ಹೊಟ್ಟೆ ತುಂಬಿದವರ ಮತ್ತು ಹಸಿದವರ ನಡುವಿನ ಪ್ರಶ್ನೆ

2 years ago

ಈ ಚುನಾವಣೆ ಹಸಿದವರ ಮತ್ತು ಹೊಟ್ಟೆ ತುಂಬಿದವರ ನಡುವಿನ ಅಭಿಪ್ರಾಯವಾಗಿದೆ

ಹೊಟ್ಟೆ ತುಂಬಿದ ಜನ ಬಡವರಿಗೆ ನೀಡುವ ಎಲ್ಲ ಯೋಜನೆಗಳನ್ನು ನಿಸ್ ಪ್ರಯೋಜಕ ಮತ್ತು ಖಜಾನೆಯನ್ನ ಹಾಳು ಮಾಡುತ್ತದೆ ಎಂಬ ಮಾತುಗಳನ್ನ ಆಡುವ ಮನೋಭಾವದವರಾಗಿದ್ದಾರೆ ಆದರೆ ಹೊಟ್ಟೆ ತುಂಬಿದವರಿಗೆ ಕೇಂದ್ರ ಸರ್ಕಾರ ಹತ್ತಾರು ಲಕ್ಷ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದರೆ ಅದರಿಂದ ದೇಶಕ್ಕೆ ಯಾವ ಅಪಾಯವು ಆಗುವುದಿಲ್ಲವೆಂಬ ಮಾತುಗಳನ್ನು ಆಡುತ್ತಾರೆ

ಧಾರ್ಮಿಕ ಭಾವನೆಗಳನ್ನು ಬಂಡವಾಳವನ್ನಾಗಿಸಿಕೊಂಡು ಇವುಗಳ ಆಧಾರದ ಮೇಲೆ ಚುನಾವಣೆಯನ್ನು ನಡೆಸುತ್ತಿರುವಂತಹ ಪಕ್ಷದ ನಡುವೆ ಮತ್ತು ಬಡವರ ಬದುಕಿನ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾ ಬಡವರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವ ಮತ್ತೊಂದು ಪಕ್ಷದ ನಡುವಿನ ಚುನಾವಣೆ ಇದಾಗಿರುತ್ತದೆ

ಸಣ್ಣ ಸಣ್ಣ ಸಾಧನೆಗಳನ್ನು ಅತಿ ದೊಡ್ಡ ಜಾಹೀರಾತುಗಳ ಮೂಲಕ ಜನರ ಮನಸ್ಸಿನಲ್ಲಿ ತುಂಬಾ ಅನುಕೂಲವಾಗಿದೆ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ಯೋಜನೆಗಳ ಸತ್ಯಾಸತ್ಯತೆಯನ್ನು ತಿಳಿಯುವಂತಹ ಸಂದರ್ಭವೂ ಇದಾಗಿದೆ

ಕೇಂದ್ರ ಸರ್ಕಾರದ ರಾಜ್ಯಗಳ ಅಧಿಕಾರವನ್ನು ಮುಟಕುಗೊಳಿಸುವ ಮತ್ತು ಸ್ವಾಯತ್ತತೆಗೆ ಧಕ್ಕೆಯನ್ನು ತರುವಂತಹ ಸಂಗತಿಗಳು ಈ ಚುನಾವಣೆಯಲ್ಲಿ ಪ್ರಮುಖವಾಗಿವೆ ರಾಜ್ಯಗಳಿಗೆ ಅಥವಾ ಕೇಂದ್ರ ಸರ್ಕಾರದ ಗುಲಾಮರಾಗಿ ಅವರ ಹಂಗಿನಲ್ಲಿ ಬದುಕುವಂತಹ ಪ್ರಜಾಪ್ರಭುತ್ವ ಬೇಕು ಎಂಬ ಪ್ರಶ್ನೆಯು ಇಲ್ಲಿದೆ

ಪ್ರಶ್ನೆ ಮಾಡುವಂತಹ ಪ್ರಜಾಪ್ರಭುತ್ವ ಬೇಕು ಅಥವಾ ಪ್ರಶ್ನಿಸುವವರನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸರ್ವಾಧಿಕಾರಿ ವ್ಯವಸ್ಥೆಯ ಅತಿರೇಕದ ಪ್ರಜಾಪ್ರಭುತ್ವ ಬೇಕು ಯೋಚಿಸುವ ಕಾಲವು ಇದಾಗಿದೆ

ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ರೈತರ ಸಮಸ್ಯೆಗಳು ಭಾವೈಕ್ಯತೆಯ ಸಮಸ್ಯೆಗಳು ಇವುಗಳ ಬಗ್ಗೆ ಮಾತನಾಡದೆ ಹಾರಿಕೆಯ ಉತ್ತರಗಳನ್ನ ನೀಡುತ್ತಾ ದಿಕ್ಕು ತಪ್ಪಿಸುವ ಅಬ್ಬರದ ಮಾತುಗಳನ್ನಾಡುವಂತಹ ಭಾಷಣಕಾರರ ನಡುವೆ ಸತ್ಯವನ್ನ ಹೇಳುವ ಮತ್ತು ವಾಸ್ತವವಾದ ಸಂಗತಿಗಳನ್ನ ಜನರ ಮುಂದಿಡುವ ಪ್ರಜಾಪ್ರಭುತ್ವದ ವ್ಯವಸ್ಥೆ ಬೇಕು ಎನ್ನುವ ಪ್ರಶ್ನೆಯು ಇಲ್ಲಿದೆ

ಮನೆ ಮನೆಗೆ ನಲ್ಲಿಯ ನೀರನ್ನು ತಂದದ್ದು ನಾವೇ, ಹಳ್ಳಿಗಳಲ್ಲಿ ಬೆಳಕನ್ನು ಮೂಡಿಸಿದ್ದು ನಾವೇ, ರೈಲುಗಳನ್ನು ತಂದವರು ನಾವೇ, ಶಾಲೆಗಳನ್ನು ಕಟ್ಟಿದವರು ನಾವೇ, ಆಸ್ಪತ್ರೆಗಳನ್ನ ನಿರ್ಮಿಸಿದವರು ನಾವೇ, ರಸ್ತೆಗಳನ್ನು ನಿರ್ಮಿಸಿ ಕೊಟ್ಟವರು ನಾವೇ, ಸಂಶೋಧನಾ ಸಂಸ್ಥೆಗಳನ್ನ ಸ್ಥಾಪಿಸಿದವರು ನಾವೇ, ನಾವು ಬರುವ ಮುನ್ನ ದೇಶದಲ್ಲಿ ಏನೂ ಇರಲಿಲ್ಲ ಕತ್ತಲ ಸಾಮ್ರಾಜ್ಯ ವಿತ್ತು ಶಾಲೆಗಳಿರಲಿಲ್ಲ ಆಸ್ಪತ್ರೆಗಳಿರಲಿಲ್ಲ ರೈಲುಗಳಿರಲಿಲ್ಲ ವಿಮಾನ ನಿಲ್ದಾಣವಿರಲಿಲ್ಲ ಕುಡಿಯುವ ನೀರಿರಲಿಲ್ಲ ದೀಪಗಳಿರಲಿಲ್ಲ ಬಸ್ಸುಗಳಿರಲಿಲ್ಲ ರಸ್ತೆಗಳಿರಲಿಲ್ಲ ಸಂಶೋಧನಾ ಸಂಸ್ಥೆಗಳಿರಲಿಲ್ಲ ಎಲ್ಲವೂ ನಾವೇ ಮಾಡಿದ್ದು ಎಂಬ ರೀತಿಯಲ್ಲಿ, ಹಸಿ ಹಸಿ ಸುಳ್ಳುಗಳನ್ನ ಹೇಳುತ್ತಾ ದೇಶದ ಅಭಿವೃದ್ಧಿಯ ಮುಂದುವರೆದ ಭಾಗವಾಗಿ ಒಂದಷ್ಟು ಕೆಲಸಗಳನ್ನ ಮಾಡಿ ಎಲ್ಲವೂ ನನ್ನದೇ ಎಂದು ಬಿಂಬಿಸಿಕೊಳ್ಳುವ ಭಾಷಣಗಳು ಜೊತೆಗೆ ಇದಕ್ಕೆ ಪೂರಕವೆನಿಸುವ ದೃಶ್ಯ ಮಾಧ್ಯಮದವರ ಪತ್ರಿಕಾ ಮಾಧ್ಯಮದವರ ಜಾಹೀರಾತುಗಳು ವಕ್ತಾರಿಕೆ ಇವು ಬಹಳಷ್ಟು ಮುಗ್ಧ ಜನರ ಮನಸ್ಸಿನಲ್ಲಿ ಸತ್ಯವೆನಿಸುವಂತೆ ಮಾಡಿದೆ

ರಾಜ್ಯ ಸರ್ಕಾರಗಳ ಪಾಲಿನ ಹಣ ಮಣೆಕೊಳ್ಳುವವರಿಗೆ ಸಾಲದ ಪಾಲು ಇರುತ್ತದೆ ಆದರೂ ಒಂದಷ್ಟು ಹಣವನ್ನು ಕೊಟ್ಟು ಮನೆಗಳನ್ನ ನಿರ್ಮಿಸಿಕೊಟ್ಟವರು ನಾವೇ ಎಂದು ಹೇಳುತ್ತಾರೆ ಕೇಳುವ ಜನ ಚಪ್ಪಾಳೆಯನ್ನು ತಟ್ಟುತ್ತಾರೆ

ಆಯುಷ್ಮಾನ್ ಭಾರತ್ ಎಂಬ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿಗಳವರೆಗಿನ ಆರೋಗ್ಯ ಚಿಕಿತ್ಸೆಗೆ ನೆರವಾಗುತ್ತೇವೆ ಎಂಬ ಜಾಹೀರಾತು ಸತ್ಯವೇನೆಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಈ ಯೋಜನೆಯ ಫಲ ದೊರೆಯುತ್ತದೆ ಖಾಸ್ಗಿ ಮತ್ತು ಕಾರ್ಪೆಟ್ ಆಸ್ಪತ್ರೆಗಳಲ್ಲಿ ಇಂತಹ ಕಾರ್ಡುಗಳಿಗೆ ಯಾವ ಬೆಲೆಯೂ ಇಲ್ಲ ಅಲ್ಲಿ ನಗದುರಬೇಕು ಇಲ್ಲವೇ ಯಾವುದಾದರೂ ವಿಮಾ ಯೋಜನೆಗಳಿರಬೇಕು ಆದರೂ ಸಹ ಕೋಟಿ ಕೋಟಿ ಭಾರತೀಯರಿಗೆ ಈ ಯೋಜನೆಯ ಲಾಭವಾಗಿದೆ ಎಂದು ಭಾಷಣ ಮಾಡುತ್ತಾರೆ ಜನ ಚಪ್ಪಾಳೆ ತಟ್ಟುತ್ತಾರೆ

ಅಡುಗೆಮನೆ ನಿಮ್ಮದು ಅಲ್ಲಿ ಬಳಸುವ ಅಡಿಗೆ ಸಿಲೆಂಡರ್ ಹಣ ಕೊಟ್ಟು ಖರೀದಿಸಿದವರು ನೀವು ಆದರೆ ಉಜ್ವಲ ಯೋಜನೆ ಅಡಿಯಲ್ಲಿ ಉಚಿತವಾಗಿ ಅಡಿಗೆ ಅನಿಲವನ್ನು ಕೊಟ್ಟಿದ್ದೇವೆ ಎಂದು ಜಾಯಿರಾತು ನೀಡುತ್ತಾರೆ ಭಾಷಣವನ್ನು ಮಾಡುತ್ತಾರೆ ಜನ ಚಪ್ಪಾಳೆ ಹೊಡೆಯುತ್ತಾರೆ

ಹೆದ್ದಾರಿಗಳ ರಸ್ತೆ ನಿರ್ಮಾಣವಾಗಿದೆ ಸತ್ಯ ಆದರೆ ಈ ರಸ್ತೆಗಳ ಮೇಲೆ ವಾಹನಗಳಲ್ಲಿ ಸಂಚರಿಸಲು ಟೋಲ್ ಕಟ್ಟಬೇಕಾಗಿದೆ ಇದಕ್ಕೆ ಸಾವಿರಾರು ರೂಪಾಯಿಗಳು ಪ್ರತಿಯೊಂದು ಪ್ರಯಾಣದ ಸಂದರ್ಭದಲ್ಲಿ ಪಾವತಿಸಬೇಕಾಗಿದೆ ನಮ್ಮ ವಾಹನ ನಾವು ಕಟ್ಟುವ ಹಣ ಖಾಸಗಿಯವರು ನಿರ್ಮಿಸಿದ ರಸ್ತೆಗಳು 30 ವರ್ಷಗಳ ಗುತ್ತಿಗೆ ರಸ್ತೆ ಆದರೂ ಸಾಧನೆಯಂತೆ ಭಾಷಣ ಮಾಡುತ್ತಾರೆ ನಾವು ಚಪ್ಪಾಳೆ ತಟ್ಟುತ್ತೇವೆ

ರಾಜ್ಯ ಸರ್ಕಾರಗಳು ಕೊಡುವ ತೆರಿಗೆಯ ಪಾಲಿನಿಂದ ಕೇಂದ್ರದ ಯೋಜನೆಗಳು ರೂಪುಗೊಳ್ಳುತ್ತದೆ ಇದರಲ್ಲಿ ರಾಜ್ಯ ಸರಕಾರಗಳ ಪಾತ್ರವೂ ಇರುತ್ತದೆ ಆದರೆ ಶೌಚಾಲಯದಿಂದ ಹಿಡಿದು ಎಲ್ಲವೂ ನಾವೇ ಮಾಡುತ್ತಿರುವುದು ಎಂಬ ಜಾಹೀರಾತು ಕೊಡುತ್ತಾರೆ ಇದು ಸತ್ಯ ಎನ್ನುವಂತೆ ಭಾಷಣ ಮಾಡುತ್ತಾರೆ ಜನ ಚಪ್ಪಾಳೆ ಹೊಡೆಯುತ್ತಿದ್ದಾರೆ

ಕೇಂದ್ರ ಸರ್ಕಾರದ ಸಾಧನೆಗಳನ್ನು ಅಂಕಿ ಅಂಶಗಳೊಂದಿಗೆ ತುಲನೆಯನ್ನ ಮಾಡಿ ರಾಜ್ಯ ಸರಕಾರಗಳ ಪಾಲಿನ ವಿಚಾರದಲ್ಲಿ ಆಲೋಚನೆಯನ್ನು ಮಾಡಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದನ್ನು ವಿಮರ್ಶಿಸಿದರೆ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕೆಂಬ ನಿರ್ಣಯಕ್ಕೆ
ಇದು ಸಕಾಲವಾಗುತ್ತದೆ

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply