ಬೆಂಗಳೂರು: ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ನಾನು ಹೇಳಲೇ ಇಲ್ಲ. ಅಷ್ಟೊಂದು ಪ್ರಜ್ಞೆ ಇಲ್ವಾ ನನಗೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಅದನ್ನು ಕೇಂದ್ರ ಸರ್ಕಾರದ ಬಳಿ ಕೇಳಿ ಎಂದು ಹೇಳಿರುವ ಕುರಿತಂತೆ ಸ್ಪಷ್ಟನೆ ನೀಡಿದರು.
ನಾನು ಹಾಗೆ ಎಲ್ಲಿ ಹೇಳಿದ್ದೇನೆ ಎಂಬುವುದನ್ನು ಬಿಜೆಪಿಯವರು ತಿಳಿಸಲಿ. ಬಾದಾಮಿ ಅಭಿವೃದ್ಧಿ ಹಾಗೂ ಗುಹೆಗಳ ರಕ್ಷಣೆಗೆ 1000 ಕೋಟಿ ಪ್ರಸ್ತಾವನೆ ರೆಡಿ ಮಾಡಿ ಕೇಂದ್ರಕ್ಕೆ ಕಳಿಸಿ ಅಂದೆ. ಅಷ್ಟೊಂದು ದುಡ್ಡು ನಾವು ಕೊಡಲು ಆಗೋದಿಲ್ಲ, ಆ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸಿ ಅಂದಿದ್ದೆ, ಕೇಂದ್ರವೂ ಕೊಟ್ರೆ ಅನುುಕೂಲ ಆಗುತ್ತೆ ಅಂದಿದ್ದೆ. ಇಷ್ಟೇ ಹೇಳಿದ್ದು, ದುಡ್ಡೇ ಇಲ್ಲ ಅಂತ ನಾನೆಲ್ಲಿ ಹೇಳಿದ್ದೇನೆ? ಎಂದು ಕೇಳಿದರು.
ನೀರಾವರಿಗೆ, ಅಭಿವೃದ್ಧಿಗೆ ಹಣ ಕೊಟ್ಟಿದೀವಿ, ಗ್ಯಾರಂಟಿಗೊಂದೇ ಕೊಟ್ಟಿಲ್ಲ. ಸರ್ಕಾರದ ಬಳಿ ದುಡ್ಡೇ ಇಲ್ಲ ಅಂತ ಹೇಳ್ತೀನಾ ನಾನು? ಅಷ್ಟು ಪ್ರಜ್ಞೆ ಇಲ್ವಾ ನನಗೆ? ಸರ್ಕಾರದಲ್ಲಿದ್ದುಕೊಂಡು ನಾವು ಆ ರೀತಿ ಎಲ್ಲ ಮಾತಾಡಲು ಸಾಧ್ಯವಿಲ್ಲ, ನಾವು ಹಾಗೆಲ್ಲ ಮಾತಾಡೋದೂ ಇಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ನನಗೆ ವಸ್ತುಸ್ಥಿತಿ ಗೊತ್ತಿದೆ. ನನಗಿಂತ ಚೆನ್ನಾಗಿ ಯಾರಿಗೆ ಅರ್ಥ ಆಗುತ್ತೆ? ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ನಾವು ಹಾಗೆಲ್ಲ ಮಾತಾಡಲು ಹೋಗೋದಿಲ್ಲ. ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದರು.




