ಬೆಂಗಳೂರು: ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ 1916ರಲ್ಲಿ ಸ್ಥಾಪನೆಯಾಗಿ, ಇದೀಗ ರಾಜ್ಯ ಸರ್ಕಾರದ ಒಡೆತನದಲ್ಲಿ ಶತಮಾನೋತ್ಸವವನ್ನು ಆಚರಿಸಿ ಮುನ್ನಡೆಯುತ್ತಿದೆ. ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದ್ದು, ವಿವಿಧ ಸುಗಂಧ ದ್ರವ್ಯ, ಸೋಪ್ ಗಳ ಉತ್ಪಾದನೆಯ ಮೂಲಕ ರಾಜ್ಯ ಮಾತ್ರವಲ್ಲದೆ ದೇಶವಿದೇಶದಲ್ಲೂ ಸದ್ದು ಮಾಡಿದೆ. ಮಾರಾಟದ ಮೂಲಕ ಆದಾಯವನ್ನು ದಿನೇದಿನೇ ವೃದ್ಧಿಗೊಳಿಕೊಳ್ಳುತ್ತಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನಗಳ ಪರವಾಗಿ ನಟಿ ಪೂಜಾ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೈಬರಹದಲ್ಲಿ ಬರೆದಿರುವ ಪತ್ರ ಮತ್ತು ಮೈಸೂರು ಸ್ಯಾಂಡಲ್ ಉತ್ಪನ್ನಗಳನ್ನು ಹಂಚಿಕೊಳ್ಳುವ ಮೂಲಕ ಈ ಉತ್ಪನ್ನಗಳಿಗೆ ಪ್ರಚಾರ ನೀಡಿದ್ದಾರೆ.

ಪತ್ರದಲ್ಲಿ, ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತನ್ನ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ದ್ವಿಗುಣಗೊಳಿಸಿರುವ ವರದಿ, ಈ ನೆಲದ ಕೈಗಾರಿಕೆ ಮತ್ತು ಉತ್ಪನ್ನಗಳ ಶ್ರೇಷ್ಠತತೆಗೆ ಸಾಕ್ಷಿ ಎಂದಿದ್ದಾರೆ.

ಅಲ್ಲದೇ, ಆಗಾಗ್ಗೆ ಬೇರೆ ಸೋಪ್ ಗಳ ಮೋಹಕ್ಕೆ ಒಳಗಾದರೂ, ಮತ್ತೆ ಮತ್ತೆ ಕಾಡುವ ಪ್ರೀತಿಯಂತೆ ಮನೆ-ಮನ ಸೇರುವ, ಶತಮಾನದ ಇತಿಹಾಸ, ಅತ್ಯುತ್ತಮ ಸುಗಂಧ ಮತ್ತು ನಿರಂತರ ಗುಣಮಟ್ಟದ ಸ್ಥಿರಿತೆಯಿಂದಾಗಿ, ಕನ್ನಡಿಗರೆಲ್ಲರ ಹೆಮ್ಮೆಯಾಗಿರುವ ಮೈಸೂರು ಸ್ಯಾಂಡಲ್ ಸೋಪ್ ನ ಬಗ್ಗೆ ತಮ್ಮ ಭಾವನೆ, ಅಭಿಪ್ರಾಯ ಮತ್ತು ನೆನಪುಗಳಿದ್ದರೆ ನನ್ನೊಂದಿಗೆ ಹಂಚಿಕೊಳ್ಳಿ ಎಂದು ಕರೆನೀಡಿದ್ದಾರೆ.





