ಬೆಂಗಳೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ (NSUI) ವತಿಯಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಎನ್.ಎಸ್.ಯು.ಐ. ಉಪಾಧ್ಯಕ್ಷ ಜಯೇಂದ್ರರ್ ಸಾಯಿ, ಪ್ರಧಾನ ಕಾರ್ಯದರ್ಶಿ ಮನೀಶ್ ಜಿ.ರಾಜ್ ಮೊಹಮ್ಮದ್ ಆಫೀದ್, ಮಾರುತಿ, ದೀಪಕ್ ಗೌಡ, ರಾಹುಲ್ ಗೌಡ, ವಿಶ್ವವಿದ್ಯಾನಿಲಯದ ಸಂಯೋಜಕ ಹೃತಿಕ್, ವರುಣ್ ಗೌಡ, ರಿತ್ವಿಕ್ ಬಾಲ ಹಾಗೂ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ
ಯು.ಜಿ.ಸಿ. ಮಾರ್ಗಸೂಚಿಯನ್ವಯ 2020-21ನೇ ಶೈಕ್ಷಣಿಕ ವರ್ಷಕ್ಕೆ ಬಡ್ತಿ ಹಾಗೂ ಇಂಟರ್‌ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 2021-22ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೆಲವು ವಿದ್ಯಾರ್ಥಿಗಳ ಪ್ರಕಾರ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರಿಗಣಿಸುವ ಶೈಕ್ಷಣಿಕ ದಿನಚರಿಯ ವರ್ಷ ಯು.ಜಿ.ಸಿ.ಯವರು ಮತ್ತು ಕರ್ನಾಟಕ ರಾಜ್ಯ ಸರ್ಕಾರ ರೂಪಿಸಿರುವ ಶೈಕ್ಷಣಿಕ ದಿನಚರಿಯ ವರ್ಷಕ್ಕೆ ಪೂರಕವಾಗಿಲ್ಲ. ಇತರ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ, ಕ.ರಾ.ಕಾ.ವಿ.ಯ ವಿದ್ಯಾರ್ಥಿಗಳು ಒಂದು ಸೆಮೆಸ್ಟರ್ ಹಿಂದುಳಿದಿದ್ದಾರೆ ಎಂದು ಎನ್ ಎಸ್ ಯು ಐ ಆರೋಪಿಸಿದೆ.
ಕರ್ನಾಟಕ ರಾಜ್ಯದಲ್ಲಿನ ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಕೆ ಮಾಡಿದರೆ, ಕ.ರಾ.ಕಾ.ವಿ.ದ ಶೈಕ್ಷಣಿಕ ವರ್ಷವನ್ನು ವಿಳಂಬವಾಗಿ ಪ್ರಾರಂಭಿಸುವುದಿರಿಂದ, ಕ.ರಾ.ಕಾ.ವಿ.ದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರತೆಗೂ ದೂರಗಾಮಿಯಾಗಿ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.
ಇಂಟರ್‌ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ (ಒ.ಡಿ.ಡಿ. ಸೆಮೆಸ್ಟರ್) ಯುಜಿ.ಸಿ. ಮಾರ್ಗಸೂಚಿ ಮತ್ತು ಕರ್ನಾಟಕ ಸರ್ಕಾರದ ಮಾರ್ಗಸೂಚಿಯಂತೆ (50-50 ಅನುಪಾತದ ಮೌಲ್ಯಮಾಪನದಂತೆ) ನೂತನ/ಹೊಸದಾಗಿ ಪ್ರಾರಂಭಿಸಬೇಕೆಂದು ಕೋರುತ್ತೇವೆ. ಶೈಕ್ಷಣಿಕ ವರ್ಷದ ಗೊಂದಲ, ಹಿಂದಿನ ಸೆಮೆಸ್ಟರ್ ಫಲಿತಾಂಶಗಳಲ್ಲಿ ಗೊಂದಲ ಮೂಡಿರುವುದು (ಮಾರ್ಚ್-ಜುಲೈ 2021ರಲಿನ ಓಡಿಡಿ ಸೆಮೆಸ್ಟರ್) ಹಲವಾರು ವಿದ್ಯಾರ್ಥಿಗಳು ಹೇಳುವಂತೆ, ಓ.ಡಿ.ಡಿ. ಸೆಮಿಸ್ಟರ್ ಫಲಿತಾಂಶಗಳ ಪ್ರಕಟಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಲವಾರು ರೀತಿಯಲ್ಲಿ ಗೊಂದಲಗಳನ್ನು ಈ ರೀತಿಯಲ್ಲಿ ಎದುರಿಸುತ್ತಿದ್ದಾರೆ ಎಂದಿದೆ.
ಫಲಿತಾಂಶಗಳು ಪ್ರಕಟವಾದ 2 ತಿಂಗಳ ನಂತರವೂ ಹಲವು ವಿದ್ಯಾರ್ಥಿಗಳಿಗೆ ಥಿಯರಿ ಅಂಕಗಳನ್ನು ನಂತರ ಪ್ರಕಟಿಸಲಾಗುವುದು To be annoubced Later (TBAL) ಎಂಬುದಾಗಿ ತೋರಿಸಲಾಗಿದೆ. ಹಲವು ವಿದ್ಯಾರ್ಥಿಗಳಿಗೆ ಅಂಕಪಟ್ಟಿಯಲ್ಲಿ ಸಂಬಂಧಪಟ್ಟ ವಿಷಯಗಳಲ್ಲಿ ಥಿಯರಿ ಅಂಕಗಳನ್ನು ತೋರಿಸಿದ್ದು, ಅದೇ ವಿಷಯಕ್ಕೆ ಸಂಬಂಧಪಟ್ಟಂತೆ ಆಂತರಿಕ ಅಂಕಪಟ್ಟಿಯಲ್ಲಿ ತಿದ್ದಲಾಗಿದೆ. ಕೆಲವು ವಿದ್ಯಾರ್ಥಿಗಳಿಗೆ, ಹಲವು ವಿಷಯಗಳ (ಥಿಯರಿ+ಆಂತರಿಕ) ಫಲಿತಾಂಶವನ್ನು ಅಂಕಪಟ್ಟಿಯಿಂದ ಕೈಬಿಡಲಾಗಿದ್ದು, ಫಲಿತಾಂಶ ಪ್ರಕಟವಾದ 2 ತಿಂಗಳ ನಂತರವೂ ನವೀಕರಣವಾಗಿಲ್ಲ ಎಂದಿದೆ.
ಕರ್ನಾಟಕ ಉಚ್ಚನ್ಯಾಯಾಲಯದಲ್ಲಿನ ದಾವೆ 30.14389/2021, 2922/2021 ಮತ್ತು 15571/201 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿದ್ದು, ಅದರಂತೆ ಸೆಮಿಸ್ಟರ್ ಪರೀಕ್ಷೆಗಳಿಗೆ 50-50 ಅನುಪಾತದಲ್ಲಿ ಮೌಲ್ಯಮಾಪನ ನಡೆದಿದ್ದರೂ ಸಹ, ಹಲವು ವಿದ್ಯಾರ್ಥಿಗಳಿಗೆ ಜೂನ್ 2020ರ ಫಲಿತಾಂಶವು ಇನ್ನೂ ತಲುಪಿಲ್ಲ, ಅಂಕಪಟ್ಟಿ ಅಪ್‌ಲೋಡ್ ಆಗಿಲ್ಲ. ಕೆಲವು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸದರಿ ಅಂಕಪಟ್ಟಿಯಲ್ಲಾದ ಲೋಪದೋಷಗಳಿಂದಾಗಿ ಅವರು ವೃತ್ತಿಪರ ಸದರಿ ಅಂಕಪಟ್ಟಿಯಲ್ಲಾದ ಪದವಿ ಪ್ರಮಾಣಪತ್ರಗಳನ್ನು ಪಡೆಯಲಾಗದಂತೆ ನಿರಾಕರಿಸುವಂತಾಗುತ್ತದೆ ಎಂದಿದೆ.
ಆದ್ದರಿಂದ, ಇನ್ನೂ ಪ್ರಕಟವಾಗದ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ತಕ್ಷಣ ಪ್ರಕಟಿಸುವಂತೆ ಮತ್ತು ಅಂಕಪಟ್ಟಿಗಳಲ್ಲಿ (2.ಬಿ, 2ಸಿ) ಸದರಿ ತಾಂತ್ರಿಕ ದೋಷಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡುವಂತೆ ಒತ್ತಾಯಿಸಿದೆ.
ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವಿಕೆ
ಹಲವು ವಿದ್ಯಾರ್ಥಿಗಳ ಪ್ರಕಾರ, ಹಿಂದಿನ ಸೆಮಿಸ್ಟರ್ ಪರೀಕ್ಷೆಗಳಿಗೆ ಅಂತಿಮಗೊಳಿಸಲಾದ ಪರೀಕ್ಷಾ ವೇಳಪಟ್ಟಿಯನ್ನು ಪರೀಕ್ಷೆಗಳು ಶುರುವಾಗುವ ಕೇವಲ 10 ದಿನಗಳ ಮೊದಲು ಬಿಡುಗಡೆ ಮಾಡಲಾಯಿತು. ಭವಿಷ್ಯದಲ್ಲಿ ಇನ್ನಷ್ಟು ಮುಂಚಿತವಾಗಿ ವೇಳಾಪಟ್ಟಿಯನ್ನು ಒದಗಿಸಿಬೇಕು ಎಂದು ಆಗ್ರಹಿಸಿದೆ.




