ಕರ್ನಾಟಕದ ವಾಲಿಬಾಲ್ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು: ಎಸ್.ಹರೀಶ್

4 years ago

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿರವರು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ ಮತ್ತು ರಾಜ್ಯ ಸರ್ಕಾರವು ಸಹ ಸಹಕಾರ ನೀಡುತ್ತಿದೆ ಎಂದು ಕರ್ನಾಟಕ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಎಸ್.ಹರೀಶ್ ಹೇಳಿದರು.

ಜಮಖಂಡಿಯಲ್ಲಿ ನಡೆದ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ (ರಿ)2022-2026 ನಾಲ್ಕು ವರ್ಷಗಳ ಅವಧಿ ಪದಾಧಿಕಾರಿಗಳ ಆಯ್ಕೆ ಮತ್ತು ವಿಶೇಷ ಸಭೆಯ ನಂತರ ಮಾತಾಡಿದ ಅವರು, ಕರ್ನಾಟಕದಲ್ಲಿ ವಾಲಿಬಾಲ್ ಕ್ರೀಡೆಯ ಬಗ್ಗೆ ಪ್ರಚಾರ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ, ಪ್ರೋತ್ಸಾಹ ನೀಡಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಕಾಲೇಜು ಮತ್ತು ಯುನಿರ್ವಸಿಟಿ ಮತ್ತು ಅಂತರ ಜಿಲ್ಲಾ, ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸುವುದು ಅದರಲ್ಲಿ ಅತ್ಯುತ್ತಮ ವಾಲಿಬಾಲ್ ಪಟುಗಳನ್ನ ಗುರುತಿಸಿ ಅಂತಹ ಕ್ರೀಡಾಪಟುಗಳನ್ನ ಅಂತರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರಾಗಿ ಮಾಡುವ ಮಹಾತ್ವಕಾಂಕ್ಷೆ ಯೋಜನೆ ರೂಪಿಸಲಾಗಿದೆ ಎಂದರು.

ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಉದ್ಯೋಗ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕರ್ನಾಟಕದ ವಾಲಿಬಾಲ್ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಎಂಬ ಆಶಯದೊಂದಿಗೆ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಶ್ರಮಿಸಲಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ವಾಲಿಬಾಲ್ ಆಟಗಾರರನ್ನ ಸನ್ಮಾನಿಸಲಾಯಿತು. ಆಯೋಜಿಸಲಾಗಿತ್ತು. ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರು, ಮಾಜಿ ಉಪ ಮೇಯರ್ ಎಸ್.ದಡ್ಡಿ, ಬಿ.ಕೆ.ರಾವ್  ಸಸಿಗೆ ನೀರು ಹಾಕುವ ಮೂಲಕ ಪರಿಸರ ಜಾಗೃತಿ ಮೂಡಿಸಿ ವಿಶೇಷ ಸಭೆಗೆ ಚಾಲನೆ ನೀಡಿದರು.

Leave a Reply