ಕೋಮುವಾದಿ ಮನಃಸ್ಥಿತಿಯಿಂದ ದೇಶಕ್ಕೆ ಕೆಟ್ಟ ಹೆಸರು: ಸುಪ್ರೀಂ ಕೋರ್ಟ್

5 years ago

ದೆಹಲಿ: ಕೆಲವು ಖಾಸಗಿ ಸುದ್ದಿ ವಾಹಿನಿಗಳಲ್ಲಿ ತೋರಿಸಲಾಗುತ್ತಿರುವ ಸುದ್ದಿಗಳೂ ಸಹ ಕೋಮುದನಿಯನ್ನು ಹೊಂದಿರುತ್ತವೆ. ಇದು ದೇಶಕ್ಕೆ ಕೆಟ್ಟ ಹೆಸರು ತರುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ ಜಮೀಯತ್ ಉಲೆಮಾ-ಐ-ಹಿಂದ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮೇಲಿನ ಅಭಿಪ್ರಾಯಪಟ್ಟಿದೆ.

ಮರ್ಕಜ್ ನಿಜಾಮುದ್ದೀನ್ ನ ಧಾರ್ಮಿಕ ಸಮ್ಮೇಳನದ ಕುರಿತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದಕ್ಕೆ ತಡೆ ನೀಡಲು ಹಾಗೂ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯನ್ನು ಸಲ್ಲಿಸಲಾಗಿತ್ತು.

ಸುಳ್ಳು ಸುದ್ದಿಗಳನ್ನು ಹರಡುವ ಸುದ್ದಿ ವಾಹಿನಿಗಳನ್ನು ನಿಯಂತ್ರಿಸಲು ಯಾವುದಾದರೂ ಪ್ರಯತ್ನ ನಡೆದಿದೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿದ್ದು, ಸಾಮಾಜಿಕ ಜಾಲತಾಣ ಪ್ರಬಲ ದನಿಗಳನ್ನು ಮಾತ್ರ ಕೇಳುತ್ತವೆ. ನ್ಯಾಯಾಧೀಶರ ವಿರುದ್ಧ, ಸಂಸ್ಥೆಯ ವಿರುದ್ಧ ಯಾವುದೇ ಹೊಣೆಗಾರಿಕೆ ಇಲ್ಲದೇ ಹಲವು ವಿಷಯಗಳನ್ನು ಬರೆಯಲಾಗುತ್ತದೆ ಎಂದು ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಎ.ಎಸ್.ಬೋಪಣ್ಣ ಅವರನ್ನೊಳಗೊಂಡಿದ್ದ ಪೀಠ ಅಭಿಪ್ರಾಪಟ್ಟಿದೆ.

ಸುಳ್ಳು ಸುದ್ದಿಗಳ ಮೇಲೆ, ಸುದ್ದಿ ಜಾಲತಾಣಗಲ್ಲಿ ನಡೆಯುತ್ತಿರುವ ಅಪಪ್ರಚಾರ, ಯೂಟ್ಯೂಬ್ ವಾಹಿನಿಗಳ ಮೇಲೆ ನಿಯಂತ್ರಣವಿಲ್ಲ. ಯೂಟ್ಯೂಬ್ ನಲ್ಲಿ ಸುಳ್ಳು ಸುದ್ದಿಗಳು ಹಂಚಿಕೆಯಾಗುತ್ತಿವೆ. ಯೂಟ್ಯೂಬ್ ನಲ್ಲಿ ಯಾರು ಬೇಕಾದರೂ ಚಾನಲ್ ತೆರೆಯಬಹುದು ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.

Leave a Reply