ಬೃಹತ್ ಹೆಬ್ಬಾವಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬ್ರಿಟನ್ನ ಕೇಂಬ್ರಿಡ್ಜ್ ಶೈರ್ನ ಮರವೊಂದಕ್ಕೆ 10 ಅಡಿ ಉದ್ದದ ಈ ಹಾವು ಸುತ್ತಿಕೊಂಡ ಕ್ಷಣಗಳನ್ನು ವಿಡಿಯೋ ಮಾಡಲಾಗಿದೆ.
ನೆಟ್ಟಿಗರು ಈ ದೃಶ್ಯವನ್ನು ‘ದಿ ಜಂಗಲ್ ಬುಕ್’ನ ಒಂದು ದೃಶ್ಯದ ಜೊತೆಗೆ ಹೋಲಿಸಿದ್ದಾರೆ. 2016ರ ಈ ಚಿತ್ರದಲ್ಲಿ ಕಥಾನಾಯಕನಾದ ಬಾಲಕ ಮೋಗ್ಲಿ ದಟ್ಟ ಕಾಡುಮೇಡು, ಗುಡ್ಡಪರ್ವತಗಳಲ್ಲಿ ಲೀಲಾಜಾಲವಾಗಿ ಅಲೆಯುವ ಸಮಯದಲ್ಲಿ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗುತ್ತದೆ. ‘ಕಾ’ ಹೆಸರಿನ ಈ ಹೆಬ್ಬಾವು ಮೋಗ್ಲಿಯನ್ನು ಕೊಲ್ಲಲು ಮುಂದಾದಾಗ ಬಾಲೂ ಮೋಗ್ಲಿಯನ್ನು ರಕ್ಷಿಸುವ ಕಥೆ ಇದೆ. ಇದನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ.




