ರಾಜ್ ಸಂಪಾಜೆ ಗೆಳೆತನ… ಜೊತೆಗಾರನಿಗಾಗಿ ಕೈಜೋಡಿಸೋಣ ಬನ್ನಿ…

3 years ago

#RajSampaje #friendship #join #hands #partner #theatre #benifitshow

ಸಹಾಯಾರ್ಥ ಪ್ರದರ್ಶನ (ಬೆನಿಫಿಟ್ ಶೋ) ಮೂಲಕ ಸಂಕಟದಲ್ಲಿರುವ ರಂಗಕರ್ಮಿಗೆ ನೆರವಾಗಿ

ರಾಜ್ ಸಂಪಾಜೆ ದಶಕಗಳಿಂದ ಕನ್ನಡ ರಂಗಭೂಮಿ ಮತ್ತು ಯಕ್ಷಗಾನದ ಕೊಂಡಿಯಾಗಿ ಕೆಲಸ ನಿರ್ವಹಿಸಿದ ನಿಸ್ಪೃಹ ರಂಗಕರ್ಮಿ. ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಲೇ ದೂರದ ಕರಾವಳಿಯಿಂದ ಬೆಂಗಳೂರಿಗೆ ಬರುವ ಯಕ್ಷಗಾನ ತಂಡಗಳೊಂದಿಗೆ ಸಂವಹನ ಮಾಡುತ್ತಿದ್ದರು. ಇಡೀರಾತ್ರಿ ನಡೆಯುವ ಯಕ್ಷಗಾನ ಪ್ರದರ್ಶನಗಳ ವೇಳೆ ನಿರೂಪಣೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ನಡೆಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಇವರು ಪಾರ್ಶ್ವವಾಯುಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಸಂಸ ಥಿಯೇಟರ್ ಬೆಂಗಳೂರು ಮತ್ತು ಬೆಂಗಳೂರು ಆರ್ಟ್ ಫೌಂಡೇಷನ್ ಸಹಯೋಗದಲ್ಲಿ ಇವರ ಸಹಾಯಾರ್ಥ ಪ್ರದರ್ಶನ (ಬೆನಿಫಿಟ್ ಶೋ) ಆಯೋಜಿಸಲಾಗಿದೆ.

ಹಾಸನದ ಕಲಾಸಿರಿ ನಾಟಕ ಶಾಲೆ ಅರ್ಪಿಸಿರುವ, ಶಂಕರ್ ಶೇಷ ರಚನೆಯ, ಜಯಶಂಕರ ಬೆಳಗುಂಬ ನಿರ್ದೇಶನದ ಮಾರ್ಪಿನ್ ನಾಟಕವನ್ನು ದಿನಾಂಕ 30.07.2023ರಂದು ಆಯೋಜಿಸಲಾಗಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಂಜೆ 7ಕ್ಕೆ ಪ್ರದರ್ಶನ ನಡೆಯಲಿದೆ. ಪ್ರದರ್ಶನದಲ್ಲಿ ಸಂಗ್ರಹವಾದ ಮೊತ್ತವನ್ನು ರಾಜ್ ಸಂಪಾಜೆಯವರಿಗೆ ನೀಡಲಾಗುವುದು. ಪ್ರತಿ ಟಿಕೆಟ್ ಗೆ 500 ರೂ. ದರ ನಿಗದಿಪಡಿಸಲಾಗಿದ್ದು, ಸದಭಿರುಚಿಯ ರಂಗಾಸಕ್ತರು, ರಂಗಪೋಷಕರು ಮತ್ತು ಕಲಾಸಕ್ತರು ಟಿಕೆಟ್ ಕೊಂಡು ನಾಟಕವನ್ನು ನೋಡಿ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು ನೀಡಬೇಕು ಎಂದು ಮತ್ತು ಮಾನವೀಯ ಮಿಡಿತದಲ್ಲಿ ತೊಡಗಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ.

ವಂದನೆಗಳೊಂದಿಗೆ
ಸಂಸ ಥಿಯೇಟರ್, ಬೆಂಗಳೂರು
ಬೆಂಗಳೂರು ಆರ್ಟ್ ಫೌಂಡೇಷನ್

ನೇರವಾಗಿ ರಾಜ್ ಸಂಪಾಜೆ ಅವರ ಖಾತೆಗೆ ಹಣ ಹಾಕಬಹುದು
Raj sampaje
Ac no 0413101500848
cnrb0000413
Canara bank
Townhall branch.
Raj Sampaje : Phone pay 9035144776

Leave a Reply