ಮತ ಎಣಿಕೆಗೆ ಜಿಲ್ಲಾಡಳಿತದ ಸಿದ್ಧತೆ ಪೂರ್ಣ

2 years ago

ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆ

ಮೊಬೈಲ್, ಎಲೆಕ್ಟ್ರಾನಿಕ್ಸ್ ಡಿವೈಸ್ ಗಳಿಗೆ ಅವಕಾಶವಿಲ್ಲ; ಮತ ಏಣಿಕೆ ಕೇಂದ್ರದ ಸುತ್ತಲೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ: ಚುನಾವಣಾಧಿಕಾರಿ ದಿವ್ಯ ಪ್ರಭು

ಧಾರವಾಡ: ಮೇ 7 ರಂದು ಜರುಗಿದ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣೆಯ ಮತ ಏಣಿಕಾ ಕಾರ್ಯಕ್ಕೆ ಧಾರವಾಡ ಜಿಲ್ಲಾಡಳಿತದಿಂದ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲಗಳಂತೆ ಒಟ್ಟು 112 ಟೇಬಲ್ ಗಳನ್ನು ಮತ ಏಣಿಕೆಗೆ ಸಿದ್ದಗೊಳಿಸಲಾಗಿದ್ದು, ಅಂದಾಜು 20 ಸುತ್ತುಗಳಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಲೋಕಸಭಾ ಚುನಾವಣೆಯ ಮತ ಏಣಿಕೆ ಕಾರ್ಯದ ಸಿದ್ದತೆ ಮತ್ತು ಮತ ಏಣಿಕಾ ಕೇಂದ್ರದ ಕುರಿತು ಮಾಹಿತಿ ನೀಡಿ, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ಆದೇಶದಂತೆ ಮೊಬೈಲ್ ಹಾಗೂ ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಡಿವೈಸಿಸ್ ಗಳನ್ನು ತರಲು ಅವಕಾಶವಿಲ್ಲ. ಮತ ಏಣಿಕಾ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು, ಮತ ಏಣಿಕಾ ಏಜಂಟರು, ಚುನಾವಣಾ ಏಜಂಟರು ಹಾಗೂ ಇತರರು ತಮ್ಮ ಮೊಬೈಲ್ ಗಳನ್ನು ಮತ ಏಣಿಕಾ ಕೇಂದ್ರದ ಹೊರಗೆ ಬಿಟ್ಟು ಬರಬೇಕು. ಒಂದು ವೇಳೆ ಮರೆತು ತಂದರೂ, ಅವರಿಗೆ ಪಸ್ಟ್ ಗೇಟ್ ದಲ್ಲಿ ಮೊಬೈಲ್ ಸಂಗ್ರಹ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಇಟ್ಟು ಚೀಟಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಮೊಬೈಲ್ ಹಾಗೂ ಇತರೆ ಡಿವೈಸ್ ಗಳನ್ನು ಮತ ಏಣಿಕಾ ಕೇಂದ್ರಕ್ಕೆ ತರಬಾರದೆಂದು ತಿಳಿಸಿದರು.

ಮತ ಏಣಿಕಾ ಕೇಂದ್ರದ ಸುತ್ತೂಲು 200 ಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆಯಿಂದ  ನಿಷೆಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಏಣಿಕೆ ಕೇಂದ್ರದಲ್ಲಿ ಮತ್ತು ಸೂತ್ತಲು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಚುನಾವಣಾ ವೇಳಾಪಟ್ಟಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 12ರಂದು ಅಧಿಸೂಚನೆ ಪ್ರಕಟವಾಗಿದ್ದು, ಏಪ್ರಿಲ್ 19 ರಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಏಪ್ರಿಲ್ 20 ರಂದು ನಾಮಪತ್ರ ಪರಿಶೀಲನೆ, ಏಪ್ರಿಲ್ 22 ರಂದು ನಾಮಪತ್ರ ಹಿಂಪಡೆಯಲು  ಕೊನೆಯ ದಿನವಾಗಿತ್ತು. ಮೇ 7 ರಂದು ಮತದಾನ ಜರಗಿದ್ದು, ಜೂನ್ 4 ರಂದು ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಜೂನ್ 6 ಕ್ಕೆ  ಪ್ರಸುತ್ತ ಲೋಕಸಭೆ ಚುನಾವಣೆಯ  ಮಾದರಿ ನೀತಿ ಸಂಹಿತೆ ಅವಧಿ ಮುಕ್ತಾಯ ಗೊಳ್ಳುವುದು ಎಂದರು.

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ವಿವರ: ಧಾರವಾಡ ಲೋಕಸಭಾ ಮತಕ್ಷೇತ್ರದ 2019 ರ ಲೋಕಸಭಾ  ಚುನಾವಣೆಯಲ್ಲಿ 19 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ್ತು 2024 ರ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣೆಗೆ 17 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಲೋಕಸಭಾ ಮತಕ್ಷೇತ್ರದ ಶೇಕಡವಾರು ಮತದಾನ: ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ 69-ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 71.48 ರಷ್ಟು ಮತದಾನ ವಾಗಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ 76.94 ರಷ್ಟು ಮತದಾನವಾಗಿದೆ.

70-ಕುಂದಗೋಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 73.01 ರಷ್ಟು ಮತದಾನ ವಾಗಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ 80.22 ರಷ್ಟು ಮತದಾನವಾಗಿದೆ.

71-ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 71.95 ರಷ್ಟು ಮತದಾನ ವಾಗಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ 75.75 ರಷ್ಟು ಮತದಾನವಾಗಿದೆ.

72-ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 71.56 ರಷ್ಟು ಮತದಾನ ವಾಗಿದ್ದರೆ,  2024ರ ಲೋಕಸಭಾ ಚುನಾವಣೆಯಲ್ಲಿ 73.53 ರಷ್ಟು ಮತದಾನವಾಗಿದೆ.

73-ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 64.64 ರಷ್ಟು ಮತದಾನ ವಾಗಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ 66.88 ರಷ್ಟು ಮತದಾನವಾಗಿದೆ.

74-ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 64.02 ರಷ್ಟು ಮತದಾನ ವಾಗಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ 67.09 ರಷ್ಟು ಮತದಾನವಾಗಿದೆ.

75-ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 75.92 ರಷ್ಟು ಮತದಾನ ವಾಗಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ 82.27 ರಷ್ಟು ಮತದಾನವಾಗಿದೆ.

ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಾವೇರಿ ಜಿಲ್ಲೆಯ 83-ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 71.64 ರಷ್ಟು ಮತದಾನ ವಾಗಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ 77.23 ರಷ್ಟು ಮತದಾನವಾಗಿದೆ.

ಒಟ್ಟಾರೆಯಾಗಿ ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 70.12 ರಷ್ಟು ಮತದಾನ ವಾಗಿದ್ದರೆ,  2024ರ ಲೋಕಸಭಾ ಚುನಾವಣೆಯಲ್ಲಿ 74.37 ರಷ್ಟು ಮತದಾನವಾಗಿದೆ.

ಇಟಿಪಿಬಿಎಸ್ ಮತಪತ್ರಗಳು: 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಜೂನ್ 4 ರಂದು ಜರಗಲಿದ್ದು, ಇಟಿಪಿಬಿಎಸ್ ಮತಪತ್ರಗಳ ಟ್ರಂಕನ್ನು ಜಿಲ್ಲಾ ಖಜಾನೆ ಧಾರವಾಡದ ಭದ್ರತಾ ಕೊಠಡಿಯಿಂದ ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳ ಉಪಸ್ಥಿತಿಯಲ್ಲಿ ಕರೆದು, ಜಿಪಿಎಸ್ ಅಳವಡಿಸಿದ ವಾಹನದಲ್ಲಿ ಪೊಲೀಸ್ ಬಂದೋಬಸ್ ದೊಂದಿಗೆ ಮತ ಎಣಿಕೆ ಕೇಂದ್ರವಾದ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸಾಗಿಸಲಾಗುತ್ತದೆ.

ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯನ್ನು ಬೆಳಿಗ್ಗೆ 6:30 ಗಂಟೆಗೆ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರುಗಳ ಉಪಸ್ಥಿತಿಯಲ್ಲಿ ತರಲಾಗುತ್ತದೆ.

ಅಂಚೆ ಮತಪತ್ರಗಳ ಹಾಗೂ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆಯ ಕಾರ್ಯವು ಜೂನ್ 4, 2024 ರಂದು ಬೆಳಿಗ್ಗೆ 8 ಗಂಟೆಯಿಂದ ಜರುಗುತ್ತದೆ ಎಂದರು.

ಇವಿಎಂ ಮತ ಎಣಿಕೆಗೆ  ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲ್‌ ಗಳಂತೆ, ಒಟ್ಟು 112 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಅಂದಾಜು 20 ಸುತ್ತುಗಳ ಮತ ಎಣಿಕೆ ಕಾರ್ಯ ನಡೆಯಲಿದೆ.

ಅಂಚೆ ಮತಪತ್ರ ಹಾಗೂ ಇ.ಟಿ.ಪಿ.ಬಿ.ಎಸ್., ಮತ ಎಣಿಕೆ ಕಾರ್ಯವನ್ನು ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಕೈಗೊಳ್ಳಲಾಗಿದ್ದು, ಮತ ಎಣಿಕೆ ಕಾರ್ಯಕ್ಕೆ ಹೆಚ್ಚುವರಿಯಾಗಿ 6 ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಿಕೊಳ್ಳಲಾಗಿದ್ದು, 6 ಟೇಬಲ್‌ಗಳಲ್ಲಿ ಅಂಚೆಮತ ಪತ್ರಗಳ ಮತ ಎಣಿಕೆ ಕಾರ್ಯ ಜರುಗಲಿದೆ ಎಂದರು‌.

ಮತ ಎಣಿಕೆ ಕಾರ್ಯಕ್ಕೆ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು, ಇತರ ಸೇರಿದೆಂತೆ ಒಟ್ಟು 1500 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಹಾಗೂ 697 ಜನರು ರಾಜಕೀಯ ಪಕ್ಷ, ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಏಣಿಕಾ ಏಜಂಟರು ಆಗಮಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ನಿಷೇಧಾಜ್ಞೆ: ಜೂನ 4 ರಂದು ಮತ ಏಣಿಕೆ ಕಾರ್ಯ ನಡೆಯುವದರಿಂದ ಜೂನ್  3, 2024 ರ ಸಂಜೆ 6 ಗಂಟೆಯಿಂದ ಜೂನ್ 5, 2024 ರ ರಾತ್ರಿ 10 ಗಂಟೆಯವರೆಗೆ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಆರ್.ಪಿ.ಸಿ. 1973 ಕಲಂ 144 ರಡಿ ನಿಷೇದಾಜ್ಞೆ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ ಎಂದರು.

ಮತ ಎಣಿಕೆ ಕೇಂದ್ರದಲ್ಲಿ  ಮಾಧ್ಯಮಗಳಿಗೆ ಪ್ರತ್ಯೇಕ ಕೇಂದ್ರ: ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ  ಮಾಧ್ಯಮಗಳಿಗೆ ವಿಶೇಷವಾಗಿ ಪ್ರತ್ಯೇಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ಡಿವೈಸಸ್‌ ಬಳಕೆ ನಿಷೇಧ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ಡಿವೈಸಸ್‌ಗಳ ಬಳಕೆಗೆ ಅವಕಾಶ ಇರುವುದಿಲ್ಲ. 

ಮತ ಎಣಿಕೆ ಕಾರ್ಯ ಮುಕ್ತಾಯಗೊಂಡ ನಂತರ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಇವಿಎಂ ಮತ್ತು ಮತ ಪತ್ರ (Election Papers) ಗಳನ್ನು ಮುದ್ರೆ (ಸೀಲ್) ಮಾಡುವ ಕಾರ್ಯ ಕೈಗೊಳ್ಳಲಾಗುವುದು.

ಮುದ್ರೆ ಹಾಕಲಾದ  ಇವಿಎಂಗಳನ್ನು ಧಾರವಾಡದ ಮಿನಿ ವಿಧಾನಸೌಧದ ಆವರಣದಲ್ಲಿರುವ ಇ.ವಿ.ಎಂ. ವೇರ್‌ಹೌಸ್ ಅನ್ನು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ತೆರೆದು ವಿಧಾನಸಭಾ ಮತಕ್ಷೇತ್ರವಾರು ಭದ್ರಪಡಿಸಲಾಗುವುದು. ಮತ್ತು ಮುದ್ರೆ ಹಾಕಲಾದ ಮತ ಪತ್ರ (Election Papers )ಗಳನ್ನು ಧಾರವಾಡದ ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿ ಭದ್ರಪಡಿಸಲಾಗುವುದು ಎಂದು ತಿಳಿಸಿದರು.

ಮೇ 30, 2024 ರಂದು ಎಲ್ಲ ಚುನಾವಣಾ ಅಭ್ಯರ್ಥಿಗಳ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆ ಜರುಗಿಸಿ ಮತ ಎಣಿಕೆ ಕಾರ್ಯ ಹಾಗೂ ಮತ ಎಣಿಕೆ ದಿನದಂದು  ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ ಎಂದರು.

ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ  ಜಿಲ್ಲೆಯಲ್ಲಿ ಮಾರ್ಚ್ 16, 2024 ರಿಂದ ಜೂನ್ 2, 2024ರವರೆಗೆ ಜಪ್ತು ಮಾಡಲಾದ ಸಾಮಗ್ರಿಗಳ ವಿವರ: ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿ ಮಾರ್ಚ 16 ರಿಂದ ಜೂನ್ 02 ರವರೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಡಿ ನಗದು ರೂ. 20,37,02,970 ಮತ್ತು ಚಿನ್ನ 0.778 ಕೆಜಿ, ಇದರ ಮೊತ್ತ ರೂ. 38,50,000, ಡ್ರಗ್ಸ್ ಮತ್ತು ಇತರೆ 12.78770 ಕೆಜಿ, ಇದರ ಮೊತ್ತ ರೂ.11,74,180, ಮದ್ಯ 11794.030 ಲೀಟರ್ ಜಪ್ತಿ ಮಾಡಿದ್ದು, ಇದರ ಮೊತ್ತ ರೂ.37,61,727 ಹಾಗೂ  ಉಚಿತ ಕೊಡುಗೆಗಳಾದ ಬಟ್ಟೆ, ಪ್ಯಾಂಟ್ ಪೀಸ್, ಮಿಕ್ಸರ್ ಮತ್ತು ಇತರೆ ವಸ್ತುಗಳು ಸೇರಿದಂತೆ ರೂ. 30,07,690 ಗಳ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಒಟ್ಟಾರೆ ನಗದು ಸೇರಿ ರೂ. 21,54,96,567 ಗಳ ಮೌಲ್ಯದ ವಸ್ತುಗಳು ಜಪ್ತಿಯಾಗಿವೆ ಮತ್ತು ಕ್ಯಾಶ್ ರೀ ಅಡ್ರಸಲ್ ಕಮೀಟಿಯಿಗೆ  ಸರಿಯಾದ ದಾಖಲೆ ಸಲ್ಲಿಸಿದ ಜಪ್ತಿ ಪ್ರಕರಣಗಳಲ್ಲಿ ಅವುಗಳ ಮಾಲೀಕರಿಗೆ ಜೂ.2 ರವರೆಗೆ ರೂ. 36,57,670 ಗಳ ನಗದು ಹಣವನ್ನು ಮರಳಿ ಬಿಡುಗಡೆ ಮಾಡಲಾಗಿದೆ ಎಂದರು. 

ಪೊಲೀಸ್ ಹಾಗೂ ಇತರ ದಳಗಳ ಭದ್ರತೆ, ಪಾರ್ಕಿಂಗ್ ವ್ಯವಸ್ಥೆ: ಸಿಆರ್‌ಪಿಎಫ್, ಕೆ.ಎಸ್.ಅರ್.ಪಿ, ಸಿಎಆರ್. ಹೋಮ್ ಗಾರ್ಡ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರನ್ನು ನಿಯೋಜಿಸಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ ಭದ್ರತೆಗಾಗಿ 650 ಪೊಲೀಸ್ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದರು.

ಎಣಿಕೆ ಕೇಂದ್ರದ ಸುತ್ತಲಿನ ಪಾರ್ಕಿಂಗ್ ವ್ಯವಸ್ಥೆ :
ಚುನಾವಣಾ ಅಭ್ಯರ್ಥಿಗಳು ಮತ್ತು ಎಜೆಂಟರ್‌ಗಳಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ:
ಪೆಪ್ಪಿ ಕಂಪನಿ ಕ್ರಾಸ್‌ನಿಂದ ಡೈರಿ, ಕೃಷಿ ವಿಶ್ವವಿದ್ಯಾಲಯ, ಕೆಇಬಿ ಗ್ರೀಡ್ ಗೇಟ್ ಮೂಲಕ ಕಾರಂಜಿ ಹತ್ತಿರ ಖಾಲಿ ಜಾಗದಲ್ಲಿ  ಚುನಾವಣಾ ಅಭ್ಯರ್ಥಿಗಳು ಮತ್ತು ಎಜೆಂಟರ್‌ಗಳಿಗೆ ವಾಹನಗಳ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.

ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ: ಹುಬ್ಬಳ್ಳಿ, ಸವದತ್ತಿ, ನವಲಗುಂದ, ಕಲಘಟಗಿ, ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಪೆಪ್ಪಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್‌ನಗರ, ಶಿರಡಿನಗರದ ಮಾರ್ಗವಾಗಿ ಬಸವನಗರ ಹತ್ತೀರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಹಾಗೂ ಬೆಳಗಾವಿ ಕಡೆಯಿಂದ ಬರುವಂತ ವಾಹನಗಳು ಕೆಇಬಿ ಗ್ರೀಡ್ ಹತ್ತೀರ ಯು-ಟರ್ನ್ ಮಾಡಿಕೊಂಡು ಬಸವನಗರ ಹತ್ತೀರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.

ಚುನಾವಣಾ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ: ಪೆಪ್ಪಿ ಕಂಪನಿ ಕ್ರಾಸ್ ಮಾರ್ಗವಾಗಿ ಎತ್ತಿನಗುಡ್ಡ ಗ್ರಾಮದ ಕ್ರಾಸ್ ಮುಖಾಂತರ ಲೇಡಿಸ್ ಹಾಸ್ಟೆಲ್ ಕ್ರಾಸ್, ಮೆಣಸಿನಕಾಯಿ ಸರ್ಕಲ್ ಕಡೆಗೆ ಅಧಿಕಾರಿ ಮತ್ತು ಸಿಬ್ಬಂದಿ ಅವರನ್ನು ಇಳಿಸಿ ಪರತ್ ಅದೇ ಮಾರ್ಗವಾಗಿ ಹೊಸ ಆಡಳಿತ ಭವನದ ಹಿಂದುಗಡೆ ಖಾಲಿ ಜಾಗದಲ್ಲಿ ಮತ್ತು ಲೇಡಿಸ್ ಹಾಸ್ಟಲ್‌ದಿಂದ ಎಡಕ್ಕೆ ತಿರುಗಿ ಎತ್ತಿನಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.

ಉಪನಗರ ಪೊಲೀಸ್ ಠಾಣೆ ಎದುರಿಗೆ (ಭಾರಿ ವಾಹನಗಳ ಡೈವರ್ಷನ್):  ಹುಬ್ಬಳ್ಳಿ ಮತ್ತು ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವಂತ ವಾಹನಗಳು ಉಪನಗರ ಪೊಲೀಸ್ ಠಾಣೆಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಜರ್ಮನ್ ಸರ್ಕಲ್ ಮಾರ್ಗವಾಗಿ ಕೆಲಗೇರಿ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಹೋಗಲು ಸೂಚಿಸಲಾಗಿದೆ.

ನರೇಂದ್ರ ಬೈಪಾಸ್ ಏರಟೆಕ್ ಕ್ರಾಸ್ (ಭಾರಿ ವಾಹನಗಳ ಡೈವರ್ಷನ್): ಪೆಪ್ಪಿ ಕಂಪನಿ ಕ್ರಾಸ್ (ಲಘು ವಾಹನಗಳ ಡೈವರ್ಷನ್) ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಭಾರಿ ವಾಹನಗಳು ನರೇಂದ್ರ ಟೋಲ್‌ ಪ್ಲಾಜಾ ಮುಖಾಂತರ ಕೆಲಗೇರಿ ಬ್ರಿಡ್ಜ್‌ನಿಂದ ಕೆಳಗೆ ಇಳಿದು ಜರ್ಮನ್ ಸರ್ಕಲ್, ಉಪನಗರ ಪೊಲೀಸ್ ಠಾಣೆ ಮಾರ್ಗವಾಗಿ ಹುಬ್ಬಳ್ಳಿ ಹಾಗೂ ಸವದತ್ತಿ, ನವಲಗುಂದ ಕಡೆಗೆ ಹೋಗಲು ಸೂಚಿಸಲಾಗಿದೆ

ಹುಬ್ಬಳ್ಳಿ ಮತ್ತು ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವಂತ ಲಘು ವಾಹನಗಳು ಪೆಪ್ಪಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್‌ನಗರ ಶಿರಡಿನಗರ, ಬಸವನಗರ ಮಾರ್ಗವಾಗಿ ನರೇಂದ್ರ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಸಂಚರಿಸಬೇಕು.

ಬಸವನಗರ ಕ್ರಾಸ್ (ಲಘು ವಾಹನಗಳ ಡೈವರ್ಷನ್) ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಲಘು ವಾಹನಗಳು ಕೆಇಬಿ ಗ್ರಿಡ್ ಹತ್ತಿರ ಯು-ಟರ್ನ್ ಮಾಡಿಕೊಂಡು ಬಸವನಗರ ಶಿರಡಿನಗರ, ಅರ್ಜಂಟ್‌ನಗರ ಪೆಪ್ಪಿ ಕಂಪನಿ ಮಾರ್ಗವಾಗಿ ಹಳೇ ಪಿಬಿ ರಸ್ತೆ ಮುಖಾಂತರ ಧಾರವಾಡ ನಗರದ ಕಡೆಗೆ ಹೋಗಲು ಸೂಚಿಸಲಾಗಿದೆ ಎಂದರು.

ಮತ ಏಣಿಕಾ ಕೇಂದ್ರಕ್ಕೆ ಆಗಮಿಸುವವರನ್ನು ಮೂರು ಹಂತದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ರಾಜಕೀಯ ಪಕ್ಷಗಳ ಏಜಂಟರಿಗೆ, ಅಧಿಕಾರಿಗಳಿಗೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕವಾದ ಸಂಚಾರ ಮಾರ್ಗಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ 144 ಕಲಂ ಜಾರಿಯಲ್ಲಿ ಇರುವದರಿಂದ ವಿಜಯೋತ್ಸವ ಆಚರಣೆ, ಪಟಾಕಿ ಹಚ್ಚುವುದನ್ನು ನಿರ್ಭಂಧಿಸಲಾಗಿದೆ ಎಂದರು.

ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿ , ಸುವ್ಯವಸ್ಥೆ ಕಾಪಾಡಲು ಸುಮಾರು 2500 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಮತ್ತು 6 ಕೆಎಸ್.ಆರ್.ಪಿ ತುಕುಡಿಗಳನ್ನು ಹಾಗೂ 500 ಹೋಮ್ ಗಾರ್ಡ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಪೊಲೀಸ್ ಆ‌ಯುಕ್ತ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹಾಜರಿದ್ದರು.

Leave a Reply