ಬೆಂಗಳೂರು: ಅಗ್ನಿ ಶೀಧರ್ ಅವರ ಆತ್ಮಕಥೆ ದಾದಾಗಿರಿಯ ಆ ದಿನಗಳು ಆಧಾರಿತ ಹೆಡ್ ಬುಶ್ ದಿ ರೈಸ್ ಆಂಡ್ ರೈಸ್ ಬೆಂಗಳೂರು ಅಂಡರ್ ವಲ್ಡ್ ಪಾರ್ಟ್ ಒಂದು ಸಿನೆಮಾ ಅಕ್ಟೋಬರ್ ಒಂದರಂದು ಬಿಡುಗಡೆಗೆ ಸಿದ್ಧವಾಗಿದೆ.
ಅಂಡರ್ ವಲ್ಡ್ ಡಾನ್ ಎಮ್. ಪಿ.ಜಯರಾಜ್ ಅವರ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅಗ್ನಿ ಶ್ರೀಧರ್ ಈ ಸಿನೆಮ ಬೆಂಗಳೂರಿನಲ್ಲಿ ಭೂಗತ ಜಗತ್ತು ಹೇಗೆ ಸಂಘಟಿತ ಗುಂಪಾಗಿ ಬೆಳೆಯಿತು ಎಂಬ ಥೀಮ್ ಹೊಂದಿದೆ ಎಂದು ತಿಳಿಸಿದರು.
ಮುಖ್ಯ ಭೂಮಿಕೆಯಲ್ಲಿ ಆದಿ,ವಶಿಷ್ಠ ಸಿಂಹ, ಶೃತಿ ಹರಿಹರನ್,ರಘು ಮುಖರ್ಜಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಅಗ್ನಿ ಶ್ರೀಧರ್,ಶೂನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪ್ರಚಾರದ ವೇಳೆಯಲ್ಲಿ ಡಾಲಿ ಧನಂಜಯ್ ಬೆಲ್ ಬಾಟಮ್ ಪ್ಯಾಂಟ್ ಧರಿಸಿ ಜಯರಾಜ್ ಲುಕ್ ನಲ್ಲಿ ಕಂಗೊಳಿಸಿದರು.



