಪ್ರದೇಶ 75 ಕೆರೆ ಉಳಿಸಲು ಅಮೃತ ಯೋಜನೆಯಿಂದ ಅನುದಾನ ನೀಡಲಾಗಿದೆ ಎಂದರು.

ಬ್ರಾಂಡ್ ಬೆಂಗಳೂರು ಉಳಿಸಲು ಎಲ್ಲರ ಶ್ರಮವಿದೆ.
ಅಂತರಾಷ್ಟಿಯ ಮಟ್ಟದಲ್ಲಿ ಬೆಂಗಳೂರು ನಗರ ಕೀರ್ತಿ ಬರುವಂತೆ ಮಾಡಲಾಗುವುದು. ಬೆಂಗಳೂರು ನಗರ ನಮಗೆ ಅನ್ನ, ಆಶ್ರಯ, ಉದ್ಯೋಗ ಕೊಟ್ಟಿದೆ. ಬೆಂಗಳೂರು ನಗರಕ್ಕೆ ಕೀರ್ತಿ ಬರುವಂತೆ ಮಾಡಬೇಕು ಎಂದರು.

ಸ್ವಾತಂತ್ಯ್ರ ಪೂರ್ವದಿಂದ ಮಠಗಳು ಶಿಕ್ಷಣ ಅಭಿವೃದ್ದಿ ಶ್ರಮಿಸಿದೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು ರಾಜ್ಯದಲ್ಲಿ ಕಾಮಾನ್ ಮ್ಯಾನ್ ಎಂಬ ಹೆಸರು ಗಳಿಸಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿರವರು ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕುರಿತು ಅಪಾರ ಸಾಧನೆ ಮಾಡಿದ್ದಾರೆ ಎಂದರು.

ಒಂದೇ ಸೂರಿನಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿಗಲಿದೆ. ಒತ್ತಡದ ಜೀವನದಿಂದ ಆನಾರೋಗ್ಯ ಪೀಡಿತರಾಗುವುದು ಸಾಮಾನ್ಯವಾಗಿದೆ. ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗಬೇಕು ಎಂದರು.

ಭಾರತ ದೇಶ ಮೆಡಿಕಲ್ ಹಬ್ ಆಗಿ ರೂಪಗೊಂಡಿದೆ.
ಕೊರೋನ ಸಂದರ್ಭದಲ್ಲಿ ಪ್ರಧಾನಿ ಬಳಿ ಕೇಳಿದಾಗ ವ್ಯಾಕ್ಸಿನ್ ನಮ್ಮ ದೇಶದಲ್ಲಿ ತಯಾರು ಮಾಡಬೇಕು ಎಂದು ಪ್ರಧಾನಿರವರು ತೀರ್ಮಾನ ಮಾಡಿ, ಭಾರತದಲ್ಲಿ ಮೊದಲ ಬಾರಿಗೆ ಲಸಿಕೆ ಕಂಡು ಹಿಡಿಯಲಾಯಿತು ಎಂದರು.

ಈ ಮೊದಲು ಬೇರೆ ದೇಶಗಳಲ್ಲಿ ಲಸಿಕೆ ಬಂದು ಹಲವು ವರ್ಷಗಳ ನಂತರ ನಮ್ಮ ದೇಶಕ್ಕೆ ಬರುತ್ತಿತ್ತು. ಆದರೆ ಪ್ರಧಾನಿಯವರ ದೃಢ ನಿರ್ಧಾರದಿಂದ 200 ಕೋಟಿ ಕೊರೋನ ಲಸಿಕೆ ಹಾಕಲಾಯಿತು. ವೈದ್ಯರು ಇಲ್ಲದೇ ಬಹಳ ಸಂಕಷ್ಚದಲ್ಲಿ ಇದ್ದ ಇಂದು ಪ್ರತಿವರ್ಷ 1ಲಕ್ಷ ವೈದ್ಯರು ಹೊರ ಬರುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಯೋಗ, ಆರ್ಯುವೇದ ಮತ್ತು ಸಿರಿಧಾನ್ಯ ಬಳಸಬೇಕು ಎಂದು ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಶ್ರೀಗಳಾದ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದದಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಇಂದು ಸಾರ್ವಜನಿಕರ ಉಪಯೋಗಕ್ಕೆ ಲೋಕರ್ಪಣೆ ಮಾಡಲಾಗಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಹೊಸ ಮೈಲುಗಲ್ಲು ಸಾಧಿಸಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಸಮರ್ಪಣೆ ಮಾಡಲಾಗಿದೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ನೂರು ವರ್ಷದ ಇತಿಹಾಸವಿರುವ ಮಹಾನಗರ ಪಾಲಿಕೆಗೆ ಇದು ಪ್ರಪ್ರಥಮ ಆಸ್ಪತ್ರೆಯಾಗಿದೆ ಎಂದರು.

ಶಿವಕುಮಾರ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮೀಜಿ ರವರು ನನ್ನ 40 ವರ್ಷದ ರಾಜಕೀಯ ಯಶ್ವಸಿಗೆ ಸ್ಪೂರ್ತಿಯಾಗಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಡವರು, ಮಧ್ಯಮವರ್ಗದವರ ಜನಸಂಖ್ಯೆ ವಾಸವಿದ್ದಾರೆ. ಧ್ವನಿ ಇಲ್ಲದ ಜನರಿಗೆ,ಬಡವರ ಅನುಕೂಲಕ್ಕೆ ಆಸ್ಪತ್ರೆ ನಿರ್ಮಿಸಲಾಗಿದೆ ಎಂದರು.

ಪಂತರಪಾಳ್ಯದಲ್ಲಿ 200 ಹಾಸಿಗೆ ಸಾಮರ್ಥ್ಯದ ಹೈಟೆಕ್ ಆಸ್ಪತ್ರೆಯನ್ನ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸವಿ ಸ್ಮರಣೆಯಲ್ಲಿ ಮುಂದಿನ ತಿಂಗಳು ಉದ್ಘಾಟನೆ ಮಾಡಲಾಗುವುದು. ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ ಎಂಬಂತೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಪರಮ ಶಿಷ್ಯನಾದ ನಾನು ಗುರುವಿಗೆ ಕಾಣಿಕೆಯನ್ನ ಸಲ್ಲಿಸಿದ್ದೇನೆ ಎಂದರು.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, 500 ವರ್ಷಗಳ ಹಿಂದೆ ಬೆಂಗಳೂರುನಗರ ಆಸ್ಪಿತ್ವಕ್ಕೆ ಬಂತು. ಯಾವ ದೇಶದಲ್ಲಿ ಆರೋಗ್ಯವಂತರಾದ ಹೆಚ್ಚು ಜನ ಇದ್ದರೆ, ಆ ದೇಶ ಸದೃಡವಾಗಿರುತ್ತದೆ. ಹಣವಿಲ್ಲದೇ ಚಿಕಿತ್ಸೆ ಪಡೆಯದೇ ಸಾಯುವವರ ಸಂಭವ ಹೆಚ್ಚು. ಬಡಜನರಿಗೆ ಉಚಿತ ಆರೋಗ್ಯ ಸೇವೆಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜನರ ಸೇವೆ ಆರಂಭವಾಗಿದೆ. ಗುರುಗಳ ಸೇವೆ, ನೊಂದವರ ಪರ ಸೇವೆ ಮತ್ತು ವಿನೀತರಾಗಿ ಇರುವವರಿಗೆ ಹೆಚ್ಚಿನ ಆಯಸ್ಸು,ಆರೋಗ್ಯ ಲಭಿಸುತ್ತದೆ ಎಂದು ಹೇಳಿದರು.

ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಎಲ್ಲರಿಗೂ ಆರೋಗ್ಯ ಬೇಕು, ಆರೋಗ್ಯವೆ ಭಾಗ್ಯ ಮತ್ತು ಆನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ಬಂದಾಗ ಉತ್ತಮ ವೈದ್ಯಕೀಯ ಸೌಲಭ್ಯವಿದೆ. ಉತ್ತಮ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಹೊರಬನ್ನಿ ಎಂದು ಆಶೀರ್ವಾದ ಮಾಡಬಹುದು ಎಂದರು.

ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ಕೊವಿಡ್ ಸಾಂಕ್ರಮಿಕ ರೋಗದಿಂದ ಹಲವಾರು ಕುಟುಂಬದಲ್ಲಿ ಸಾವು, ನೋವು ಸಂಭವಿಸಿತು. ಇಂದು ಜನರಿಗೆ ಗುರುಗಳ ಆಶೀರ್ವಾದದಿಂದ ಇಂದು ಉತ್ತಮ ಆಸ್ಪತ್ರೆ ನಿರ್ಮಿಸಲು ಕಾರಣವಾಗಿದೆ. ದೂರದೃಷ್ಟಿ, ಚಿಂತನೆಯಿಂದ ಕೆಲಸ ಮಾಡಬೇಕು, 500 ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಯೋಜನಾಬದ್ದವಾಗಿ ಬೆಂಗಳೂರು ನಗರ ನಿರ್ಮಾಣ ಮಾಡಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಶ್ರೀ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನ ವಿಧಾನಸೌಧ ಮುಂಭಾಗದಲ್ಲಿ ಪ್ರತಿಷ್ಟಾಪನೆ ಮಾಡಲು ನಿರ್ಧರಿಸಿ, ಗುದ್ದಲಿಪೂಜೆ ನೇರವೆರಿಸಿ, ನುಡಿದಂತೆ ನಡೆದ ಮುಖ್ಯಮಂತ್ರಿಗಳು ಎಂದು ಹೇಳಿದರು.

ಶ್ರೀಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕಟ್ಟಿದ ಮಹಾನಗರ ಬೆಂಗಳೂರು, ನಗರ ನಿವಾಸಿಗಳಾದ ಬಡವರು, ಮಧ್ಯಮವರ್ಗದವರಿಗೆ ಉಚಿತ ಆರೋಗ್ಯ ಸೇವೆ ಲಭಿಸಲಿದೆ. ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿ ನೀಡಿದರೆ ಸುಖ,ಶಾಂತಿ ನೆಮ್ಮದ್ದಿಯಿಂದ ಬಾಳಬಹುದು ಎಂದು ಹೇಳಿದರು.

ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಶಿಕ್ಷಣ, ಆರೋಗ್ಯ ಮತ್ತು ಪರಿಸರದ ಕುರಿತು ಸಾಧನೆ ಮಾಡಿದ ರಾಜ್ಯದ ಮಹಾನ್ ಸಂತರು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಆಡಳಿತಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶೈಲಜ ಸೋಮಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ರಾಜ್ಯ ಬಿಜೆಪಿ ಮುಖಂಡರಾದ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.

Leave a Reply