ಬೆಂಗಳೂರು: ಖಾತೆ ಬದಲಾಯಿಸುವಂತೆ ನಾನು ಮುಖ್ಯಮಂತ್ರಿಯವರನ್ನು ಕೇಳಿದ್ದೇನೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ. ನಾನು ಯಾವತ್ತು ಕೂಡ ನಿರ್ದಿಷ್ಟವಾಗಿ ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟೀಕರಣ ನೀಡಿದ್ದಾರೆ.
- ಸರ್ವಜನಾಂಗದ ಶಾಂತಿಯ ತೋಟವೇ ನಮ್ಮ ಗುರಿ: ಸಿದ್ದರಾಮಯ್ಯ
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
ಮಾಧ್ಯಮಗಳಲ್ಲಿ ಖಾತೆ ಬದಲಾವಣೆಗೆ ಪರಮೇಶ್ವರ್ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘ಗೃಹ ಖಾತೆ ಬದಲಾವಣೆ ಕುರಿತು ಪರಮೇಶ್ವರ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿಯವರ ಬಳಿ ಕೇಳಿಕೊಂಡರು. ಮುಖ್ಯಮಂತ್ರಿಯವರು ಸುಮ್ಮನೆ ಇರಿ ಎಂದು ಪರಮೇಶ್ವರ್ ಅವರಿಗೆ ಹೇಳಿದರು’ ಎಂದೆಲ್ಲ ಸುದ್ದಿ ಮಾಡಲಾಗಿದೆ. ಇದೆಲ್ಲ ತಪ್ಪು ಮಾಹಿತಿಯಿಂದ ಕೂಡಿದ ಸುದ್ದಿಯಾಗಿರುತ್ತದೆ ಎಂದಿದ್ದಾರೆ.
ಖಾತೆ ಬದಲಾವಣೆಯ ಕುರಿತಂತೆ ನಾನು ಯಾರ ಬಳಿಯೂ ಮಾತನಾಡೇ ಇಲ್ಲ. ಇದೆಲ್ಲ ಸತ್ಯಕ್ಕೆ ದೂರವಾದದ್ದು. ವಿರೋಧ ಪಕ್ಷದವರು ಹಬ್ಬಿಸುತ್ತಿರುವ ವದಂತಿಯಾಗಿದೆ. ಈ ವಿಚಾರವನ್ನು ಯಾರು ಕೂಡ ಗಣನೆಗೆ ತೆಗೆದುಕೊಳ್ಳಬಾರದು ಎಂಬುದು ನನ್ನ ಮನವಿ ಮಾಡಿದ್ದಾರೆ.




