ರಫೇಲ್ ಅವ್ಯವಾರ ಆರೋಪ ಕುರಿತು ಮೋದಿ ಸ್ಪಷ್ಟನೆ ನೀಡಬೇಕು: ಎಸ್.ಆರ್.ಪಾಟೀಲ್

5 years ago

ಬೆಂಗಳೂರು: ರಫೇಲ್‍ ಯುದ್ಧ ವಿಮಾನಗಳ ಮಾರಾಟಕ್ಕೆ ಸಂಬಂಧಿಸಿ ಭಾರತದ ಮಧ್ಯವರ್ತಿಗೆ ₹94.93 ಕೋಟಿ (1.1 ಮಿಲಿಯನ್ ಯೂರೊ) ‘ಕೊಡುಗೆ’ ನೀಡಲಾಗಿದೆ ಎಂದು ಫ್ರಾನ್ಸ್‌ನ ವೈಮಾನಿಕ ಸಂಸ್ಥೆ ಡಸಾಲ್ಟ್ ಹೇಳಿದೆ. ಕೊಡುಗೆ ಎಂದರೆ ವಾಸ್ತವವಾಗಿ ರಫೇಲ್‌ ವಹಿವಾಟಿನಲ್ಲಿ ಮಧ್ಯವರ್ತಿಗಳಿಗೆ ನೀಡಿದ ಕಮಿಷನ್‍ ಮೊತ್ತವೇ..? ಎಂದು ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಪ್ರಶ್ನಿಸಿದ್ದಾರೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದ ಮಧ್ಯವರ್ತಿಗೆ ಬರೋಬ್ಬರಿ 94 ಕೋಟಿ ರೂ. ಹಣ ನೀಡಲಾದ ಕುರಿತು ವರದಿಯಾಗಿರುವ ಹಿನ್ನೆಲಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ರಫೇಲ್‌ ಯುದ್ಧ ವಿಮಾನಗಳ ಖರೀದಿ ವಹಿವಾಟಿನಲ್ಲಿ ಕೊಡುಗೆ ನೀಡಿರುವ ಕುರಿತು ಪ್ರಧಾನಮಂತ್ರಿ @narendramodiರವರು ಸ್ಪಷ್ಟನೆ ನೀಡಬೇಕು. ಫ್ರಾನ್ಸ್ ಸಂಸ್ಥೆಯಿಂದ ಕೊಡುಗೆ ಪಡೆದ ಆ ಭಾರತದ ಮಧ್ಯವರ್ತಿ ಯಾರು ಎಂಬ ಬಗ್ಗೆ ಕೇಂದ್ರ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

Leave a Reply