ಹುಬ್ಬಳ್ಳಿ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಬೆಂಗಳೂರು ಜಲ ಮಂಡಳಿಯ ಅಧ್ಯಕ್ಷರು ಆಗಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್.ವಿ ಹುಬ್ಬಳ್ಳಿ-ಧಾರವಾಡ ಬಿಆರ್‍ಟಿಎಸ್ ಯೋಜನೆಯ ಸದುಪಯೋಗ ಮತ್ತು ಆರ್ಥಿಕ ಸ್ಥಿತಿ ಉತ್ತಮ ಪಡಿಸುವ ಕುರಿತು ಬಿಆರ್‍ಟಿಎಸ್ ಮತ್ತು ವಾ.ಕ.ರ.ಸಾ ಸಂಸ್ಥೆಯ ಅಧಿಕಾರಿಗಳೊಂದಿಗೆ ಹುಬ್ಬಳ್ಳಿಯ ಬಿಆರ್‍ಟಿಎಸ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನಂತರ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಮಧ್ಯ ಸಂಚರಿಸುವ ಚಿಗರಿ ಬಸ್ಸುಗಳ ಕಾರ್ಯಚರಣೆ ಮತ್ತು ಸದರಿ ಲಭ್ಯವಿರುವ ಬಸುಗಳನ್ನು ಉಪಯೋಗಿಸಿಕೊಂಡು ಸಾರ್ವಜನಿಕರಿಗೆ ಅನುಕೂಲಕರ ಸೇವೆಯನ್ನು ಒದಗಿಸಬೇಕು ಮತ್ತು ಇದರೊಂದಿಗೆ ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಿಆರ್‍ಟಿಎಸ್ ಕಾರಿಡಾರ್ ಗಳಲ್ಲಿ ಚಿಗರಿ ಬಸ್ಸುಗಳ ಕಾರ್ಯಚರಣೆಯಲ್ಲಿ ಹೆಚ್ಚಿನ ಅನುಕೂಲವಾಗುವ ರೀತಿಯಲ್ಲಿ ಸಿವ್ಹಿಲ್ ಕಾಮಗಾರಿಗಳನ್ನು ಕೈಗೊಳ್ಳಬೇಕು. ಹಾಗೂ ಸದ್ಯ ಇರುವ ಬಿಆರ್‍ಟಿಎಸ್ ಮೂಲಸೌಕರ್ಯಗಳ ನಿರ್ವಹಣೆ ಮತ್ತು ಚಿಗರಿ ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ ಐ.ಟಿ.ಎಸ್ ತಾಂತ್ರಿಕತೆ ಮತ್ತು ಜಂಕ್ಷನ್‍ಗಳಲ್ಲಿ ಅಳವಡಿಸಿದ ಸಿಗ್ನಲ್‍ಗಳ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದರು.
ಈಗಾಗಲೇ ಲಭ್ಯವಿರುವ ವ್ಯವಸ್ಥೆಯಲ್ಲಿಯೇ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಬಿಆರ್‍ಟಿಎಸ್ ಚಿಗರಿ ಬಸ್ಸುಗಳ ಕಾರ್ಯಚರಣೆಯನ್ನು ಉತ್ತಮ ಪಡಿಸುವ ಕುರಿತು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಬಿಆರ್‍ಟಿಎಸ್ ಬಸ್‍ನಲ್ಲಿ ಪ್ರಯಾಣ: ಬಿಆರ್‍ಟಿಎಸ್ ಸಾರಿಗೆ ಸೇವೆಯ ಬಗ್ಗೆ ಸಾರ್ವಜನಿಕ ಪ್ರಯಾಣಿಕರಿಂದ ಅಭಿಪ್ರಾಯ ತಿಳಿಯಲು ಡಾ. ರಾಮ್ ಪ್ರಸಾತ್ ಮನೋಹರ್.ವಿ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಹೆಚ್‍ಡಿಬಿಆರ್‍ಟಿಎಸ್ ವ್ಯವಸ್ಥಾಪಕ ನಿರ್ದೇಶಕರು, ಹುಬ್ಬಳ್ಳಿಯಿಂದ ಧಾರವಾಡದ ವರೆಗೆ ಬಿಆರ್‍ಟಿಎಸ್ ಚಿಗರಿ ಬಸ್‍ನಲ್ಲಿ ಪ್ರಯಾಣಿಸಿದರು.
ಪ್ರಾದೇಶಿಕ ಬಸ್ ನಿಲ್ದಾಣ ಹುಬ್ಬಳ್ಳಿ, ನವನಗರ ಬಿಆರ್‍ಟಿಎಸ್ ಬಸ್ ನಿಲ್ಧಾಣ ಹಾಗೂ ಧಾರವಾಡ ಬಿಆರ್‍ಟಿಎಸ್ ಬಸ್ ಟರ್ಮಿನಲ್‍ಗಳನ್ನು ಸಂದರ್ಶಿಸಿ, ಸಾರ್ವಜನಿಕ ಪ್ರಯಾಣಿಕರ ಅಭಿಪ್ರಾಯವನ್ನು ಪಡೆದುಕೊಂಡರು.
ಸದ್ಯಕ್ಕೆ ಇರುವ ಚಿಗರಿ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಉದ್ಘೋಷ (ಅನೌನ್ಸಮೆಂಟ್)ಗಳನ್ನು, ಸಾರ್ವಜನಿಕ ಮಾಹಿತಿ ಫಲಕಗಳನ್ನು, ನಿಲುಗಡೆ ಬಟನ್‍ಗಳನ್ನು ಉತ್ತಮವಾಗಿ ಕಾರ್ಯಾನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ, ಖಚಿತ ಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹುಬ್ಬಳ್ಳಿ-ಧಾರವಾಡಗಳ ಮಧ್ಯ ಆಗುವ ಸಂಚಾರದಟ್ಟಣೆಯನ್ನು ನಿವಾರಿಸಲು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯ ಸಂಚರಿಸುವ ಪ್ರಯಾಣಿಕರ ಸಮೀಕ್ಷೆ ನಡೆಸಿ, ಇರುವ ಬಸ್ಸುಗಳಲ್ಲಿಯೇ ಪ್ರಯಾಣಿಕರಿಗೆ ಅಚ್ಚುಕಟ್ಟಾದ ಸೇವೆಯನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಬಿಆರ್‍ಟಿಎಸ್ ಕಾರಿಡಾರ್ ಗಳಿಗೆ ಹೊಂದಿಕೊಂಡು ಒಳಗಡೆ ಇರುವ ಪ್ರಯಾಣಿಕರಿಗೆ ಚಿಗರಿ ಸಂಪರ್ಕ ಸಾರಿಗೆ ಬಸ್ಸುಗಳ ಮೂಲಕ ಬಿಆರ್‍ಟಿಎಸ್ ಬಸ್ ನಿಲ್ದಾಣಕ್ಕೆ ಕರೆತರುವ ವ್ಯವಸ್ಥೆಯನ್ನು ಮಾಡಲು ವಾ.ಕ.ರ.ಸಾ ಸಂಸ್ಥೆಯ ಸಿಬ್ಬಂದಿಗೆ ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಹೆಚ್‍ಡಿಬಿಆರ್‍ಟಿಎಸ್ ಪ್ರಧಾನ ವ್ಯವಸ್ಥಾಪಕರುಗಳು, ಮುಖ್ಯ ಸಂಚಾರ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿಗಳು ವಾಕರಸಾ ಸಂಸ್ಥೆ, ಬಿಆರ್‍ಟಿಎಸ್ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.




