ಸಿರುಗುಪ್ಪ: ಫೆ.20 ರಂದು ಅಕ್ಕಿ ಬಹಿರಂಗ ಹರಾಜು
ಬಳ್ಳಾರಿ: ಸಿರುಗುಪ್ಪ ತಾಲ್ಲೂಕಿನ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಜಂಟಿ ತಂಡ ಒಟ್ಟು 26 ವಿವಿಧ ಪ್ರಕರಣಗಳಲ್ಲಿ ಅಕ್ರಮ ಪಡಿತರ ದಾಸ್ತಾನು ಹಾಗೂ ಅಕ್ರಮ ಪಡಿತರ ಧಾನ್ಯ ಸಾಗಾಣಿಕೆ/ದಾಸ್ತಾನನ್ನು ಜಪ್ತು ಮಾಡಿದ ಒಟ್ಟು 701.95 ಕ್ವಿಂಟಾಲ್ ಅಕ್ಕಿಯನ್ನು ಸಿರುಗುಪ್ಪ ಪಟ್ಟಣದ ಎಪಿಎಂಸಿ ಆವರಣದ ಕೆಎಫ್‌ಸಿಎಸ್‌ಸಿ ಸಗಟು ಗೋದಾಮಿನಲ್ಲಿ ಫೆ.20 ರಂದು ವಿವಿಧ ಷರತ್ತಿಗೊಳಪಟ್ಟು ಬಹಿರಂಗ ಹರಾಜು ಮಾಡಲಾಗುವುದು ಎಂದು ಸಿರುಗುಪ್ಪ ತಹಶೀಲ್ದಾರರು ತಿಳಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಭದ್ರತಾ ಠೇವಣಿ ನೀಡಿ ನೋಂದಾಯಿಸಿಕೊಂಡವರಿಗೆ ಮಾತ್ರ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಆಸಕ್ತಿಯುಳ್ಳ ಬಿಡ್‌ದಾರರು ರೂ.1,50,000/-ಗಳನ್ನು ತಹಶೀಲ್ದಾರರು, ಸಿರುಗುಪ್ಪ ಇವರ ಹೆಸರಲ್ಲಿ ಮುಂಗಡ ಭದ್ರತಾ ಠೇವಣಿ ತೆಗೆದುಕೊಂಡು ಸಿರುಗುಪ್ಪ ಆಹಾರ ನಿರೀಕ್ಷಕರಾದ ಮಹಾರುದ್ರ ಗೌಡ (ಮೊ.9986415163) ಹಾಗೂ ವಿಜಯ ಕುಮಾರ್(ಮೊ.9449738127) ಇವರ ಬಳಿ ನೋಂದಾಯಿಸಿಕೊಂಡು ಸ್ವೀಕೃತಿ ಪಡೆದುಕೊಳ್ಳಬೇಕು.
ಫೆ.17 ಸಂಜೆ 05.03 ರೊಳಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ತಾಲೂಕು ಕಚೇರಿ (ಆಹಾರ ಶಾಖೆ)ಗೆ ಸಂಪರ್ಕಿಸಬಹುದು.




