ಕರ್ನಾಟಕ ಸೇವಾದಳಕ್ಕೆ ಎಂ.ರಾಮಚಂದ್ರ ಮುಖ್ಯ ಸಂಘಟಕರಾಗಿ ನೇಮಕ

5 years ago

ದೆಹಲಿ/ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ನೂತನ ಮುಖ್ಯ ಸಂಘಟಕರಾಗಿ ಹಿರಿಯ ಕಾಂಗ್ರೆಸ್ ಮುಖಂಡ, ಬೆಂಗಳೂರಿನ ರಾಮಚಂದ್ರ ಎಂ. ಅವರು ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆದೇಶದಂತೆ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಲಾಲಜಿ ದೇಸಾಯಿ ಅವರ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.

ರಾಮಚಂದ್ರ ಎಂ. ಅವರ ಕಿರು ಪರಿಚಯ

ನೂತನ ಮುಖ್ಯ ಸಂಘಟಕ ರಾಮಚಂದ್ರ ಎಂ. ಅವರು 1993 ರಿಂದ 2003ರವರೆಗೆ  ರಾಜ್ಯ ಸೇವಾದಳದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇದಕ್ಕೂ ಪೂರ್ವದಲ್ಲಿ ರಾಮಚಂದ್ರ ಅವರು ಯುಥ್ ಕಾಂಗ್ರೆಸ್ ನಲ್ಲಿ ಬೆಂಗಳೂರು ನಗರದ ಬ್ಲಾಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. NSUI ನಲ್ಲಿ ಬ್ಲಾಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.‌ ಹಿಂದಿನ‌ ರಾಜ್ಯಸಭಾ ಸದಸ್ಯರು, ಅಖಿಲ‌ ಭಾರತ ಕಾಂಗ್ರೆಸ್ಸಿನ ಸೇವಾದಳದ ಅಧ್ಯಕ್ಷರು  ಆಗಿದ್ದ ಬಿ.ಕೆ.ಹರಿಪ್ರಸಾದ್ ಅವರು ಸೇವಾದಳದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಮಚಂದ್ರ ಅವರು ಬೆಂಗಳೂರು ನಗರ ಸೇವಾದಳದ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿಸ್ದಾರೆ. ಹರಿಪ್ರಸಾದ್ ಅವರು ದೆಹಲಿ AICSD ಅಧ್ಯಕ್ಷರಾದ ಸಂದರ್ಭದಲ್ಲಿ ರಾಮಚಂದ್ರಪ್ಪ ಅವರು ಕರ್ನಾಟಕ ರಾಜ್ಯ ರಾಜ್ಯ ಉಸ್ತುವಾರಿಗಳಾಗಿ ಸೇವೆಸಲ್ಲಿಸ್ದಾರೆ. ಇದರ ಜೊತೆಗೆ 2002 (ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಉಸ್ತುವಾರಿಗಳಾಗಿ ಸೇವೆಸಲ್ಲಿಸುವ ಅನುಭವ ಹೊಂದಿದ್ದಾರೆ. KPCC ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದಾರೆ.

ರಾಮಚಂದ್ರ ಅವರಿಗೆ AICSD ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಸೇವಾದಳದ ಉಸ್ತುವಾರಿ ಬಲರಾಮ್ ಸಿಂಗ್ ಬಧೋರಿಯಾ, ಕಾರ್ಯಾಧ್ಯಕ್ಷ ಕಿರಣ ಮೊರಸ್ ಹಾಗೂ ಇನ್ನಿತರರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಪ್ರಸ್ತುತ ಕೆಪಿಸಿಸಿಯಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.

Leave a Reply