ಆರ್.ಸಿ.ಬಿ. ವರ್ಸಸ್ ಸಿ.ಎಸ್.ಕೆ

5 years ago

ಶಾರ್ಜಾ: ಭಾರತ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಮುಖಾಮುಖಿಯಾಗಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ನಡುವೆ ಇಂದು ಐಪಿಎಲ್ ಪಂದ್ಯ ನಡೆಯಲಿದೆ.

ಐಪಿಎಲ್ ನ 14ನೇ ಆವೃತ್ತಿಯ ಮೊದಲ ಸುತ್ತಿನಲ್ಲಿ ಆರ್ ಸಿ ಬಿ ಉತ್ತಮ ಪ್ರದರ್ಶನ ನೀಡಿದೆ. ಚೆನ್ನೈ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಜಯಿಸಿ, 2 ಸೋಲುಂಡು 12 ಅಂಕಗಳೊಂದಿಗೆ 2ನೇ ಸ್ಥಾನ ಗಳಿಸಿದೆ. ಆರ್ ಸಿ ಬಿ 6ರಲ್ಲಿ 5ಪಂದ್ಯಗಳಲ್ಲಿ ಜಯಿಸಿ 10 ಅಂಕಗಳಿಸಿ 3ನೇ ಸ್ಥಾನ ಗಳಿಸಿದೆ. ಇದೀಗ ಯಾರು ಪಂದ್ಯ ಗೆಲ್ಲುತ್ತಾರೆ ಎಂಬ ಕುತೂಹಲ ಕ್ರಿಕೆಟ್ ಪ್ರಿಯರಲ್ಲಿ  ಮನೆ ಮಾಡಿದೆ.

Leave a Reply