ಮರದ ಕೊಂಬೆ ಬಿದ್ದು ಅಸುನೀಗಿದ ಸಿದ್ದಪ್ಪ ಕುಟುಂಬಕ್ಕೆ 1 ಲಕ್ಷ ರೂ. ಸಹಾಯಧನ ಹಸ್ತಾಂತರ

5 years ago

ಜನ ಮತ್ತು ಬಿ.ಬಿ.ಎಂ.ಪಿ.ಅಧಿಕಾರಿ, ನೌಕರರ ಸಂಕಷ್ಟಕ್ಕೆ ನೆರವು ನೀಡುವುದು ಸಂಘದ ಉದ್ದೇಶ: ಅಮೃತ್ ರಾಜ್

ಬೆಂಗಳೂರು: ತಿಲಕ್ ನಗರ ನಿವಾಸಿ ಸಿದ್ದಪ್ಪ 13-09-2020ರಂದು ಮರದ ಕೊಂಬೆ ಬಿದ್ದು ಮೃತಪಟ್ಟಿದ್ದರು. ಅವರ ಪತ್ನಿ ಗೀತಾ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಎರ. ಸಿದ್ದಪ್ಪ ಅವರ ಮಗಳು ನಂದಿತಾ ವಿದ್ಯಾಭ್ಯಾಸ ಪಡೆಯಲು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾಳೆ.

ಇಂತಹ ಸಮಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೌಕರರ ಭವನದಲ್ಲಿ ಸಿದ್ದಪ್ಪ ಅವರ ಮಗಳು ನಂದಿತಾ ವಿದ್ಯಾಭ್ಯಾಸಕ್ಕೆ ಮತ್ತು ಗೀತಾ ಅವರ ಕ್ಯಾನ್ಸರ್ ಚಿಕಿತ್ಸೆಗೆ ರೂ. 1,00,000  ರೂಪಾಯಿ ಚೆಕ್ಕನ್ನು ವಿಶೇಷ ಆಯುಕ್ತ ದಯಾನಂದ್, ಅಧ್ಯಕ್ಷ ಅಮೃತ್ ರಾಜ್, ಹೆಚ್.ವಿ.ಆಶ್ವಥ್ ಹಸ್ತಾಂತರಿಸಿದರು.

ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಮರೇಶ್, ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಸಂತೋಷ್ ಕುಮಾರ್ ನಾಯಕ್, ಕೆ.ಮಂಜೇಗೌಡ, ನಲ್ಲಪ್ಪ, ಕೆ.ನರಸಿಂಹ ಮೊದಲಾದವರು ಚೆಕ್ ಹಸ್ತಾಂತರ ವೇಳೆ ಹಾಜರಿದ್ದರು.

ವಿಶೇಷ ಆಯುಕ್ತ ದಯಾನಂದ್ ಮಾತನಾಡಿ, ಸಿದ್ದಪ್ಪ ಅವರ ತಲೆ ಮೇಲೆ ಮರದ ಕೊಂಬೆ ಬಿದ್ದು ಅಸುನೀಗಿರುವುದು ವಿಷಾದದ ಸಂಗತಿ. ಆದರೆ ಅವರ ಕುಟುಂಬಕ್ಕೆ ಸಂಘದ ವತಿಯಿಂದ 1 ಲಕ್ಷ ರೂಪಾಯಿ ನೀಡಿರುವುದು ಉತ್ತಮ ಸಂಗತಿ. ಸಿದ್ದಪ್ಪ ಕುಟುಂಬದವರಿಗೆ ಬಿ.ಬಿ.ಎಂ.ಪಿ. ಮುಖ್ಯ ಆಯುಕ್ತರ ಜೊತೆಯಲ್ಲಿ ಚರ್ಚಿಸಿ, ಪರಿಹಾರ ನೀಡಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷದ ಅಮೃತ್ ರಾಜ್ ಮಾತನಾಡಿ, ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ಜನರ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದೆ. ಸಾಮಾಜಿಕ ಸೇವಾ ಸಂಘಟನೆಯಾಗಿದೆ. ನಾಗರಿಕರು ಮತ್ತು ಬಿ.ಬಿ.ಎಂ.ಪಿ. ನಡುವೆ ಉತ್ತಮ ಒಡನಾಟವಿದ್ದಾಗ ನಗರದಲ್ಲಿರುವ ಸಮಸ್ಯೆಗಳು ಸರಳವಾಗಿ ಪರಿಹಾರವಾಗುತ್ತವೆ ಎಂಬ ನಿಟ್ಟಿನಲ್ಲಿ ಸಂಘ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಆರೋಗ್ಯ ತಪಾಸಣಾ ಶಿಬಿರ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಕೊವಿಡ್-19 ಸಾಂಕ್ರಮಿಕ ರೋಗದ ಕಾರಣದಿಂದ ಮೊದಲನೇ ಹಾಗೂ ಎರಡನೇ ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಾವಿರಾರು ದಿನಸಿ ಕಿಟ್ ವಿತರಿಸಲಾಗಿದೆ ಎಂದರು.

ಕೊಡಗು ಮತ್ತು ಉತ್ತರ ಕರ್ನಾಟಕ ಪ್ರವಾಹದಿಂದ ಸಂಸ್ತತರಿಗೆ ಬೆಡ್ ಶೀಟ್, ದಿನಸಿ ಸಾಮಗ್ರಿಗಳನ್ನು ನೀಡಲಾಯಿತು. ಧರ್ಮಸ್ಥಳದಲ್ಲಿ ನೀರಿನ ಅಭಾವವಾದಾಗ 1 ಲಕ್ಷ ಲೀಟರ್ ಕುಡಿಯುವ ನೀರನ್ನು ಸಂಘದ ವತಿಯಿಂದ ರವಾನಿಸಲಾಯಿತು. ಜಯನಗರದಲ್ಲಿ ಸಿದ್ದಪ್ಪರವರ ತಲೆ ಮೇಲೆ ಮರದ ಕೊಂಬೆ ಬಿದ್ದು ಅಸುನೀಗಿದರು ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಇದೆ. ಸಿದ್ದಪ್ಪ ಪತ್ನಿ ಗೀತಾ ಕ್ಯಾನ್ಸರ್ ಪೀಡಿತರಾಗಿದ್ದು, 17 ವರ್ಷದ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ನಮ್ಮ ಸಂಘದ ವತಿಯಿಂದ 1 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ ಎಂದರು.

Leave a Reply