ವಿಕಲಚೇತರಿಗೆ ಅನುಕಂಪಬೇಡ ಅವಕಾಶ ಕೊಡಿ: ಕೆ.ವೈ.ವೆಂಕಟೇಶ್

4 years ago

ಪದ್ಮಶ್ರೀ ಪುರಸ್ಕೃತ ವಿಕಲಚೇತನ ಕೆ.ವೈ.ವೆಂಕಟೇಶ್ ಅವರಿಗೆ ಸನ್ಮಾನ

ಗುರಿ ಜೊತೆಯಲ್ಲಿ ಗುರುವಿನ ಸಹಕಾರ ಛಲವಿದ್ದರೆ ಸಾಧನೆ ಮಾಡಲು ಸಾಧ್ಯ: ಎಮ್.ಶಿವರಾಜು

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ, ಶಂಕರಮಠ ವಾರ್ಡ್, ಶ್ರೀ ವರಸಿದ್ದಿ ವಿನಾಯಕ ಹಾಗೂ ಶ್ರೀ ವರಪ್ರದ ಲಕ್ಷ್ಮೀವೆಂಕಟೇಶ್ವರ ದೇವಾಲಯ ವತಿಯಿಂದ ಪದ್ಮಶ್ರೀ ಪುರಸ್ಕೃತ ಕೈ.ವೈ.ವೆಂಕಟೇಶ್ ಅವರಿಗೆ ಗೌರವ ಸನ್ಮಾನ ಏರ್ಪಡಿಸಲಾಗಿತ್ತು.

ಮುಖಂಡ ಎಮ್.ಶಿವರಾ, ದೇವಸ್ಥಾನ ಆಡಳಿತ ಮಂಡಳಿಯ ತಾತಚಾರ್ಯ ಪಿ.ಸುರೇಶ್ ಬಾಬು, ಮಾಧವರಾವ್, ಪ್ರಕಾಶ್ ರಾವ್, ರಾಜೇಂದ್ರ ಗುಪ್ತಾ, ಸುಬ್ರಮಣ್ಯ, ವಿಶ್ವನಾಥ್ ಮತ್ತು ಶಂಕರಮಠ ವಾರ್ಡ್ ನಾಗರಿಕರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪದ್ಮಶ್ರೀ ಕೆ.ವೈ.ವೆಂಕಟೇಶ್ ಅವರು ಮಾತನಾಡಿ, ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶಕೊಡಿ ಸಾಧನೆ ಮಾಡಲು ಸಹಕಾರ ನೀಡಿ. ಒಲಂಪಿಕ್ ನಲ್ಲಿ 14 ಪದಕಗಳು ಮತ್ತು ರಾಷ್ಟ ರಾಜ್ಯ ಮಟ್ಟದಲ್ಲಿ ನೂರಾರು ಪದಕಗಳನ್ನು ಗಳಿಸಲು ಜನರ ಸಹಕಾರ ಕಾರಣ. ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ವಯಂ ಸೇವಾ ಸಂಘಟನೆಗಳು ಯುವ ಕ್ರೀಡಾಪಟುಗಳಿಗೆ ಪ್ರೋತ್ಸಹ ನೀಡುತ್ತಿವೆ ಎಂದರು.
ಯುವಕರು ಮೊಬೈಲ್ ಮತ್ತು ದುಷ್ಟ ಚಟಗಳಿಂದ ದೂರವಿರಿ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಮಾನಸಿಕ, ದೈಹಿಕವಾಗಿ ಆರೋಗ್ಯವಂತರಾಗಿ ಇರಬಹುದು ಮತ್ತು ಬಿ.ಬಿ.ಎಂ.ಪಿ.ಯಲ್ಲಿ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಿದ್ದಾರೆ ಮತ್ತು ವ್ಯಾಯಾಮ ಕೇಂದ್ರಗಳ ಇವೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಎಮ್.ಶಿವರಾಜು ಮಾತನಾಡಿ, ಸಾಧನೆ ಮಾಡಲು ಗುರಿ ಇರಬೇಕು ಮತ್ತು ಗುರುವಿನ ಮಾರ್ಗದರ್ಶವಿದ್ದರೆ ಸಾಧನೆ ಮಾಡಲು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ವೆಂಕಟೇಶ್ ರವರು ರೂಪಿಸಿ ತೋರಿಸಿದ್ದಾರೆ. ಪ್ಯಾರಾ ಒಲಂಪಿಕ್ ಸ್ಪರ್ಧೆಯಲ್ಲಿ 5 ಚಿನ್ನ 4 ಬೆಳ್ಳಿ 5 ಕಂಚು ಒಟ್ಟು 14 ಪದಕಗಳು ರಾಷ್ಟ ಮಟ್ಟದಲ್ಲಿ ನೂರಾರು ಪದಕಗಳನ್ನು ಗೆದ್ದಿದ್ದಾರೆ. ಬ್ಯಾಡ್ಮಿಂಟನ್, ಥ್ರೋಬಾಲ್, ಬ್ಯಾಸ್ಕೆಟ್ ಬಾಲ್, ಹಾಕಿ, ಫುಟ್ ಬಾಲ್ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್, ಏಕಲವ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ಭಾಜನರಾಗಿದ್ದಾರೆ ಎಂದರು.

ಪದ್ಮಶ್ರೀ ಪುರಸ್ಕೃತ ಕೆ.ವೈ.ವೆಂಕಟೇಶ್ ಅವರು ಅಂತರಾಷ್ಟೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಯುವ ಕ್ರೀಡಾಪಟುಗಳಿಗೆ ಕೈ.ವೈ.ವೆಂಕಟೇಶ್ ಅವರ ಸಾಧನೆ ಮಾರ್ಗದರ್ಶಕವಾಗಲಿ ಮತ್ತು ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಹ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.

Leave a Reply