ದೆಹಲಿ: ತನ್ನ ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ನೂತನ ಕ್ರಮಕ್ಕೆ ಮುಂದಾಗಿರುವ SBI, ಎಟಿಎಂನಲ್ಲಿ 10,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆಯುವ ವೇಳೆ OTP ನಮೂದಿಸುವುದು ಕಡ್ಡಾಯವಾಗಿದೆ. ಈ ಮೂಲಕ ಗ್ರಾಹಕರ ಹಿತ ಕಾಯಲು ಮುಂದಾಗಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಸಮೂಹ ಪಾಲಿಸುತ್ತಿರುವ ಇದೇ ಮಾದರಿಯನ್ನು ಮುಂದಿನ ದಿನಗಳಲ್ಲಿ ಉಳಿದ ಬ್ಯಾಂಕ್ ಗಳು ಕೂಡ ಅನುಸರಿಸುವ ಸಾಧ್ಯತೆ ಇದೆ.
SBI ಪ್ರಕಾರ 10,000 ರೂ.ಗಳನ್ನು ಎಟಿಎಂಗಳಲ್ಲಿ ಪಡೆಯುವ ವೇಳೆ ಒಟಿಪಿ ನಮೂದು ಕಡ್ಡಾಯ ನಿಯಮ ಗ್ರಾಹಕರಿಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ. ಎಟಿಎಂನಲ್ಲಿ ಹಣ ಬಿಡಿಸುವ ವೇಳೆಯಲ್ಲಿ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ 4 ಅಂಕಿಗಳ ಒಟಿಪಿಯನ್ನು ಎಟಿಎಂನಲ್ಲಿ ನಮೂದಿಸಬೇಕು. ಅನಂತರವೇ ಎಟಿಎಂನಲ್ಲಿ ಹಣ ಸಿಗಲಿದೆ. ಮತ್ತು ಇದು ಕೇವಲ ಒಂದು ಬಾರಿ ಮಾತ್ರ ಉಪಯೋಗಕ್ಕೆ ಲಭ್ಯವಿರುತ್ತದೆ. ಪ್ರತಿ ಹೆಚ್ಚುವರಿ ವಹಿವಾಟಿಗೆ ಹೊಸ ಒಟಿಪಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ SBI ತನ್ನ ಗ್ರಾಹಕರಲ್ಲಿ ಎಟಿಎಂ ಮತ್ತು ಇನ್ನಿತರೆ ಹಣಕಾಸು ಅವ್ಯವಹಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ತಮ್ಮ ಬ್ಯಾಂಕ್ ಶಾಖೆಗಳಲ್ಲಿ ಜಾಗೃತಿ ಮೂಡಿಸುತ್ತಿದೆ.
ಒಟಿಪಿ ಬಳಸಿ ಹಣ ಪಡೆಯುವುದು ಹೇಗೆ?
SBI ಎಟಿಎಂನಲ್ಲಿ 10,000 ಮತ್ತು ಅದಕ್ಕಿಂತ ಹೆಚ್ಚು ಹಣವನ್ನು ಪಡೆಯಲು ಡೆಬಿಟ್ ಕಾರ್ಡ್ ಮತ್ತು ಬ್ಯಾಂಕ್ ನಲ್ಲಿ ನೋಂದಾಯಿಸಿದ ಮೊಬೈಲ್ ಅಗತ್ಯ
ಡೆಬಿಟ್ ಕಾರ್ಡ್ ಅನ್ನು ಎಟಿಎಂ ಒಳಗೆ ಹಾಕಿದ ನಂತರ ಎಟಿಎಂ ಪಿನ್ ನಮೂದಿಸಬೇಕು. 10,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ನಮೂದಿಸಿದ ನಂತರ ಒಟಿಪಿ ಸಂದೇಶ ನಿಮ್ಮ ಮೊಬೈಲ್ ಗೆ ಬರುತ್ತದೆ.
ಮೊಬೈಲ್ ಗೆ ಬಂದ SMS ಸಂದೇಶದಲ್ಲಿರುವ ಒಟಿಪಿಯನ್ನು ಎಟಿಎಂನಲ್ಲಿ ನಮೂದಿಸಬೇಕು.
ಒಟಿಪಿ ನಮೂದಿಸಿದ ನಂತರ ನಿಮ್ಮ ವಹಿವಾಟು ಪೂರ್ಣವಾಗುತ್ತದೆ




