ಮೈಸೂರು: ಮೈಸೂರು ದಸರಾ ಮಹೋತ್ಸವ ಪ್ರಯುಕ್ತ, ಸೆಪ್ಟಂಬರ್ 27 ರಿಂದ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಭಿನಯದ ಚಿತ್ರಗಳ ಪ್ರದರ್ಶನಕ್ಕೆ ಒಂದು ದಿನ ಪೂರ್ಣ ಅವಕಾಶ ನೀಡಲಾಗಿದೆ.
ಇದೇ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3 ರವರೆಗೆ ಚಿತ್ರೋತ್ಸವ ನಡೆಯಲಿದೆ. ಇದರಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ಭಾರತೀಯ ಭಾಷೆಗಳ ಚಿತ್ರಗಳು ನಗರದ ಪ್ರಮುಖ ಚಿತ್ರ ಮಂದಿರಗಳಲ್ಲಿ ಪ್ರದರ್ಶನವಾಗಲಿವೆ.
ಚಲನಚಿತ್ರೋತ್ಸವದ ಮೊದಲ ದಿನ ನಟ ಪುನೀತ್ ರಾಜ್‍ಕುಮಾರ್ ಅಭಿನಯದ ಬೆಟ್ಟದ ಹೂವು, ಯುವರತ್ನ, ಅಂಜನೀಪುತ್ರ, ರಾಜಕುಮಾರ ಚಿತ್ರಗಳು ಪ್ರದರ್ಶನವಾಗುತ್ತವೆ.




