ರಾಜ್ಯ ಒಕ್ಕಲಿಗರ ಸಂಘದ ಭೂಮಿ ಉಳಿಸಲು ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಮನವಿ

5 years ago

ಬೆಂಗಳೂರು: ಬಿಡದಿಯ ತೋಟದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ಅವರನ್ನು ರಾಜ್ಯ ಒಕ್ಕಲಿಗರ ಸಂಘದ ಆಸ್ತಿ ಉಳಿವಿನ ಹೋರಾಟ ಸಮಿತಿಯ ಪದಾಧಿಕಾರಿಗಳು ಭೇಟಿ ಮಾಡಿ ಚರ್ಚೆ ನಡೆಸಿದರು.

ಶ್ರೀಗಂಧದ ಕಾವಲಿನಲ್ಲಿ “ರಾಜ್ಯ ಒಕ್ಕಲಿಗರ ಸಂಘ” ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಳೆದ 54 ವರ್ಷಗಳಿಂದ ಅನುಭವದಲ್ಲಿರುವ ಭೂಮಿ ಉಳಿಸಲು ಮುಖ್ಯಮಂತ್ರಿಯವರನ್ನು ಒತ್ತಾಯಿಸಲು ಮನವಿ ಸಲ್ಲಿಸಿದರು. ಈ ವೇಳೆ ಕುಮಾರಸ್ವಾಮಿ ತಮ್ಮ ಆಪ್ತ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲು ನಿರ್ದೇಶನ ನೀಡಿದರು.

ಸಮಿತಿಯ ಪದಾಧಿಕಾರಿಗಳಾದ ಕೆ.ಎನ್.ಲಿಂಗೇಗೌಡ, ಪ್ರೊ.ಕೆ.ಮಲ್ಲಯ್ಯ, ಆಲೂರು ನಾಗಪ್ಪ,ಎ.ಎಲ್ .ರಾಜು,ಎಂ. ಪುಟ್ಟಸ್ವಾಮಿ ತೌಟನಹಳ್ಳಿ, ಎಂ.ಗೋಪಾಲ್, ವೆಂಕಟಪ್ಪ, ಚಂದ್ರಶೇಖರ್, ಜಗದೀಶ್ ಮುಂತಾದವರು ಭಾಗವಹಿಸಿದ್ದರು.

Leave a Reply