ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ
ಸಮೀಕ್ಷೆಗೆ ಆ್ಯಪ್ ಬಳಿಸಿ
ಸಮೀಕ್ಷೆದಾರರಿಗೆ ಕಾಯದೆ, ಸ್ವಯಂ ಭಾಗವಹಿಸಿ, ಮಾಹಿತಿ ಭರ್ತಿ ಮಾಡಿ
ಧಾರವಾಡ: ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಜಾರಿಯಲ್ಲಿದ್ದು, ಸಾರ್ವಜನಿಕರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆದಾರರನ್ನು ಕಾಯಬೇಕಾಗಿಲ್ಲ. ಆನ್ಲೈನಲ್ಲಿ ಸುಲಭ ವಿಧಾನದಲ್ಲಿ ಸ್ವತಃ ನಿಮ್ಮ ಮೊಬೈಲ್ನಾಲ್ಲಿ ಅರ್ಜಿ ಭರ್ತಿ ಮಾಡಬಹುದು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಸಾರ್ವಜನಿಕರು https://kscbcselfdeclaratioin.karnataka.gov.in ವೆಬ್ಸೈ್ಟಿಗೆ ಭೇಟಿ ನೀಡಿ, ನಾಗರಿಕ ಎಂದು ಆಯ್ಕೆ ಮಾಡಬೇಕು. ಮೊಬೈಲ್ ನಂಬರ್ ಹಾಕಿ ಓಟಿಪಿ ಪಡೆದು, ನಮೂದಿಸಬೇಕು. ತದನಂತರ ಹೊಸ ಸಮೀಕ್ಷೆ ಆರಂಭಿಸಿ ಎಂದು ಆಯ್ಕೆ ಮಾಡಿ ನಿಮಗೆ ಕೊಟ್ಟಿರುವ ಯುಎಚ್ಐ.ಡಿ ಅನ್ನು ನಮೂದಿಸಿ ಪರಿಶೀಲನೆ ಮಾಡಬೇಕು.
ಒಂದು ವೇಳೆ ಯುಹೆಚ್ಐ ಡಿ ಇಲ್ಲದಿದ್ದರೆ ಐ ಡೋಂಟ್ ಹ್ಯಾವ್ ಯುಎಚ್ಐ ಡಿ ಎಂದು ಕ್ಲಿಕ್ ಮಾಡಬೇಕು. ನಂತರ ಹೆಸ್ಕಾಂ ಐಡಿ ಸಂಖ್ಯೆಯನ್ನು ನಮೂದಿಸಿದ ನಂತರ ಸಮೀಕ್ಷೆಯಲ್ಲಿ ಭಾಗವಹಿಸುವವರ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು.
ತದನಂತರ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ನ್ನುಖ ಆಯ್ಕೆ ಮಾಡಬೇಕು. ಒಂದು ವೇಳೆ ಆಧಾರ್ ಕಾರ್ಡ್ ಆಯ್ಕೆ ಮಾಡಿದರೆ ಓಟಿಪಿ ಬರುತ್ತೆ ಅಥವಾ ಕ್ಯೂಆರ್ ಕೋಡ್ ಮುಖಾಂತರ ಫೇಸ್ ಕ್ಯಾಪ್ಚರ್ ಅನ್ನು ಬಳಸಬಹುದು ನಂತರ ಗೆಟ್ ಡಾಟಾ ಅನ್ನು ಕ್ಲಿಕ್ ಮಾಡಿ ಮುಂದುವರೆಯಬೇಕು.
ಮನೆಯ ಮುಖ್ಯಸ್ಥನು ಇ ಕೆವೈಸಿ ನಂತರ ಮನೆಯ ಕುಟುಂಬದ ಸದಸ್ಯರನ್ನು ಸೇರಿಸಬೇಕು. ಸದಸ್ಯರನ್ನು ಸೇರಿಸಿ ಇ ಕೆವೈಸಿ ಪೂರ್ಣಗೊಳಿಸಿ, ರೇಷನ್ ಕಾರ್ಡ್ನುಲ್ಲಿ ಇರುವ ವ್ಯಕ್ತಿ ಮೃತಪಟ್ಟಿದ್ದರೆ, ಮೃತ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇನ್ನುಳಿದ ಕುಟುಂಬದ ಸದಸ್ಯರನ್ನು ಸೇರಿಸಿದ ಮೇಲೆ ಕುಟುಂಬದ ಮುಖ್ಯಸ್ಥನನ್ನು ಆಯ್ಕೆ ಮಾಡಿ ಗುರುತಿಸಿ, ನಿಮ್ಮ ಸರ್ವೆಯನ್ನು ಪ್ರಾರಂಭ ಮಾಡಬೇಕು.
ಪ್ರತಿಯೊಬ್ಬರ ಮಾಹಿತಿಯನ್ನು ಪಡೆದ ನಂತರ ಕುಟುಂಬದ ದಾಖಲು ಮಾಡಬೇಕು. ಕೆಲವು ಪ್ರಶ್ನೆಗಳಿಗೆ ಉತ್ತರ ಸಲ್ಲಿಸಿ, ಮೇಲೆ ಕ್ಲಿಕ್ ಮಾಡಿ ನಂತರ ನೀವು ಸಲ್ಲಿಸಿದ ಮಾಹಿತಿಯನ್ನು ಮತ್ತೊಮ್ಮೆ ಪೂರ್ಣವಾಗಿ ನೋಡಬಹುದು. ಒಂದು ಹಾಳೆಯಲ್ಲಿ ನಾನು ಸ್ವಯಂ ಪ್ರೇರಣೆಯಿಂದ ಸಮೀಕ್ಷೆಯಲ್ಲಿ ಭಾಗವಹಿಸಿ ಎಲ್ಲಾ ನಿಖರವಾದ ಮಾಹಿತಿಯನ್ನು ನೀಡಿದ್ದೇನೆ ಎಂದು ಬರೆದು ಆ ಫೋಟೋವನ್ನು ತೆಗೆದು ಅಪ್ಲೋಡ್ ಮಾಡಬೇಕು. ಸಬ್ಮಿಟ್ ಮಾಡಿದ ನಂತರ ಅಪ್ಲಿಕೇಶನ್ ನಂಬರ್ ಸಿಗುತ್ತದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.




