ಬೆಂಗಳೂರು ವರ್ಸಸ್ ಪಂಜಾಬ್ ಐಪಿಎಲ್ ಪಂದ್ಯ

5 years ago

ಶಾರ್ಜಾ: ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಪಂದ್ಯ ಇಂದು ಮಧ್ಯಾಹ್ನ 3:30ಕ್ಕೆ ನಡೆಯಲಿದೆ.  ಬೆಂಗಳೂರು ಈ  ಪಂದ್ಯದಲ್ಲಿ ಗೆದ್ದಲ್ಲಿ ಪ್ಲೇ ಆಫ್‌ ಪ್ರವೇಶ ನಿಶ್ಚಿತವಾಗಲಿದೆ. ಚೆನ್ನೈ, ಡೆಲ್ಲಿ ತಂಡಗಳು ಪ್ಲೇ ಆಫ್ ಹಂತ ತಲುಪಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಬೆಂಗಳೂರು ಇಂದಿನ ಪಂದ್ಯ ಗೆಲ್ಲುವ ಮೂಲಕ ಪ್ಲೇಆಫ್ ಪ್ರವೇಶಿಸುವ ಉತ್ಸಾಹದಲ್ಲಿದೆ.

ಹತ್ತು ಅಂಕ ಗಳಿಸಿರುವ ಪಂಜಾಬ್  ಮುಂದಿನ 2 ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಶುಕ್ರವಾರ ಕೋಲ್ಕತ್ತ ವಿರುದ್ಧ ಜಯಿಸಿರುವ ಪಂಜಾಬ್ ಇಂದು ಕೂಡ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ.

ತಂಡಗಳ ಸದಸ್ಯರು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ಕೆ.ಎಸ್. ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎ.ಬಿ.ಡಿವಿಲಿಯರ್ಸ್, ಡ್ಯಾನ್ ಕ್ರಿಸ್ಟಿಯನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ಕೈಲ್ ಜೆಮಿಸನ್, ನವದೀಪ್ ಸೈನಿ, ಆಕಾಶ್‌ದೀಪ್, ಎಂ.ಅಜರುದ್ದೀನ್, ವನಿಂದು ಹಸರಂಗ, ಟಿಮ್ ಡೇವಿಡ್.

ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ), ಮಯಾಂಕ್ ಅಗರವಾಲ್, ಆರ್ಷದೀಪ್ ಸಿಂಗ್, ಶಾರೂಕ್ ಖಾನ್, ಮೊಹಮ್ಮದ್ ಶಮಿ, ನೇಥನ್ ಎಲ್ಲೀಸ್, ಎಂ.ಶಮಿ, ಹರಪ್ರೀತ್ ಬ್ರಾರ್, ಮಯಿಸೆಸ್ ಹೆನ್ರಿಕ್ಸ್, ಏಡನ್ ಮರ್ಕರಂ, ಆದಿಲ್ ರಶೀದ್, ಮನದೀಪ್ ಸಿಂಗ್, ರವಿ ಬಿಷ್ಣೋಯಿ.

Leave a Reply