ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ಮೇ 5 ರಂದು ಬಿಡುಗಡೆ ವಿಡಂಬನೆ ಲಘು ಹಾಸ್ಯದ ಮ್ಯಾನ್‌ ಆಫ್‌ ದಿ ಮ್ಯಾಚ್‌

4 years ago

ಕನ್ನಡ ಕಾಮಿಡಿ ಸಿನಿಮಾ ಮ್ಯಾನ್ ಆಫ್‌ ದಿ ಮ್ಯಾಚ್‌ನ ಮೋಶನ್ ಪೋಸ್ಟರ್ ಅನ್ನು ಅಮೆಜಾನ್ ಪ್ರೈಮ್ ವಿಡಿಯೋ ಬಿಡುಗಡೆ ಮಾಡಿದೆ. ಸಿನಿಮಾ ಮೇ 5 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್‌ ಅಡಿಯಲ್ಲಿ ಪುನೀತ್ ರಾಜ್‌ಕುಮಾರ್‌ ನಿರ್ಮಾಣ ಮಾಡಿರುವ ಮ್ಯಾನ್‌ ಆಫ್‌ ದಿ ಮ್ಯಾಚ್‌ ಅನ್ನು ಡಿ.ಸತ್ಯಪ್ರಕಾಶ ನಿರ್ದೇಶನ ಮಾಡಿದ್ದಾರೆ. ನಟರಾಜ್‌ ಎಸ್‌ ಭಟ್‌, ಧರ್ಮಣ್ಣ ಕಡೂರು, ವೀಣಾಸುಂದರ್, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್‌ ಮುಖ್ಯಪಾತ್ರದಲ್ಲಿದ್ದಾರೆ.

ಮುಖ್ಯ ಪಾತ್ರವು ನಿರ್ದೇಶಕನಾಗಿದ್ದು, ಈ ಪಾತ್ರದಲ್ಲಿ ನಟರಾಜ್‌ ಎಸ್‌ ಭಟ್ ನಟಿಸಿದ್ದಾರೆ. ತಮ್ಮ ಮುಂಬರುವ ಸಿನಿಮಾ ಮ್ಯಾನ್‌ ಆಫ್‌ ದಿ ಮ್ಯಾಚ್‌ಗೆ ಆಡಿಶನ್‌ ಮಾಡುತ್ತಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ನಡೆಯುವ ಘಟನೆಗಳು ನಗೆಬುಗ್ಗೆ ಉಕ್ಕಿಸುತ್ತವೆ.

ಪ್ರೈಮ್‌ ವೀಡಿಯೋದಲ್ಲಿ ಭಾರತ ಮತ್ತು 240 ದೇಶಗಳು ಹಾಗೂ ಪ್ರಾಂತ್ಯಗಳಲ್ಲಿ ಮ್ಯಾನ್‌ ಆಫ್‌ ದಿಮ್ಯಾಚ್‌ ಮೇ 5 ಕ್ಕೆಬಿಡುಗಡೆಯಾಗಲಿದೆ.

Link:https://www.youtube.com/watch?v=nY-3SCTpT3k

Leave a Reply