ಬೆಂಗಳೂರು: ಜನರ ಸಮಸ್ಯೆಗಳು ನಿವಾರಣೆಯಾಗಬೇಕಾದರೆ, ಜನಪ್ರತಿನಿಧಿಗಳು ಸಾರ್ವಜನಿಕರ ಜೊತೆಯಲ್ಲಿ ನಿರಂತರ ಒಡನಾಟ, ಜನರನ್ನ ನೇರ ಭೇಟಿ ಮಾಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ದಾಸರಹಳ್ಳಿ ಮತ್ತು ಡಾ.ರಾಜ್ ಕುಮಾರ್ ವಾರ್ಡ್ ನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆ ಮತ್ತು ದೇವಸ್ಥಾನ ನವೀಕರಣ, ಉದ್ಯಾನವನ ಪರಿಶೀಲನೆ, ಜನ ಸ್ಪಂದನಾ ಪಾದಯಾತ್ರೆಯನ್ನು ನಡೆಸಿ ಮಾತಾಡಿದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಜನರ ನಡುವೆ ನಿರಂತರ ಒಡನಾಟದಿಂದ ಅಭಿವೃದ್ದಿ ಕಾರ್ಯ ಮಾಡಲು, ಸಮಸ್ಯೆಗಳು ಸುಲಲಿತವಾಗಿ ನಿವಾರಣೆಯಾಗುತ್ತಿದೆ ಎಂದರು.
ನಮ್ಮ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಕ್ರೀಡೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಡಯಾಲಿಸಿಸ್ ಆಸ್ಪತ್ರೆ, ಜ್ಞಾನಸೌಧ, ಉದ್ಯಾನವನ ನಗರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವಾಗಿದೆ. ಶ್ರೀಮಂತರ ಹಣ ವೆಚ್ಚ ಮಾಡಿ ಚಿಕಿತ್ಸೆ ಪಡೆಯಬೇಕು. ನಮ್ಮಲ್ಲಿ ಬಡವರಿಗೆ ಉಚಿತವಾಗಿ ಹೈಟೆಕ್ ಚಿಕಿತ್ಸೆ ಲಭಿಸುತ್ತಿದೆ. ಜನರ ಸಮಸ್ಯೆ ನಿವಾರಣೆಯಾಗಬೇಕು. ಇದು ನಮ್ಮ ಉದ್ದೇಶ ಎಂದರು.
ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ಬಿ.ಜೆ.ಪಿ. ಮುಖಂಡರಾದ ರಮೇಶ್ ಶ್ರೀಧರ್, ಶಾಮಣ್ಣ ಮತ್ತು ಬಿ.ಬಿ.ಎಂ.ಪಿ. ಅಧಿಕಾರಿಗಳು ಪಾಲ್ಗೊಂಡಿದ್ದರು.



