ಕ್ವಾಲಿಫೈಯರ್ ಗೆ ಪ್ರವೇಶ ಪಡೆದ ಆರ್.ಸಿ.ಬಿ

4 years ago

ಟಿ20 ಶತಕಗಳ ಸರದಾರರ ಪಟ್ಟಿ ಸೇರಿದ ರಜತ್ ಪಾಟಿದಾರ್

ಕೋಲ್ಕೊತ್ತಾಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್.ಸಿ.ಬಿ ತಂಡ 14 ರನ್ ಗಳ ಅಂತರದಿಂದ ಗೆಲುವು ದಾಖಲಿಸಿತು. ಈ ಮೂಲಕ ಎರಡನೇ ಕ್ವಾಲಿಫೈಯರ್ ಗೆ ಪ್ರವೇಶ ಪಡೆಯಿತು. ಶುಕ್ರವಾರ ಅಹಮದಾಬಾದ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್.ಸಿ.ಬಿ. ರಾಜಸ್ಥಾನ ರಾಯಲ್ಸ್ ತಂಡವನ್ನು ಮುಖಾಮುಖಿಯಾಗಲಿದೆ.

ಆರಂಭದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್.ಸಿ.ಬಿ., 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ 207 ರನ್ ಗಳನ್ನು ಬಾರಿಸಿತು. ನಾಯಕ ಫಾಪ್ ಡು ಪ್ಲೆಸಿಸ್  ಸೊನ್ನೆಗೆ ವಿಕೆಟ್ ಒಪ್ಪಿಸಿದರು. ನಂತರ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ತಂಡವನ್ನು ಅಪಾಯದಿಂದ ರಕ್ಷಿಸಿದರು.

ವಿರಾಟ್ ಕೊಹ್ಲಿ 25, ಗ್ಲೆನ್ ಮ್ಯಾಕ್ಸ್ ವೆಲ್ 9, ಮಹಿಪಾಲ್ ಲೊಮ್ರೊರ್ 14 ರನ್ ಗಳಿಸಿದರು. ಅನಂತರ ದಿನೇಶ್ ಕಾರ್ತಿಕ್ (37 ರನ್, 23 ಎಸೆತ), ರಜತ್ ಉತ್ತಮವಾಗಿ ಬ್ಯಾಟಿಂಗ್ ನಡೆಸಿದರು.  ಸಾಥ್ ನೀಡಿದರು. ರಜತ್ ಪಾಟಿದಾರ್ (112 ರನ್, 54 ಎಸೆತ) ಶತಕ ಸಿಡಿಸಿ ಸಂಭ್ರಮಿಸಿದರು.

208 ರನ್ ಗಳ ಗುರಿ ತಲುಪಲು ಯತ್ನಿಸಿದ ಲಕ್ನೋ ಸೂಪರ್ ಜೈಂಟ್ಸ್ ಪರ ನಾಯಕ ಕೆ.ಎಲ್. ರಾಹುಲ್ 79, ದೀಪಕ್ ಹೂಡಾ 45, ಮನನ್ ವೂಹ್ರಾ 19 ರನ್ ಗಳಿಸಿದರು. 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ 14 ರನ್ ಗಳ ಅಂತರದಿಂದ ಸೋಲುಂಡಿತು.

ಆರ್.ಸಿ.ಬಿ ಪರ ಜೋಶ್ ಹೇಜಲ್ ವುಡ್ ಮೂರು ವಿಕೆಟ್ ಪಡೆದರೆ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಗಳಿಸಿದರು.

Leave a Reply