ಅಶೋಕ್ ಅವರೇ ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಮಾತನಾಡುವ ಅರ್ಹತೆ ನಿಮಗಿಲ್ಲ: ಪ್ರಿಯಾಂಕ್ ಖರ್ಗೆ

2 years ago

ಮಾನ್ಯ R Ashoka ಅವರೇ, ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಮಾತನಾಡಲು ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಅರ್ಹತೆಯೂ ಇಲ್ಲ, ನೈತಿಕತೆಯೂ ಇಲ್ಲ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿರೋಧಿಗಳು ಯಾರು ಎನ್ನುವುದನ್ನು ನಾನು ಹೇಳಬೇಕಿಲ್ಲ, ಅಡ್ವಾಣಿಯವರ ಈ ಪತ್ರವೇ ಹೇಳುತ್ತದೆ. ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದಿದ್ದು ಐತಿಹಾಸಿಕ ಸತ್ಯ.

ಇಂದು ನೀವು ಅನುದಾನದ ಬಗ್ಗೆ ಮಾತನಾಡುತ್ತಿರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ಆರ್ಟಿಕಲ್ 371(ಜೆ), ಆದರೆ ಹಿಂದೆ ನಿಮ್ಮ ಬಿಜೆಪಿ ಸರ್ಕಾರ ಈ ವಿಶೇಷ ಸ್ಥಾನಮಾನವನ್ನು ತಿರಸ್ಕರಿಸಿತ್ತು, ದಶಕ ಕಳೆದರೂ ಬಿಜೆಪಿ ಆರ್ಟಿಕಲ್ 371(ಜೆ) ತಿರಸ್ಕರಿಸಿದ್ದಕ್ಕೆ ಸ್ಪಷ್ಟ ಕಾರಣಗಳನ್ನು ಕೊಟ್ಟಿಲ್ಲ, ಅಶೋಕ್ ಸರ್, ಈಗ ನೀವಾದರೂ ಆರ್ಟಿಕಲ್ 371(ಜೆ) ತಿರಸ್ಕಾರಕ್ಕೆ ಕಾರಣಗಳನ್ನು ಕೊಡಿ.

ಹಿಂದುಳಿದ ಪ್ರದೇಶದ ಜನರ ಏಳಿಗೆಯನ್ನು ಸಾರಾಸಗಟಾಗಿ ತಿರಸ್ಕರಿಸಿದವರು ಈಗ ನಮಗೆ ಪಾಠ ಮಾಡುವ ಅಗತ್ಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಕೆಕೆಆರ್ ಡಿಬಿಯಲ್ಲಿ ಹಗರಣ ನಡೆಸುವ ಮೂಲಕ ಕಲ್ಯಾಣ ಕರ್ನಾಟಕದ ವಿರೋಧಿಯಾಗಿತ್ತು ಎನ್ನುವುದನ್ನು ಮರೆತಿದ್ದೀರಾ?

ಕೆಕೆಆರ್ ಡಿಬಿ ಹಗರಣವನ್ನು ನೀವು ಮರೆಮಾಚಿರಬಹುದು, ಆದರೆ ಜನತೆ ಮರೆತಿಲ್ಲ, ನಮ್ಮ ಸರ್ಕಾರವೂ ಮರೆತಿಲ್ಲ, ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಸರ್ಕಾರ ಮಾಡಿದ ಲೂಟಿಯ ದ್ರೋಹದ ಬಗ್ಗೆ ತನಿಖೆ ನಡೆಯುತ್ತಿದೆ. ಭ್ರಷ್ಟರಿಗೆ ಶಿಕ್ಷೆಯೂ ಆಗಲಿದೆ.

ಕೊನೆಯ ಮಾತು –
ಎಲ್ಲಾ ಇಲಾಖೆಯಲ್ಲೂ, ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುತ್ತೇನೆ ಎಂದು ಹೇಳುವ ಬಿಜೆಪಿಗರೇ, ಮುಖ್ಯಮಂತ್ರಿಗಳು ನನ್ನನ್ನು ಸರ್ಕಾರದ ವಕ್ತಾರನಾಗಿ ನೇಮಿಸಿದ್ದಾರೆ. ನಿಮ್ಮ ಸುಳ್ಳುಗಳನ್ನು ಬೇಧಿಸುವುದು ನನ್ನ ಜವಾಬ್ದಾರಿಯಾಗಿದೆ.

ಬಿಜೆಪಿಯವರಿಗೆ ನಾನು ಆಡುವ ಮಾತಿನಲ್ಲಿ ಸಮಸ್ಯೆ ಕಾಣುತ್ತಿದೆಯೇ ಅಥವಾ ನಾನು ಮಾತಾಡುವುದೇ ಸಮಸ್ಯೆಯಾಗಿ ಕಾಡುತ್ತಿದೆಯೇ ಬಿಜೆಪಿಗರು ನನ್ನನ್ನು “ಬಡವ ನೀ ಮಡಗಿದಂಗೆ ಇರು“ ಎಂಬ ರೀತಿಯಲ್ಲಿ ಕಾಣಲು ಬಯಸುತ್ತಿದ್ದಾರೆಯೇ? ನನ್ನ ಬಗ್ಗೆ ಇಷ್ಟೊಂದು ಅಸಹನೆ ಏಕೆ?

– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

Leave a Reply