ಮತ್ತೊಮ್ಮೆ ಈ ಸಲ ಕಪ್ ನಮ್ದೇ ಎಂದ ಆರ್.ಸಿ.ಬಿ. ಫ್ಯಾನ್ಸ್

5 years ago

ಶಾರ್ಜಾ: ಭಾರತ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಈಗಾಗಲೇ ವಿಜಯದ ಕನಸು ಕಾಣುತ್ತಿದ್ದಾರೆ. ಇದು 14ನೇ ಐಪಿಎಲ್ ಆವೃತ್ತಿಯಾಗಿದ್ದು, ಇದುವರೆಗೆ ಬೆಂಗಳೂರು ತಂಡ ಕಪ್ ಗೆಲ್ಲುವುದರಲ್ಲಿ ಯಶಸ್ವಿಯಾಗಿಲ್ಲ.

ರಾಜಸ್ಥಾನ್ ರಾಯಲ್ಸ್ – 2008,  ಡೆಕ್ಕನ್ ಚಾರ್ಜರ್ಸ್ – 2009, ಚೆನ್ನೈ ಸೂಪರ್ ಕಿಂಗ್ಸ್ – 2010, 2011, ಕೊಲ್ಕೊತ್ತಾ ನೈಟ್ ರೈಡರ್ಸ್ – 2012, ಮುಂಬೈ ಇಂಡಿಯನ್ಸ್, 2013, ಕೊಲ್ಕೊತ್ತಾ ನೈಟ್ ರೈಡರ್ಸ್ – 2014, ಮುಂಬೈ ಇಂಡಿಯನ್ಸ್ – 2015, ಸನ್ ರೈಸರ್ಸ್ ಹೈದರಾಬಾದ್ – 2016, ಮುಂಬೈ ಇಂಡಿಯನ್ಸ್ – 2017, ಚೆನ್ನೈ ಸೂಪರ್ ಕಿಂಗ್ಸ್ – 2018, ಮುಂಬೈ ಇಂಡಿಯನ್ಸ್ – 2019, 2020 ಗೆಲುವು ದಾಖಲಿಸಿವೆ.

ಈ ನಡುವೆ ಆರ್.ಸಿ.ಬಿ ನಾಯಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡದ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಜಾಲತಾಣಗಳಲ್ಲಿ ಹುಯ್ಯಲೆಬ್ಬಿಸಿದ್ದಾರೆ. ಎಲ್ಲಕ್ಕೂ ಕಾಲವೇ ಉತ್ತರ ನೀಡಬಲ್ಲದು.

Leave a Reply