ಸಂಭಾವ್ಯ ಸಚಿವರ ಪಟ್ಟಿ

3 years ago

ಬೆಂಗಳೂರು: ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಯ್ಕೆ ಕಸರತ್ತು ಮುಗಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಕೂಡ ತೀವ್ರತೆ ಪಡೆದುಕೊಂಡಿದೆ. ಮಂತ್ರಿ ಸ್ಥಾನ ಪಡೆಯಲು ಹಲವರು ಲಾಭಿ ನಡೆಸಿದರೆ ಮಂತ್ರಿ ಆಗುವ ಖಚಿತತೆ ಇರುವ ಹಿರಿಯ ನಾಯಕರು ಪ್ರಮುಖ ಖಾತೆಗಳಿಗಾಗಿ ಪೈಪೋಟಿ ಆರಂಭಿಸಿದ್ದಾರೆ.

ಉಪಮುಖ್ಯಮಂತ್ರಿಯಾಗಲಿರುವ ಡಿಕೆ ಶಿವಕುಮಾರ್ ತಮಗೆ ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಇಲಾಖೆ ಅಥವಾ ಇಂಧನ ಇಲಾಖೆ ಬೇಕು ಎಂದು ವರಿಷ್ಠರ ಬಳಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೆನ್ನಲಾದ ಕೆಜೆ ಜಾರ್ಜ್ ಅವರು ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಇವರ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆ ಬೇಕೆಂದು ಹೇಳುತ್ತಿರುವ ಜಿ ಪರಮೇಶ್ವರ್ ಅವರು ಕೂಡ ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕೆಂದು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿರುವವರು ಗೃಹ ಖಾತೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಅಭಿಪ್ರಾಯವೊಂದಿದ್ದರೂ, ಡಿಕೆ ಶಿವಕುಮಾರ್ ಅವರಿಗೆ ಆ ಜವಾಬ್ದಾರಿ ನೀಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ .

ಹೀಗಾಗಿ ಚಾರ್ಜ್ ಅಥವಾ ಜಿ ಪರಮೇಶ್ವರ್ ಇಬ್ಬರಲ್ಲಿ ಒಬ್ಬರನ್ನು ಗೃಹ ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದ್ದು ಪರಮೇಶ್ವರ್ ಅವರು ಗೃಹ ಖಾತೆಯ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ನೀಡಬೇಕೆಂದು ಮನವಿ ಮಾಡಿರುವುದಾಗಿ ಗೊತ್ತಾಗಿದೆ.

ಮತ್ತೊಬ್ಬ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಕೂಡ ತಮಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ನೀಡಬೇಕೆಂದು ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂ ಬಿ ಪಾಟೀಲ್ ಅವರು ತಮಗೆ ಜಲ ಸಂಪನ್ಮೂಲ ಇಲಾಖೆ ಬೇಕೆಂದು ಮನವಿ ಮಾಡಿದರೆ ಸತೀಶ್ ಜಾರಕಿಹೊಳಿ ಅವರು ಸಮಾಜ ಕಲ್ಯಾಣ ಇಲಾಖೆ ಆರ್ ವಿ ದೇಶಪಾಂಡೆ ಬೃಹತ್ ಕೈಗಾರಿಕೆ ಟಿ. ಬಿ. ಜಯಚಂದ್ರ ಮತ್ತು ಕೃಷ್ಣ ಬೈರೇಗೌಡ ಕೃಷಿ ಯು.ಟಿ. ಖಾದರ್ ಅವರು ನಗರಾಭಿವೃದ್ಧಿ ಇಲಾಖೆಯ ಮೇಲೆ ಕಣ್ಣಿಟ್ಟಿದ್ದಾರೆ.

ಪ್ರಮುಖವಾಗಿ ಕಂದಾಯ ಬೆಂಗಳೂರು ನಗರಾಭಿವೃದ್ಧಿ  ಜಲಸಂಪನ್ಮೂಲ ಬೃಹತ್ ಕೈಗಾರಿಕೆ ಮತ್ತು ಸಮಾಜಕಲ್ಯಾಣ ನಗರಾಭಿವೃದ್ಧಿ ಲೋಕೋಪಯೋಗಿ ಮತ್ತು ಸಣ್ಣ ಕೈಗಾರಿಕೆ ಇಲಾಖೆಗಳ ಮಂತ್ರಿ ಆಗಲು ಹಲವರು ಲಾಬಿ ನಡೆಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಯೋಜನೆ ಒಳಾಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯನ್ನು ಇಟ್ಟುಕೊಳ್ಳುವ ಸಾಧ್ಯತೆ ಇದೆ..

ಸಂಭವನೀಯ ಸಚಿವರು: ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭದ ನಂತರ 20 ಮಂದಿ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ 20 ಶಾಸಕರು ಸಂಪುಟ ದರ್ಜೆ ಮಂತ್ರಿಗಳಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಎಲ್ಲಾ ಜಾತಿ ಪ್ರದೇಶ ಮತ್ತು ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮಂತ್ರಿ ಮಂಡಲ ರಚನೆಯಾಗುತ್ತಿದ್ದು ಕೊನೆಯ ಕ್ಷಣಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಡಾ.ಜಿ.ಪರಮೇಶ್ವರ

ಬಿ.ಕೆ.ಹರಿಪ್ರಸಾದ್‌

ಎಂ.ಬಿ.ಪಾಟೀಲ

ರಾಮಲಿಂಗಾ ರೆಡ್ಡಿ

ಆರ್.ವಿ.ದೇಶಪಾಂಡೆ

ಕೆ.ಜೆ.ಜಾರ್ಜ್‌

ಎಚ್‌.ಕೆ.‍ಪಾಟೀಲ

ಕೃಷ್ಣ ಬೈರೇಗೌಡ

ಯು.ಟಿ.ಖಾದರ್‌

ಜಮೀರ್ ಅಹ್ಮದ್‌ ಖಾನ್‌

ಸತೀಶ ಜಾರಕಿಹೊಳಿ

ಲಕ್ಷ್ಮಿ ಹೆಬ್ಬಾಳ್ಕರ್

ಲಕ್ಷ್ಮಣ ಸವದಿ

ರೂಪಕಲಾ ಶಶಿಧರ್‌

ಶರಣ ಪ್ರಕಾಶ ಪಾಟೀಲ

ಪ್ರಿಯಾಂಕ ಖರ್ಗೆ

ಬಸವರಾಜ ಹಿಟ್ನಾಳ್

ವಿಜಯಾನಂದ ಕಾಶಪ್ಪನವರ

ವಿನಯ್‌ ಕುಲಕರ್ಣಿ

ಟಿ.ಡಿ.ರಾಜೇಗೌಡ

ಕೆ.ಎಂ.ಶಿವಲಿಂಗೇಗೌಡ

ಬಿ.ಕೆ. ಸಂಗಮೇಶ್ವರ

ಬಿ. ನಾಗೇಂದ್ರ

ಆರ್‌.ಬಿ. ತಿಮ್ಮಾಪುರ

 ಎಸ್‌.ಎಸ್‌.ಮಲ್ಲಿಕಾರ್ಜುನ

ಎಂ.ಕೃಷ್ಣಪ್ಪ ಅವರು ಮಂತ್ರಿಗಳಾಗುವ ಸಾಧ್ಯತೆಗಳು ದಟ್ಟವಾಗಿವೆ.

ದೆಹಲಿಯಲ್ಲಿ ಕಸರತ್ತು: ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ಆಗಮಿಸಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವರಿಷ್ಠರೊಂದಿಗೆ ಸುದೀರ್ಘಚರ್ಚೆ ನಡೆಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಾಯಕರು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಎಲ್ಲಾ ವರ್ಗ ಮತ್ತು ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡುವ ಕುರಿತು ಮಾತುಕತೆ ನಡೆಸಿದರು ಸುಧೀರ್ಘ ಮಾತುಕತೆಯ ನಂತರ ಮಲ್ಲಿಕಾರ್ಜುನ ಖರ್ಗೆ ಪಟ್ಟಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಪ್ರಮಾಣ ವಚನ ಸ್ವೀಕಾರಕ್ಕೆ ಅಸ್ತು ನೀಡಿದರು.

Leave a Reply