ಸೌಹಾರ್ದತೆ, ಅಭಿವೃದ್ಧಿಗಾಗಿ ಪದ್ಮರಾಜ್ ಆರ್ ಪೂಜಾರಿಯವರಿಗೆ ಮತ ನೀಡಿ
ಜಿಲ್ಲೆಯ ಹಾಗೂ ದೇಶದ ಭವಿಷ್ಯ ರೂಪಿಸುವ ಅತ್ಯಂತ ಮಹತ್ವದ ಚುನಾವಣೆಗೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಯಾವುದೇ ಕಾರಣಕ್ಕೂ ವಿಚಲಿತರಾಗದೆ ಧೃಡ ತೀರ್ಮಾನ ಕೈಗೊಳ್ಳಲು ಮುಂದಾಗೋಣ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಕಳೆದ 33 ವರ್ಷಗಳಿಂದ ಜಿಲ್ಲೆಯ ಸೌಹಾರ್ದತೆಯನ್ನು ನಾಶ ಮಾಡಿ ಅಭಿವೃದ್ದಿಗೆ ಕಂಟಕವಾದ ಬಿಜೆಪಿಯನ್ನು ಈ ಬಾರಿ ನಾವು ಸೋಲಿಸಲೇಬೇಕಾಗಿದೆ. ಜಾತಿ ಧರ್ಮ ದೇವರ ಹೆಸರಿನಲ್ಲಿ ಮಾಡಿದ ಅನ್ಯಾಯ ಅನಾಚಾರವನ್ನು ಹಾಗೂ ನೂರಾರು ಅಮಾಯಕ ಯುವಕರ ಪ್ರಾಣವನ್ನು ಮತ್ತು ಬದುಕನ್ನು ಬಲಿ ತೆಗೆದುಕೊಂಡ ಹೃದಯ ವಿದ್ರಾವಕ ಘಟನೆಗಳನ್ನು ತಮ್ಮ ಕಣ್ಣ ಮುಂದೆ ಒಮ್ಮೆ ತನ್ನಿ…..
ದೇಶದ ಸಂಪತ್ತನ್ನು ಲೂಟಿ ಮಾಡಿದ್ದಲ್ಲದೆ, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಜಾತ್ಯತೀತತೆ ಮಾತ್ರವಲ್ಲ; ಸಂವಿಧಾನವೇ ಇರೋದಿಲ್ಲ. ಸರ್ವಾಧಿಕಾರಿ ಫ್ಯಾಸಿಸ್ಟ್ ಮನೋಭಾವ ತಲೆ ಎತ್ತಿ ದೇಶದಲ್ಲಿ ಅರಾಜಕತೆ ತಾಂಡವವಾಡಲಿದೆ. ಜನಸಾಮಾನ್ಯರ ಬದುಕೇ ಸರ್ವನಾಶವಾಗಲಿದೆ.
ಇದು ಕೇವಲ ಚುನಾವಣೆ ಅಲ್ಲ, ದೇಶ ಉಳಿಸುವ ಪ್ರಮುಖ ಕಾಯಕ. ನಿಮ್ಮ ಪ್ರತಿಯೊಂದು ಮತ ದೇಶಕ್ಕಾಗಿ, ದೇಶದ ಉಳಿವಿಗಾಗಿ, ದೇಶದ ಸ್ವಾತಂತ್ರ್ಯ , ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಸಂವಿಧಾನದ ರಕ್ಷಣೆಗಾಗಿ ಮೀಸಲಿಡಬೇಕು. ಇಂಡಿಯಾ ಕೂಟದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯವರಿಗೆ ಮತ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಹಾಗೂ ಸೌಹಾರ್ದತೆಗೆ ಶಕ್ತಿ ನೀಡೋಣ, ಜೊತೆಗೆ ದೇಶ ಉಳಿಸೋಣ, ಜನತೆಯ ಬದುಕನ್ನು ರಕ್ಷಿಸೋಣ…..
- ಸುನಿಲ್ ಕುಮಾರ್ ಬಜಾಲ್




