ಬೆಂಗಳೂರು: ದ್ರೋಣ್ ಮತ್ತು ಸ್ಮಾರ್ಟ್ ಫೋನ್ ತಯಾರಿಕೆಯ ಘಟಕವನ್ನು ಬೆಂಗಳೂರು ಹೊರವಲಯದಲ್ಲಿ ಆರಂಭಿಸಲು ಮುಂದೆ ಬಂದಿದ್ದ ಗೂಗಲ್ ಇದೀಗ ಶತಕೋಟಿ ಬಂಡವಾಳ ಹೂಡಿಕೆಯಿಂದ ಹಿಂದೆ ಸರಿದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆರೋಪಿಸಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಕರ್ನಾಟಕ ಸರ್ಕಾರ ಗೂಗಲ್ ಸಂಸ್ಥೆ ಜೊತೆ ಸಮರ್ಪಕ ರೀತಿಯಲ್ಲಿ ವ್ಯವಹಾರ ನಡೆಸಿಲ್ಲ. ಗೂಗಲ್ ಮಾಡಿದ ಯಾವುದೇ ಪ್ರಸ್ತಾವನೆಗಳಿಗೆ ಸೂಕ್ತ ರೀತಿಯ ಸ್ಪಂದನೆ ಸಿಕ್ಕಿಲ್ಲ ಸರ್ಕಾರ ಕೇವಲ ರಾಜಕಾರಣ ಮತ್ತು ದ್ವೇಷದ ಆಡಳಿತ ನಡೆಸುವಲ್ಲಿ ನಿರತವಾಗಿದೆ ಇದರಿಂದ ಬೇಸರಗೊಂಡ ಸಂಸ್ಥೆ ನೆರೆಯ ತಮಿಳುನಾಡಿಗೆ ವರ್ಗಾವಣೆಗೊಂಡಿದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯ ಸರ್ಕಾರದ ದುರಾಡಳಿತ ಮತ್ತು ತಪ್ಪಾದ ಆದ್ಯತೆಗಳಿಂದ ರಾಜ್ಯವನ್ನು ವಿಪತ್ತಿನತ್ತ ಕೊಂಡೊಯ್ಯುವ ಮತ್ತು ದಿಕ್ಕಿಲ್ಲದ ರೀತಿಯಲ್ಲಿ ತನ್ನ ದಾರಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಜಡ, ನಿದ್ರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೇರ ಪರಿಣಾಮಗಳನ್ನು ಹೊಂದುತ್ತಿದೆ ಎಂದಿದ್ದಾರೆ.
ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಭಾರತ ಯಶಸ್ವಿಯಾಗಿದ್ದರೆ, ಕರ್ನಾಟಕವನ್ನು ಉನ್ನತ ಹೂಡಿಕೆಯ ತಾಣ ಎಂದು ತೋರಿಸುವಲ್ಲಿ ಮತ್ತು ಹೂಡಿಕೆದಾರರಲ್ಲಿ ವಿಶ್ವಾಸವನ್ನು ತುಂಬುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.
ಮೈತ್ರಿಕೂಟದ ಪಾಲುದಾರ ಡಿಎಂಕೆ ಪರವಾಗಿ ನಮ ಪಾಲಿನ ಕಾವೇರಿ ನೀರನ್ನು ರಕ್ಷಿಸಲು ಸಾಧ್ಯವಾಗದೆ ಕರ್ನಾಟಕದ ರೈತರನ್ನು ಹಾಳು ಮಾಡಿದ್ದು ಇದೇ ಸರ್ಕಾರ. ಬಹು ಶತಕೋಟಿ ಡಾಲರ್ ಹೂಡಿಕೆಗಳು ತಮಿಳುನಾಡಿಗೆ ದಾರಿ ಮಾಡಿಕೊಡುವುದರೊಂದಿಗೆ ಅದೇ ಟ್ರೆಂಡ್ ಮುಂದುವರೆಯುವುದರಲ್ಲಿ ಆಶ್ಚರ್ಯವಿಲ್ಲ ಎಂದು ಟೀಕಿಸಿದ್ದಾರೆ.
ಈ ಮೂಲಕ ರಾಜ್ಯದ ಆಡಳಿತಾರೂಡ ಕಾಂಗ್ರೆಸ್ ಸರ್ಕಾರದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ, ನಿಧಾನ ಗತಿಯ ಧೋರಣೆ, ನಿರಾಶದಾಯಕ ಸ್ಪಂದನೆಯಿಂದ ಬೇಸತ್ತಿರುವ ವಿವಿಧ ಉದ್ಯಮಿಗಳು ಕರ್ನಾಟಕದಿಂದ ದೂರವಾಗುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದಂತಾಗಿದೆ.




