ಬಹುಭಾಷಾ ಪ್ರಯೋಗಾಲಯಕ್ಕೆ ಬಂದ ಮೊದಲ ಕಂಪ್ಯೂಟರ್

4 years ago

ಬಹುಭಾಷಾ ಪ್ರಯೋಗಾಲಯಕ್ಕೆ ಬಂದ ಮೊದಲ ಕಂಪ್ಯೂಟರ್

ಆತ್ಮೀಯರೇ, ಈಗ್ಗೆ ಎರಡು ವರ್ಷಗಳಿಂದ ನಾನು ಆಗಾಗ ನಮ್ಮ ಬಹುಭಾಷಾ ಪ್ರಯೋಗಾಲಯಕ್ಕೆ ಇಪ್ಪತ್ತು ಕಂಪ್ಯೂಟರ್ ಅಗತ್ಯವಿದೆ. ನೀವು ಬಳಸಿಬಿಟ್ಟ ಅಥವಾ ಹೊಸ ಕಂಪ್ಯೂಟರ್ ಯಾರಾದರೂ ನೀಡುವವರಿದ್ದರೆ ಕೊಡಿ ಅಂತ ವಿನಂತಿಸುತ್ತಲೇ ಇದ್ದೆ.

ಹೀಗೆ ವಿನಂತಿಸಿದಾಗ ಸ್ಪಂದಿಸಿದವರು ಸಂತೋಷಕುಮಾರ ರವರು ಮೊದಲಿಗರು. ಬೆಂಗಳೂರಿನಲ್ಲಿ ಅವರಿಂದ ಕಂಪ್ಯೂಟರ್ ಕಲೆಕ್ಟ್ ಮಾಡಿಕೊಳ್ಳಬೇಕಿತ್ತು. ಕೊರೊನಾ ಕಾರಣದಿಂದ ಆಗಲಿಲ್ಲ.

ನನ್ನ ವಿನಂತಿಯನ್ನ ನೆನಪಿಟ್ಟುಕೊಂಡು ಅವರೇ ಬೆಂಗಳೂರಿನಿಂದ ಎಲ್ಲ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಒಂದು ಕಂಪ್ಯೂಟರ್ ಅನ್ನು ಕಳುಹಿಸಿಕೊಟ್ಟಿದ್ದಾರೆ.

ಅವರಿಗೆ ನಮ್ಮ ಶಾಲೆ ಎಸ್ ಡಿ ಎಂ ಸಿ ಮತ್ತು ಮಕ್ಕಳ ಕಡೆಯಿಂದ ತುಂಬುಹೃದಯದ ಧನ್ಯವಾದಗಳು.

ಮತ್ತೆ ಯಾರಾದರೂ ನಿಮ್ಮ ಸುಸ್ಥಿತಿಯಲ್ಲಿರುವ ಹಳೆಯ ಅಥವಾ ಹೊಸ ಕಂಪ್ಯೂಟರ್ ನೀಡುವವರಿದ್ದರೆ ದಯಮಾಡಿ ಕೊಡಿ. ನಮ್ಮ ಮಕ್ಕಳ ಬಹುಭಾಷಾ ಪ್ರಯೋಗಾಲಯಕ್ಕೆ ಬಳಸಿಕೊಳ್ಳುತ್ತೇವೆ.

– ವೀರಣ್ಣ ಮಡಿವಾಳರ, ಶಿಕ್ಷಕರು
9972120570

Leave a Reply