ಬೆಂಗಳೂರು: ಕರ್ನಾಟಕ ಟೆನ್ನಿಸ್ ವಾಲಿಬಾಲ್ ಆಸೋಸಿಯೇಷನ್ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಬಾಲಕ,ಬಾಲಕಿಯರು ಮತ್ತು ಹಿರಿಯರ ವಿಭಾಗದಲ್ಲಿ 5ನೇ ರಾಷ್ಟ್ರೀಯ ಟೆನ್ಸಿಸ್ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಎರಡು ದಿನಗಳ ಕಾಲ ನಡೆದ ಪಂದ್ಯಾವಳಿ ಫೈನಲ್ ಪಂದ್ಯದ ವಿಜೇತರಿಗೆ ರಾಜಕಾರಣಿ ಆರ್.ವಿ.ಹರೀಶ್, ಕರ್ನಾಟಕ ಟೆನ್ಸಿಸ್ ವಾಲಿಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾಗೇಶ್ವರ ರಾವ್, ತುಳಸಿರಾಮ್, ಕಿಶೋರ್, ಶ್ರೀಕಾಂತ್,ಬಾಲಾಜಿ ಪ್ರಶಸ್ತಿ ಪ್ರದಾನ ಮಾಡಿದರು.
ರಾಷ್ಟ್ರೀಯ ಟೆನ್ನಿಸ್ ವಾಲಿಬಾಲ್ ತಂಡದಲ್ಲಿ 12 ರಾಜ್ಯಗಳ ತಂಡ ಭಾಗವಹಿಸಿದ್ದವು. ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಪಾಂಡಿಚೇರಿ, ಒಡಿಶಾ, ಕೇರಳ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ, ಮಣಿಪುರ, ತೆಲಂಗಾಣ ರಾಜ್ಯದ ಕಿರಿಯ ಮತ್ತು ಹಿರಿಯರ ಟೆನ್ನಿಸ್ ವಾಲಿಬಾಲ್ ಪಂದ್ಯಗಳಲ್ಲಿ ಭಾಗವಹಿಸಿದ್ದರು.
ಮೊದಲನೇ ಸ್ಥಾನ ಪಾಂಡಿಚೇರಿ, ದ್ವಿತೀಯ ಮಹಾರಾಷ್ಟ್ರ, ತೃತೀಯ ಸ್ಥಾನವನ್ನು ಗುಜರಾತ್ ತಂಡಗಳು ಗಳಿಸಿದವು.
ಮಹಿಳೆಯರ ತಂಡದಲ್ಲಿ ಪ್ರಥಮ ಸ್ಥಾನ ಮಹಾರಾಷ್ಟ್ರ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಗುಜರಾತ್ ತಂಡ ಗಳಿಸಿದವರು.
ಮಿಕ್ಸ್ ಡಬ್ಬಲ್ಸ್ ನಲ್ಲಿ ಪ್ರಥಮ ಸ್ಥಾನ ಕೇರಳ, ದ್ವಿತೀಯ ಆಂಧ್ರಪ್ರದೇಶ,ತೃತೀಯ ಮಹಾರಾಷ್ಟ್ರ ತಂಡಗಳು ವಿಜೇತರಾದರು.




