ಆರ್ ಅಶೋಕ್ ಅವರೇ ಮೊದಲು ರಾಜೀನಾಮೆ ನೀಡಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ಅಲ್ಪ ಮಟ್ಟಿಗಿನ ನೈತಿಕತೆ ಉಳಿಸಿಕೊಳ್ಳಿ: ಕೃಷ್ಣ ಬೈರೇಗೌಡ
ಬೆಂಗಳೂರು: ಬಿಜೆಪಿಯ ಆಷಾಢಭೂತಿತನಕ್ಕೆ ಮತ್ತೊಂದು ಉದಾಹರಣೆ ಸಂಪೂರ್ಣ ಸರ್ಕಾರೀ ಒಡೆತನದಲ್ಲಿದ್ದ ಲೊಟ್ಟೆಗೊಲ್ಲಹಳ್ಳಿ (ಡಾಲರ್ಸ್ ಕಾಲೋನಿ ಪಕ್ಕ) ಜಮೀನನ್ನು ಅಕ್ರಮವಾಗಿ ಬಿಡಿಗಾಸಿಗೆ ಖರೀದಿಸಿ, ಅಕ್ರಮವಾಗಿ ಸಂಬಂಧಪಡದ ವ್ಯಕ್ತಿಯಿಂದ ಅರ್ಜಿ ಕೊಡಿಸಿ, ಯಡಿಯೂರಪ್ಪನವರಿಂದ ಡೀನೋಟಿಫಿಕೇಷನ್ ಮೂಲ ಮಾಲೀಕರಿಗೆ ಮಾಡಿಸಿ, ಅಕ್ರಮವಾಗಿ ಖಾತೆ ಮಾಡಿಸಿಕೊಂಡ ಆರ್.ಅಶೋಕ್, ಸಿಕ್ಕಿ ಹಾಕಿಕೊಂಡು ಎಫ್‌ಐಆರ್ ಆದಾಗ ಯಾವ ರಾಜೀನಾಮೆಯನ್ನೂ ನೀಡಲಿಲ್ಲ. ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಾಗ್ದಾಳಿ ನಡೆಸಿದರು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಮೆಟ್ಟಿಲೇರಿದಾಗ ಇದ್ದಕ್ಕಿದ್ದಂತೆ ತನ್ನದಲ್ಲದ ಸರ್ಕಾರಿ ಜಮೀನನ್ನೇ ಬಿಡಿಎಗೆ ದಾನಪತ್ರ ಮಾಡಿ ಕೊಟ್ಟರು. ಈಗ ಸ್ವಂತ ಜಮೀನಿಗೆ ಕಾನೂನು ಪ್ರಕಾರ ಸೈಟು ಪರಿಹಾರ ಪಡೆದುಕೊಂಡಿದ್ದ ಪಾರ್ವತಮ್ಮನವರು, ಕ್ಷುಲ್ಲಕ ರಾಜಕೀಯಕ್ಕೆ ಬೇಸತ್ತು ಮುಡಾಗೆ ವಾಪಸ್ ಕೊಟ್ಟಾಗ ಇದೇ ಆರ್.ಅಶೋಕ್ ಕದ್ದ ಮಾಲಿನ ಉದಾಹರಣೆ ಕೊಡುತ್ತಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯನವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದೂ ಒತ್ತಾಯಿಸುತ್ತಾರೆ. ಮಾನ್ಯ ಆರ್ ಅಶೋಕ್ ಅವರೇ ಸ್ವತಃ ಅಕ್ರಮ ಭೂ ವಂಚನೆ ಕೇಸಿಗೆ ಫಿಟ್ಟಾಗಿ ಹೈಕೋರ್ಟ್ ಮೆಟ್ಚಿಲೇರಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡ ಮಾನ್ಯ ಸತ್ಯವಂತ ನೀತಿವಂತ ಅಶೋಕ್ ಅವರೇ… ಮೊದಲು ನೀವು ತಮ್ಮ ವಿಪಕ್ಷ ನಾಯಕ ಸ್ಥಾನಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೀಗೆ ಮಾಡುವುದರಿಂದಲಾದರೂ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ಅಲ್ಪ ಮಟ್ಟಿಗಿನ ನೈತಿಕತೆ ಉಳಿಸಿಕೊಳ್ಳಿ ಎಂದು ಸವಾಲೆಸೆದರು.



