ಕುಡತಿನಿಯ ಎ.ಪ್ರಿಯಾಂಕಾಗೆ ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್ಯಾಂಕ್

2 years ago

ಬಳ್ಳಾರಿ: ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿಭಾಗದ ಫಲಿತಾಂಶ ಪ್ರಕಟವಾಗಿದ್ದು, ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ಕುಡತಿನಿ ಗ್ರಾಮದ ಎ.ಪ್ರಿಯಾಂಕಾ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಧ್ಯಯನ ಮಾಡಿರುವ ಪ್ರಿಯಾಂಕ, ಎರಡು ವರ್ಷದ ಎಂ.ಎಸ್ಸಿ ಪದವಿಯ ಎಲ್ಲಾ ನಾಲ್ಕು ಸೆಮಿಸ್ಟರ್ ಗಳಿಂದ 2400 ಅಂಕಗಳಿಗೆ 1964 ಅಂಕ ಗಳಿಸಿದ್ದಾರೆ.

ಶೇ.81.83 ಪ್ರತಿಶತ ಸಾಧನೆ ತೋರಿರುವ ಪ್ರಿಯಾಂಕ ಅವರಿಗೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಮಗಳ ಸಾಧನೆ ಕುರಿತು ತಂದೆ ಅಕ್ಕಿ ಜಡೆಪ್ಪ ಹಾಗೂ ತಾಯಿ ರತ್ನಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಮದುವೆಯ ನಂತರವೂ ವಿದ್ಯಾಭ್ಯಾಸ ಮುಂದುವರೆಸುವ ಒತ್ತಾಸೆಗೆ ಪತಿ ಮಂಜುನಾಥ ಕೆ.ಎನ್ ಬೆಂಬಲವಾಗಿ ನಿಂತಿದ್ದಾರೆ. ತಂದೆ, ತಾಯಿ, ಪತಿ ಅವರ ಪ್ರೋತ್ಸಾಹದಿಂದಲೇ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು ಎಂದು ಪ್ರಿಯಾಂಕ ಸಂತಸ ವ್ಯಕ್ತಪಡಿಸಿದರು.

Leave a Reply