ಮಂಗಳೂರು: ವಿಪರೀತ ಬೆಲೆಯೇರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಕೇಂದ್ರ, ರಾಜ್ಯ ಸಕರಾರಗಳ ಜನ ವಿರೋಧಿ ನೀತಿಗಳನ್ನು ಖಂಡಿಸಿ ಆಗಸ್ಟ್ 3 ರಿಂದ 11 ರವರಗೆ ಜಿಲ್ಲೆಯಾದ್ಯಂತ ರಾಜಕೀಯ ಪ್ರಚಾರಾಂದೋಲನ ನಡೆಸಲು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ತೀರ್ಮಾನಿಸಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಹುರಾಷ್ಟ್ರೀಯ ಕಾರ್ಪೊರೋಟ್ ಹಿತಾಸಕ್ತಿಗಳ ಪರವಾದ ನೀತಿಗಳನ್ನು ನಿರ್ಲಜ್ಜವಾಗಿ ಜಾರಿಗೆ ತರುತ್ತಿದೆ. ಇದರಿಂದಾಗಿ ದೇಶದ ಒಳಗಡೆ ಶ್ರೀಮಂತರ ಸಂಪತ್ತು ಅಪಾರ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ಸಮಿತಿ ಹೇಳಿದೆ.
ಬಡತನದ ಪ್ರಮಾಣವೂ ಅಧಿಕಗೊಳ್ಳುತ್ತಿದೆ. ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸಿ ಅವರನ್ನು ಕಾರ್ಪೊರೇಟ್ ಕಂಪೆನಿಗಳ ಸಂಪತ್ತು ಹೆಚ್ಚಿಸುವ ಯಂತ್ರದ ರೀತಿ ಪರಿಗಣಿಸಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ನಿರುದ್ಯೋಗ, ಬಡತನ ವೇಗವಾಗಿ ಏರುತ್ತಿದೆ ಎಂದು ಸಮಿತಿ ತಿಳಿಸಿದೆ.
ರಾಜ್ಯದ ಕಾಂಗ್ರೆಸ್ ಸರಕಾರ ಆರ್ಥಿಕ ನೀತಿಗಳಲ್ಲಿ ಕೇಂದ್ರದ ಬಿಜೆಪಿ ಸರಕಾರದ ಪಡಿಯಚ್ಚಿನಂತೆ ನಡೆದುಕೊಳ್ಳುತ್ತಿದೆ. ಕಾರ್ಮಿಕರ ದುಡಿಮೆಯ ಅವಧಿಯನ್ನು ಹತ್ತು ಗಂಟೆಗೆ ಹೆಚ್ಚಿಸುವುದು, ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಅಪಾಯಕಾರಿ ರೈತ ಕಾಯ್ದೆಗಳನ್ನು ಮುಂದುವರಿಸುತ್ತಿರುವುದು ಕಾಂಗ್ರೆಸ್ ಸರಕಾರದ ಜನವಿರೋಧಿ ಧೋರಣೆಗಳನ್ನು ಎತ್ತಿ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ದ.ಕ. ಜಿಲ್ಲೆಯಲ್ಲಿಯೂ ಸರಕಾರಗಳ ಈ ನೀತಿಗಳ ಪರಿಣಾಮಗಳು ಜನತೆಯನ್ನು ಹೈರಾಣಾಗಿಸಿದೆ. ಮತೀಯ ರಾಜಕಾರಣ, ಫ್ಯೂಡಲ್ ಮೌಲ್ಯಗಳು ಕರಾವಳಿ ರಾಜಕಾರಣದ ಹೆಗ್ಗುರಿತಿನಂತಾಗಿದೆ. ಖಾಸಗಿ ಆರೋಗ್ಯ, ಶಿಕ್ಷಣದ ಲಾಭಿಗಳ ಸಹಿತ ಬಲಾಢ್ಯ ವ್ಯಾಪಾರಿ ವರ್ಗ ಜಿಲ್ಲೆಯ ರಾಜಕಾರಣ, ಆರ್ಥಿಕತೆಯನ್ನು ನಿರ್ದೇಶಿಸುತ್ತಿದ್ದಾರೆ ಎಂದು ದೂರಿದೆ.
ಈ ಎಲ್ಲಾ ವಿಷಯಗಳನ್ನು ಮುಂದಿಟ್ಟು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಒಂದು ವಾರಗಳ ಕಾಲದ ರಾಜಕೀಯ ಪ್ರಚಾರಾಂದೋಲನ ನಡೆಸಲು ತೀರ್ಮಾನಿಸಿದೆ. ಪ್ರತಿ ಗ್ರಾಮಮಟ್ಟದಲ್ಲಿ ಮನೆ ಮನೆ ಭೇಟಿ, ಕರಪತ್ರ ವಿತರಣೆ, ವಾರ್ಡ್ ಮಟ್ಟದಲ್ಲಿ, ಗ್ರಾಮಮಟ್ಟಲ್ಲಿ ಸಾರ್ವಜನಿಕ ಸಭೆ, ಪ್ರಚಾರ ಸಭೆಗಳನ್ನು ನಡೆಸುವುದು, ಜನಸಾಮಾನ್ಯರೊಂದಿಗೆ ಸಂವಾದಗಳನ್ನು ಪ್ರಚಾರಾಂದೋಲನದ ಭಾಗವಾಗಿ ಸಂಘಟಿಸಲಾಗುತ್ತಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ಪ್ರಕಟನೆ ತಿಳಿಸಿದೆ.




